ನಿಮ್ಮನೇ ಬಾಗಿಲಿಗೆ ನಾವು ಬರ್ತಿವಿ, ಸಮಸ್ಯೆಗೆ ಸ್ಥಳದಲ್ಲಿ ಪರಿಹಾರ ಕೊಡತ್ತಿವಿ: ತಹಶೀಲ್ದರ್ ಎನ್.ರಘುಮೂರ್ತಿ

 

*ಕಂದಾಯ ಅಧಿಕಾರಿಗಳ ಹೆಜ್ಜೆ ಸಮಸ್ಯೆಯ ಕಡೆ* ಬ

ಚಳ್ಳಕೆರೆ : ನಿಮ್ಮನೇ ಬಾಗಿಲಿಗೆ ನಾವು ಬರ್ತಿವಿ, ತಪ್ಪದೇ ಸಮಸ್ಯೆಗಳ ಅರ್ಜಿ ತಂದು ಬಗೆಹರಿಸಿಕೊಳ್ಳಿ, ಎಲ್ಲಾರೂ ಕೈಜೋಡಿಸಿ ಸಮಸ್ಯೆ ಮುಕ್ತ ಹಳ್ಳಿ ಕಡೆ  ಹೆಜ್ಜೆ ಹಾಕೋಣ ಎಂಬ ಮಾತುಗಳನ್ನು ಚಳ್ಳಕೆರೆ ತಹಶೀಲ್ದರ್ ಎನ್‌.ರಘುಮೂರ್ತಿ ನುಡಿದರು.

ಹೌದು ಇಡೀ ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮವನ್ನು ಇಂದು ಚಳ್ಳಕೆರೆ ತಾಲೂಕು ಆಡಳಿತ ಮಾಡಿದೆ . ತಾಲ್ಲೂಕು ಆಡಳಿತದ ವತಿಯಿಂದ ಮನೆ-ಮನೆಗೆ ಅಧಿಕಾರಿಗಳು ಭೇಟಿ ಎನ್ನುವಂತ ವಿನೂತನ ಕಾರ್ಯಕ್ರಮವನ್ನು ಗುರುವಾರ  ಹಿರೇಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರ, ಜಿಲ್ಲಾಧಿಕಾರಿಗಳ, ಶಾಸಕರುಗಳ ಸೂಚನೆ ಮೇರೆಗೆ ಚಳ್ಳಕೆರೆ  ತಾಲೂಕಿನ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹಳ್ಳಿಗಳ ಸೇರಿ ಈ  ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದರ್ ತಿಳಿಸಿದರು.  ಕಂದಾಯ ಅಧಿಕಾರಿಗಳು ಗುರುವಾರ ಬೆಳಿಗ್ಗೆ 10 ಗಂಟೆಗೆ ಹಿರೇಹಳ್ಳಿ ಗ್ರಾಮದ ಪ್ರತಿಯೊಂದು ಮನೆ-ಮನೆಗೆ ಭೇಟಿ ನೀಡಿ ಆಧಾರ ಕಾರ್ಡ್, ಗುರುತಿನ‌ ಚೀಟಿ, ರೇಷನ್ ಕಾರ್ಡ್, ಪಹಣಿಗಳ ಸಮಸ್ಯೆ, ವೃದ್ಯಾಪ್ಯ ವೇತನ, ಅಂಗವಿಕಲರ ವೇತನಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳ ಒಟ್ಟು 150 ಅರ್ಜಿಗಳ  ಮಾಹಿತಿಯನ್ನು  ಕುಟುಂಬಸ್ಥರಿಂದ  ಪಡೆದುಕೊಂಡಿದ್ದೇವೆ.

ಅದೇ ರೀತಿಯಾಗಿ ಗ್ರಾಮದ ಶಾಲೆಯಲ್ಲಿ‌ ಗ್ರಾಮಕ್ಕೆ ಬೇಕಾದ ಮೂಲಭೂತ ಸಮಸ್ಯೆಗಳ ಕುರಿತು‌ ತಹಶೀಲ್ದರ್  ಅವರು ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.

ಈ   ಕಾರ್ಯಕ್ರಮವು ವಿನೂತನವಾದ ಕಾರ್ಯಕ್ರಮ ವಾಗಿದ್ದು ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಆಡಳಿತವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ, ಸಾರ್ವಜನಿಕರು ತಮ್ಮ ಹೊಲದ ಸಮಸ್ಯೆ, ಪಹಣಿ, ವೃದ್ಯಾಪಿ ವೇತನ,ಬಗರ್ ಹುಕ್ಕಂ. ಸಂಧ್ಯಾಸುರಕ್ಷಾ ಯೋಜನೆ, ವಿಧಾವ ವೇತನ , ಪೌತಿ ಖಾತೆ ಬದಲಾವಣೆ ಇತರೆ ಮೂಲಭೂತ ಸಮಸ್ಯೆಗಳು ಬಗೆಹರಿಸಕೊಳ್ಳಲು ಸುಲಭವಾದ ವೇದಿಕೆ ಎಲ್ಲರೂ ಸಮಸ್ಯೆಗಳ ಒತ್ತು ತನ್ನಿ ಇಲ್ಲಿಯೇ ಬಗೆಹರಿಸಲಾಗುವುದು ಎಂದು ತಹಶೀಲ್ದಾರ್ ಕರೆ ನೀಡಿದರು.

ಗ್ರಾಮದಲ್ಲಿ‌ ಜಮೀನಿನ ವಾರಸುದಾರರು ಮರಣ ಹೊಂದಿದರು ಖಾತೆಗಳು ಬದಲಾವಣೆಯಾಗಿಲ್ಲ ಇಂತಹ ಖಾತೆಗಳನ್ನು ಅವರ ಮಕ್ಕಳಿಗೆ ಬದಲಾವಣೆ ಮಾಡಿಕೊಡಲಾಗುವುದು, ಇನ್ನು ವಯೋ ವೃದ್ದರಿಗೆ ವೃದ್ಯಾಪಿ ವೇತನವನ ಮಾಡಿಸಿಕೊಡಲಾಗುವುದು, ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯಗಳ ಸಮಸ್ಯೆಗಳನ್ನು ಬಗೆಹರಿಸಿ ಸಮಸ್ಯೆ ಮುಕ್ತ ಹಳ್ಳಿಯಾಗಿ ಮಾಡಲಾಗುವುದು ಎಂದು ಹೇಳಿದರು.

ಕೋವಿಡ್ ಮೂರನೇ ಅಲೆಗೆ ಸಿದ್ದತೆ: ಕೋವಿಡ್ ಮೂರನೇ ಅಲೆಯು ಅಪ್ಪಳಿಸಲಿದ್ದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಮೂನ್ಸೂಚನೆ ಇದ್ದ ಕಾರಣ ಪ್ರತಿ ಮನೆಯಲ್ಲಿ ಮಕ್ಕಳ ಮಾಹಿತಿ ಮತ್ತು ಸ್ಥಿತಿಗತಿ ಅರಿತು ಮಾಹಿ ಪಡೆದಿದ್ದೇವೆ.

ಪ್ರತಿ ವಾರ ಸಹ ಒಂದು ಹೋಬಳಿಯ ಒಂದು ಹಳ್ಳಿಯಲ್ಲಿ ಸಮಸ್ಯೆಗಳನ್ನು ಆಲಿಸುತ್ತೇವೆ. ಯಾವ ಕಾರಣಕ್ಕೂ ರೈತರು, ಕಾರ್ಮಿಕರು, ವೃದ್ದರು, ಅಂಗವಿಕಲರು ನಗರಕ್ಕೆ ಸಮಸ್ಯೆಗಳನ್ನು  ಒತ್ತು ಬರದಂತೆ ಆ ಊರಿನಲ್ಲಿ ಪರಿಹಾರ ನೀಡುವ ಕೆಲಸ ಮಾಡುತ್ತೇವೆ.

ಈ ವೇಳೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours