ದಲಿತರಿಗೆ ಕ್ಷೌರ ಮಾಡಬಾರದು ಎಂಬ ಮೂಢನಂಬಿಕೆಗೆ ಇಬ್ಬರ ನಡುವೆ ಸಾಮರಸ್ಯ ಮೂಡಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ

 

ಚಳ್ಳಕೆರೆ-09 ನಮ್ಮ ಕುಲದೇವರು ಹೇಳಿದೆ ದಲಿತರಿಗೆ ಕ್ಷೌರ ಮಾಡಬಾರದು ಎಂಬ ಮೂಢನಂಬಿಕೆಯಿಂದ ದಲಿತರಿಗೆ ಕ್ಷೌರ ಮಾಡುವುದು ನಿಲ್ಲಿಸಿದ್ದ ವ್ಯಕ್ತಿಗೆ ತಹಶೀಲ್ದಾರ್ ಎನ್. ರಘುಮೂರ್ತಿ ಹಾಗೂ ಅಧಿಕಾರಿಗಳ ತಂಡ ತಿಳಿ ಹೇಳಿ ಸ್ಥಳದಲ್ಲೇ ದಲಿತರಿಗೆ ಕ್ಷೌರ ಮಾಡಿಸಿ ಸಾಮರಸ್ಯ ಉಂಟು ಮಾಡಿದ ಘಟನೆ ನಡೆದಿದೆ.
ತಾಲ್ಲೂಕಿನ ಕಾಲುವೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾದಲಗಟ್ಟೆ ಗ್ರಾಮದಲ್ಲಿ ಕ್ಷೌರಿಕ ಶ್ರೀನಿವಾಸ್ ಎಂಬುವವರು ನಾನು ನಂಬಿದ ದೇವರು ಪರಿಶಿಷ್ಟ ಜಾತಿಯ ವರಿಗೆ ಕ್ಷೌರ ಮಾಡಿದರೆ ನಿನಗೆ ತೊಂದರೆಯಾಗುದೆ ಎಂಬ ಮಾತು ಕೇಳಿದ ಕ್ಷೌರ ಮಾಡುವುದನ್ನೇ ನಿಲ್ಲಿಸಿದ್ದ. ಈ ಬಗ್ಗೆ ಜಿಲ್ಲಾಧಿಕಾರಿಗೆ ಗ್ರಾಮದ ಕೆಲ ಜನರು ತಿಳಿಸಿದ್ದಾರೆ..
ಈ ಬಗ್ಗೆ ಜಿಲ್ಲಾಧಿಕಾರಿ ಕವಿತ ಎಸ್ ಮನ್ನಿಕೇರಿ ತಹಶೀಲ್ದಾರ್ ಸೂಚನೆ ನೀಡಿ ಸಮಸ್ಯೆ ಬಗೆಹರಿಸುವಂತೆ ತಿಳಿಸಿದರು. ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ ಕ್ಷೌರಿಕನಿಗೆ ತಿಳಿ ಹೇಳಿ ಸ್ಥಳದಲ್ಲಿಯೆ ದಲಿತ ಸಮುದಾಯದ ಕೆಲವರಿಗೆ ಕ್ಷೌರ ಮಾಡಿಸು ಮೂಲಕ ಉದ್ಭವಿಸಿದ್ದ ಸಮಸ್ಯೆ ಪರಿಹರಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ, ತಳಕು ಪಿಎಸ್ ಐ ಮಾರುತಿ ಕಂದಾಯಾಧಿಕಾರಿ ರಫೀಕ್, ಉಮೇಶ, ಸಿದ್ದೇಶ, ಸೇರಿದ ಗ್ರಾಮಸ್ಥರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours