ನಾನು ಭರವಸೆ ನೀಡುವ ಶಾಸಕನಲ್ಲ, ನಿವೇಶನ ರಹಿತ ಪತ್ರಕರ್ತಕರಿಗೆ ನಿವೇಶನ ಕಲ್ಪಿಸಲಾಗುತ್ತದೆ: ಶಾಸಕ ಟಿ.ರಘುಮೂರ್ತಿ.

 

ನಿವೇಶನ ರಹಿತ ಪತ್ರಕರ್ತಕರಿಗೆ ನಿವೇಶನ
ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಭರವಸೆ

ಚಳ್ಳಕೆರೆ: ನಾನು ಭರವಸೆ ನೀಡುವ ಶಾಸಕನಲ್ಲ, ನಿವೇಶನ ರಹಿತ ಪತ್ರಕರ್ತಕರಿಗೆ ನಿವೇಶನ ಕಲ್ಪಿಸಲಾಗುತ್ತದೆ ಎಂದು ಶಾಸಕ ಟಿ. ರಘುಮೂರ್ತಿ ಅವರು ಭರವಸೆ ನೀಡಿದರು.
ತಾಲ್ಲೂಕು ಪಂಚಾಯಿತಿ ಮಿನಿ ಸಭಾಂಗಣದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ನಿವೇಶನ ರಹಿತ ಪತ್ರಕರ್ತರಿಗೆ ನಿವೇಶ ನೀಡುವಂತೆ ಅನೇಕ ಬಾರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಮನವಿ ಸಲ್ಲಿಸಿದ್ದಾರೆ. ಆದರೆ ಸರ್ಕಾರದ ಮಾನದಂಡಗಳನ್ನು ಎಲ್ಲರೂ ಪಾಲನೆ ಮಾಡಬೇಕಾಗುತ್ತದೆ. ನಿಮ್ಮಲ್ಲಿ ಎಷ್ಟು ಜನ ಪತ್ರಕರ್ತರು ಇದ್ದೀರಿ ಎಂದು ಮೊದಲು ನೋಂದಣಿ ಮಾಡಿಕೊಳ್ಳಬೇಕು. ಆಗ ನಾನು ನಿಮ್ಮ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟು ಪತ್ರಕರ್ತರಿಗೆ ನಿವೇಶನ ಮಂಜೂರು ಮಾಡುವಂತೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.
ಸರ್ಕಾರವು ಪತ್ರಕರ್ತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಅವುಗಳನ್ನು ಪಡೆಯಬೇಕಾದರೆ ಕೆಲವು ಮಾನದಂಡಗಳು ಇರುತ್ತವೆ ಅವುಗಳನ್ನು ಪಾಲನೆ ಮಾಡಿದರೇ ಪತ್ರಕರ್ತರಿಗೆ ಸೌಲಭ್ಯಗಳ ದೊರಕುತ್ತವೆ ಎಂದು ತಿಳಿಸಿದರು.
ನೀವೆಲ್ಲ ಪತ್ರಕರ್ತರಾಗಿ ಸೇವೆ ಸಲ್ಲಿಸಲು ಬಂದಿರುವುದು ಸಮಾಜ ಕಾಳಜಿ ಇಟ್ಟುಕೊಂಡು, ಇನ್ನು ನೀವು ಬೇರೆಯಾವುದೇ ಉದ್ದೇಶ ಇಟ್ಟುಕೊಂಡು ಪತ್ರಿಕಾ ರಂಗಕ್ಕೆ ಬಂದಿಲ್ಲ. ಪತ್ರಕರ್ತರು ಸದಾ ಸಮಾಜದ ಪರ, ಶೋಷಿತರ ಪರ, ಧ್ವನಿಯಿಲ್ಲದವರಿಗೆ ಧ್ವನಿಯಾಗಿ, ಸಮಾಜದ ಕಾಳಜಿ ಇಟ್ಟುಕೊಂಡು ಕೆಲಸ ಮಾಡುತ್ತಾರೆ, ಸಮಾಜದಲ್ಲಿ ನಡೆಯುವ ಅಂಕು-ಡೊಂಕುಗಳನ್ನು ಎತ್ತಿಹಿಡಿಯುವ ಕೆಲಸ ಪತ್ರಕರ್ತರು ಮಾಡುತ್ತಾರೆ ಎಂದು ತಿಳಿಸಿದರು.
ತಹಶೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ ಪತ್ರಕರ್ತರು ವಿಶ್ಲೇಷಣಾತ್ಮಕವಾಗಿ, ಸೃಜನಶೀಲತೆಯಿಂದ, ಸಮಾಜ ಮುಖಿಯಾಗಿ ಸೇವೆ ಮಾಡಬೇಕು. ಒಂದು ಪತ್ರಿಕೆ ವರದಿಯಿಂದ ಎಂತಹ ಸಮಸ್ಯೆಯನ್ನು ಕೂಡ ಬಗೆಹರಿಸಬಹದು ಎಂದು ಹೇಳಿದರು.
ಈ ವೇಳೆ ಡಿವೈಎಸ್ಪಿ ಕೆ.ವಿ. ಶ್ರೀಧರ್ ಮಾತನಾಡಿದರು, ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮೀ, ಉಪಾಧ್ಯಕ್ಷೆ ಜೈತುನ್ಬಿ ಮಲ್ಲಿಕಾ ಸಾಬ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಜ್ಯ ಉಪಾಧ್ಯಕ್ಷ ಬಂಗಲೆ ಮಲ್ಲಿಕಾರ್ಜುನ್, ಸದಸ್ಯ ನರೇನಹಳ್ಳಿ ಅರುಣ್ ಕುಮಾರ್, ಜಿಲ್ಲಾಧ್ಯಕ್ಷ ಹೆಚ್. ಲಕ್ಷ್ಮಣ್, ಉಪಾಧ್ಯಕ್ಷ ನಾಗರಾಜ ಕಟ್ಟೆ, ತಾಲ್ಲೂಕು ಅಧ್ಯಕ್ಷ ಡಿ.ಈಶ್ವರಪ್ಪ, ಉಪಾಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಟಿ.ಜೆ.ತಿಪ್ಪೇಸ್ವಾಮಿ, ಪತ್ರಕರ್ತರಾದ ವೀರಣ್ಣ, ದ್ಯಾಮರಾಜು, ಮಂಜುನಾಥ, ಸುರೇಶ್ ಬೆಳಗೆರೆ, ಮಂಜುನಾಥ, ಯಾಗದಲಗಟ್ಟೆ ಜಗನ್ನಾಥ ಸೇರಿದಂತೆ ಪತ್ರಕರ್ತರು ಇದ್ದರು.

 

========================================

[t4b-ticker]

You May Also Like

More From Author

+ There are no comments

Add yours