ನಾಳೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆಗೆ ಸಜ್ಜು: ಹೆಚ್.ಆಂಜನೇಯ

 

 

ಇಂದು ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ.

*ಚಿತ್ರದುರ್ಗ* :ಭ್ರಷ್ಟ ರಾಜ್ಯ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಹಾಗೂ ಗುತ್ತಿಗೆದಾರ
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್.ಈಶ್ವರಪ್ಪ ವಿರುದ್ಧ ಕಾನೂನು
ಕ್ರಮಕೈಗೊಳ್ಳಲು ಆಗ್ರಹಿಸಿ ಚಿತ್ರದುರ್ಗ ನಗರದಲ್ಲಿ ಏ.18ರಂದು ಜಿಲ್ಲಾ ಕಾಂಗ್ರೆಸ್
ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಸೋಮವಾರ ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗದ ಗಾಂಧಿ ವೃತ್ತದಿಂದ ಒನಕೆ ಓಬವ್ವ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು.

ಬಳಿಕ ಜಿಲ್ಲಾಧಿಕಾರಿ ಅವರಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು.ಶೇ.40 ಕಮಿಷನ್‌ಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಹಾಗೂ ಗುತ್ತಿಗೆದಾರ ರಾಜ್ಯ ಸಂಘದವರುಪ್ರಧಾನಮಂತ್ರಿ ಸೇರಿದಂತೆ ಅನೇಕರಿಗೆ ಪತ್ರ ಬರೆದಿದ್ದರೂ ಯಾವುದೇಕ್ರಮಕೈಗೊಳ್ಳಲಿಲ್ಲ. ಪರಿಣಾಮ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಮಾಡಿಕೊಳ್ಳುವಂತಾಗಿದೆ. ಇದೊಂದು ಸರ್ಕಾರಿ ಪ್ರಯೋಜಿತ ಕೊಲೆ ಆಗಿದ್ದು, ಈ ಸಂಬಂಧಸಿಬಿಐ ಅಥವಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಒತ್ತಾಯಿಸಬೇಕಿದೆ.

 

ಈ ಪ್ರಕರಣದ ಪ್ರಮುಖ ಆರೋಪಿ ಕೆ.ಎಸ್.ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಿ, ತನಿಖೆ
ಪಾರದರ್ಶಕವಾಗಿ ನಡೆಯುವಂತೆ ಕ್ರಮಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕಿದೆ.
ಸಿಲಿಂಡರ್, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ, ಕಾರ್ಮಿಕ, ಶೈಕ್ಷಣಿಕ ವಿರೋಧಿ ನೀತಿ ಜಾರಿ ಮೂಲಕ ನಾಡಿನ ಜನರನ್ನು ಕೇಂದ್ರ, ರಾಜ್ಯ ಸರ್ಕಾರ ತೀವ್ರ ಸಂಕಷ್ಟಕ್ಕೆ ಸಿಲುಕಿಸಿವೆ.

 

ಬಿಜೆಪಿ ಸರ್ಕಾರ ಜನಪರ ಯೋಜನೆಗಳಿಗೆ ಕಡಿವಾಣ ಹಾಕಿರುವ ಪರಿಣಾಮ ಸಣ್ಣ ಕೈಗಾರಿಕಾ ಸಂಸ್ಥೆಗಳು ಬಾಗಿಲು ಮುಚ್ಚಿವೆ.  ಇದರಿಂದ ಬಡಜನರು ಕೂಲಿ ಕೆಲಸ ಸಿಗದೆ ಹೊಟ್ಟೆಗೆ ಊಟವಿಲ್ಲದಂತೆ ಹಸಿವಿನಿಂದ ಬಳಲುವಂತಾಗಿದೆ. ಮಧ್ಯಮ ವರ್ಗದ ಜನ ಉದ್ಯೋಗ ಕಳೆದುಕೊಂಡು
ಬಡವರಾಗಿದ್ದಾರೆ. ಅಂಬಾನಿ, ಅದಾನಿ ಅಂತಹ ಶ್ರೀಮಂತರು ಮಾತ್ರ ಇನ್ನೂ ಹೆಚ್ಚು ಶ್ರೀಮಂತರು ಈ ಬಿಜೆಪಿ ಸರ್ಕಾರದಲ್ಲಿ ಆಗಿದ್ದಾರೆ. ಇದರಿಂದ ಆರ್ಥಿಕ ಅಸಮಾನತೆ
ದೇಶದಲ್ಲಿ ತೀವ್ರಗೊಂಡಿದೆ.
ನಾಡು ಹಾಗೂ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಈ ಸಂಕಷ್ಟ ಸಂದರ್ಭದಲ್ಲಿ ಅವರ ನೋವಿಗೆ ಸ್ಪಂದಿಸುವ ಉದ್ದೇಶ ಹಾಗೂ ಭ್ರಷ್ಟ ಬಿಜೆಪಿ ರಾಜ್ಯ ಸರ್ಕಾರವನ್ನು
ಕಿತ್ತೋಗೆಯಲು ಕಾಂಗ್ರೆಸ್ ಪಕ್ಷ ಪಣ ತೊಟ್ಟಿದ್ದು, ಅದರ ಆರಂಭವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷರು, ವಿಧಾನಪರಿಷತ್ ಸದಸ್ಯರಾದ ಸಲೀಂ ಅಹ್ಮದ್ ಹಾಗೂ ಜಿಲ್ಲೆಯ
ಹಾಲಿ-ಮಾಜಿ ಶಾಸಕರು, ಸಚಿವರು, ಸಂಸದರು, ಜಿಪಂ, ತಾಪಂ, ನಗರಸಭೆ, ಗ್ರಾಪಂ ಸೇರಿ ಸ್ಥಳೀಯ ಸಂಸ್ಥೆಗಳ ಹಾಲಿ-ಮಾಜಿ ಸದಸ್ಯರು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು,
ಪದಾಧಿಕಾರಿಗಳು, ಮುಖಂಡರು ಪಾಲ್ಗೊಳ್ಳಲಿದ್ದಾರೆ. ಜನವಿರೋಧಿ ಸರ್ಕಾರದ ವಿರುದ್ಧ ದೊಡ್ಡ ಧ್ವನಿಯಾಗಲು ಮುಖ್ಯವಾಗಿ ಕಾರ್ಯಕರ್ತರ ಪಾಲ್ಗೊಳ್ಳುವಿಕೆ ಬಹಳ
ಮುಖ್ಯವಾಗಿರುತ್ತದೆ.
ಆದ್ದರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನಿಗದಿತ ಸಮಯಕ್ಕೆ ಗಾಂಧಿ ವೃತ್ತಕ್ಕೆ ಆಗಮಿಸಿ ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧದ ಪಕ್ಷದ
ಹೋರಾಟಕ್ಕೆ ದೊಡ್ಡ ಶಕ್ತಿ ಆಗಬೇಕು ಎಂದು ಕೋರುತ್ತೇನೆ.

*ಎಚ್.ಆಂಜನೇಯ*
ಮಾಜಿ ಸಚಿವರು
ರಾಜ್ಯ ಉಪಾಧ್ಯಕ್ಷರು
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ

[t4b-ticker]

You May Also Like

More From Author

+ There are no comments

Add yours