ನಗರದಲ್ಲಿ ಮೇನ್ಸ್ ಲಾರಿಗಳ ಸಂಚಾರಕ್ಕೆ ಬ್ರೇಕ್ ಹಾಕುವಂತೆ ಕರಾವೆ ಕಾರ್ಯಕರ್ತರಿಂದ ಮನವಿ

 

 

ಚಳ್ಳಕೆರೆ : ನಗರದಲ್ಲಿ ಮೇನ್ಸ್ ಲಾರಿಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಆದ್ದರಿಂದ ನಗರದಲ್ಲಿ ಮೇನ್ಸ್ ಲಾರಿಗಳ ಸಂಚಾರಕ್ಕೆ ಬ್ರೇಕ್ ಹಾಕುವಂತೆ ಕರ್ನಾಟಕ ರಕ್ಷಣಾ ವೇದಿಕೆ ಚಳ್ಳಕೆರೆ ಘಟಕದ ವತಿಯಿಂದ ಗುರುವಾರ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಗೆ, ನಗರಸಭೆ ಅಧ್ಯಕ್ಷರಿಗೆ, ಶಾಸಕರಿಗೆ ಮನವಿ ಮಾಡಿದರು.

ನಗರದ ವಾಲ್ಮೀಕಿ ಸರ್ಕಲ್ ಬಳಿ‌ ಈಚೆಗೆ ಮೇನ್ಸ್ ಲಾರಿಯು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಇದ್ದವರು ಸಾವನ್ನಪ್ಪಿದ್ದಾರೆ.
ನಗರದಲ್ಲಿ ಮೇನ್ಸ್ ಲಾರಿಗಳ ಸಂಚಾರ ಹೆಚ್ಚಾಗಿರುವುದರಿಂದ ಈ ತರ ಅಪಘಾತಗಳು ನಡೆಯುತ್ತವೆ. ನಗರದಲ್ಲಿ ಸಂಚಾರ ನಡೆಸುವ ಮೇನ್ಸ್ ಲಾರಿಗಳ ಸಂಚಾರಕ್ಕೆ ಬ್ರೇಕ್ ಹಾಕಬೇಕು.‌ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ. ಇನ್ನು ವಾಲ್ಮೀಕಿ ಸರ್ಕಲ್ ನ ಸಮೀಪ ಚಿತ್ರದುರ್ಗ ಮಾರ್ಗ ರಸ್ತೆಯಲ್ಲಿ ನಿಧಾನವಾಗಿ ವಾಹನಗಳು ಸಂಚಾರ ನಡೆಸಲು ಹಂಸಗಳನ್ನು ಹಾಕಿ ನಿಧನ ಗತಿಯಿಂದ ವಾಹನಗಳು ಚಲಿಸುವಂತೆ ಮಾಡಬೇಕು ಎಂದು ಅಧ್ಯಕ್ಷ ಟಿ.ಜೆ. ವೆಂಕಟೇಶ್ ಒತ್ತಾಯಿಸಿದ್ದಾರೆ.
ಈ ವೇಳೆ ಕಾರ್ಯದರ್ಶಿ ವಸಂತ್, ಯುವಬಘಟಕದ ಅಧ್ಯಕ್ಷ ಟಿ.ಪಿ.ದರ್ಶನ್, ಉಪಾಧ್ಯಕ್ಷ ಮುಸಬ್ , ನಗರ ಅಧ್ಯಕ್ಷ ಅಬು ಹಾಗೂ ಪದಾಧಿಕಾರಿಗಳಾದ ಮಹಮ್ಮದ್ ಅಜರುದ್ದೀನ್, ಸಾಗರ್, ಸೌದಾಗರ್ ಹಾಜರಿದ್ದರು..

[t4b-ticker]

You May Also Like

More From Author

+ There are no comments

Add yours