ನಾವು ತಿಂದು ಬಿಸಾಡುವ ಬಾಳೆಹಣ್ಣಿನ ಸಿಪ್ಪೆಯ ಉಪಯೋಗಗಳು.

 

ಬಾಳೆಹಣ್ಣಿನ ಸಿಪ್ಪೆಗೆ ಸಂಬಂಧಿಸಿದ ಇತರ ಪ್ರಯೋಜನಗಳ ಬಗ್ಗೆ ಮಾತನಾಡುವುದಾದರೆ, ಇದು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. ಆದ್ದರಿಂದ ಮುಂದಿನ ಬಾರಿ ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯುವ ಮೊದಲು ಯೋಚಿಸಿ.
ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.ಇದರಲ್ಲಿರುವ ವಿಟಮಿನ್‌ಗಳು ಮತ್ತು ಪೊಟ್ಯಾಸಿಯಮ್ ದೇಹಕ್ಕೆ ಅವಶ್ಯಕವಾಗಿದೆ ಮತ್ತು ಆದ್ದರಿಂದ ಬಾಳೆಹಣ್ಣನ್ನು ಪ್ರತಿದಿನ ಸೇವಿಸುವುದು ಒಳ್ಳೆಯದು. ಆದರೆ ಬಾಳೆಹಣ್ಣಿನ ಹೊರತಾಗಿ ಇದರ ಸಿಪ್ಪೆಯು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎಂಬುದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ಜನರು ಬಾಳೆಹಣ್ಣು (Banana) ತಿನ್ನುತ್ತಾರೆ ಮತ್ತು ಅದರ ಸಿಪ್ಪೆಯನ್ನು ಎಸೆಯುತ್ತಾರೆ. ಆದರೆ ಸಿಪ್ಪೆ ನಮ್ಮ ದೇಹಕ್ಕೆ ಎಷ್ಟು ಉಪಯುಕ್ತ ಎಂಬುವುದು ಹೆಚ್ಚಿನವರಿಗೆ ತಿಳಿದಿಲ್ಲ. ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ 6 ಮತ್ತು ಬಿ 12 ಅಂಶವಿದೆ.

ಬಾಳೆಹಣ್ಣಿನ ಸಿಪ್ಪೆಗೆ ಸಂಬಂಧಿಸಿದ ಇತರ ಪ್ರಯೋಜನಗಳ ಬಗ್ಗೆ ಮಾತನಾಡುವುದಾದರೆ, ಇದು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. ಆದ್ದರಿಂದ ಮುಂದಿನ ಬಾರಿ ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯುವ ಮೊದಲು ಯೋಚಿಸಿ. ಬಾಳೆಹಣ್ಣಿನ ಸಿಪ್ಪೆಯು ದೇಹಕ್ಕೆ ಹೇಗೆ ಪ್ರಯೋಜನಕಾರಿ ಈ ಕೆಳಗಿನಂತಿದೆ

ರೋಗನಿರೋಧಕ ಶಕ್ತಿ
ರೋಗನಿರೋಧಕ ಶಕ್ತಿಗೆ ಪ್ರಮುಖವಾದ ವಿಟಮಿನ್ ಎ ಬಾಳೆಹಣ್ಣಿನ ಸಿಪ್ಪೆಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕೊರೊನಾ ಅವಧಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಾಳೆಹಣ್ಣಿನ ಸಿಪ್ಪೆಯನ್ನು ಸೇವಿಸಬಹುದು.

ಹಲ್ಲುಗಳನ್ನು ಬಿಳುಪುಗೊಳಿಸುತ್ತದೆ
ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಾಳೆಹಣ್ಣಿನ ಸಿಪ್ಪೆಯನ್ನು ಬಳಸುವುದು ಉತ್ತಮ. ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದಾಗ, ಬಿಳಿಯಾಗಲು ಬಾಳೆಹಣ್ಣಿನ ಸಿಪ್ಪೆಯ ಸಹಾಯ ಪಡೆಯಿರಿ.

ಅಧಿಕ ಬಿಪಿ ಸಮಸ್ಯೆ ನಿವಾರಕ
ಸಾಮಾನ್ಯವಾಗಿ ಅಧಿಕ ಬಿಪಿ ಸಮಸ್ಯೆ ಇರುವವರು ಬಾಳೆಹಣ್ಣಿನ ಸಿಪ್ಪೆಯನ್ನು ಸೇವಿಸಬೇಕು. ಇದರಲ್ಲಿರುವ ಪೊಟ್ಯಾಸಿಯಮ್ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಜೀರ್ಣಾಂಗ ವ್ಯವಸ್ಥೆ
ಬಾಳೆಹಣ್ಣಷ್ಟೇ ಅಲ್ಲ, ಇದರ ಸಿಪ್ಪೆಯಲ್ಲಿನ ನಾರು ಕೂಡ ದೇಹದ ಆರೋಗ್ಯಕ್ಕೆ ಸಹಕಾರಿ. ಇನ್ನು ಜೀರ್ಣಾಂಗ ವ್ಯವಸ್ಥೆಗೆ ಫೈಬರ್ ಬಹಳ ಮುಖ್ಯ. ಹೀಗಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ನಿಮ್ಮ ಆಹಾರದ ಭಾಗವನ್ನಾಗಿ ಮಾಡಿಕೊಳ್ಳಿ.

ಮೂಳೆಗಳಿಗೆ ಅತ್ಯಗತ್ಯ
ಮೂಳೆಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಬಾಳೆಹಣ್ಣು ಮತ್ತು ಅದರ ಸಿಪ್ಪೆಯಲ್ಲಿ ಹೇರಳವಾಗಿದೆ. ಚಳಿಗಾಲವು ಪ್ರಾರಂಭವಾಗಿದೆ ಮತ್ತು ಮೂಳೆ ಸಂಬಂಧಿತ ಸಮಸ್ಯೆಗಳು ಈಗ ಹೆಚ್ಚಾಗಿ ಕಾಡುತ್ತವೆ. ಹೀಗಾಗಿ ಬಾಳೆಹಣ್ಣು ಮತ್ತು ಅದರ ಸಿಪ್ಪೆಯನ್ನು ತಿನ್ನಿರಿ.

ಚರ್ಮಕ್ಕೆ ಪ್ರಯೋಜನಕಾರಿ
ಚರ್ಮದ ಮೇಲೆ ಮೊಡವೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ಸಮಸ್ಯೆಯನ್ನು ತೊಡೆದುಹಾಕಲು, ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಿ. ನಿಮ್ಮ ತ್ವಚೆಯ ಆರೈಕೆಯಲ್ಲಿ ಬಾಳೆಹಣ್ಣಿನ ಸಿಪ್ಪೆಯು ಪ್ರಮುಖ ಪಾತ್ರ ವಹಿಸುತ್ತದೆ.

[t4b-ticker]

You May Also Like

More From Author

+ There are no comments

Add yours