ಜನಸಾಮಾನ್ಯರಿಗೆ ಜೂನ್ 1 ಕ್ಕೆ ದೊಡ್ಡ ಶಾಕ್, ಲೈಫ್ ದುಬಾರಿ, ವಿಮೆಗಳು ಸೇರಿ ಬಡ್ಡಿ ಹೆಚ್ಚಳ.

 

ನವದೆಹಲಿ, ಮೇ 29: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಮ್ಮೆ ಜೂ. 1 ರಿಂದ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.
ದೇಶದಾದ್ಯಂತ ಅಡುಗೆ ಅನಿಲ, ಪೆಟ್ರೋಲ್, ಡೀಸಲ್, ಅಡುಗೆ ಎಣ್ಣೆ ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿರುವ ಬೆನ್ನಲ್ಲೆ ಜೂ. 1 ರಿಂದ ಜನಸಾಮಾನ್ಯರ ಜೇಬಿಗೆ ಹೆಚ್ಚುವರಿ ಬೆಲೆ ಏರಿಕೆ ಭಾರವಾಗಲಿದೆ.
ಅದೇ ರೀತಿ, ದ್ವಿಚಕ್ರ, ನಾಲ್ಕು ಚಕ್ರ ವಾಹನ ಮಾಲೀಕರಿಗೆ ತೃತೀಯ ಪಾರ್ಟಿ ವಿಮಾ ದರ ಹೆಚ್ಚಳವಾಗಲಿದೆ. ಇದಲ್ಲದೆ, ವಾಹನಗಳ ತಯಾರಿಕಾ ಸಾಮಗ್ರಿಗಳ ಬೆಲೆ ಹೆಚ್ಚಲವಿಲ್ಲದೆ ದ್ವಿಚಕ್ರ ವಾಹನಗಳ ಬೆಲೆ ಏರಿಕೆ ಗ್ರಾಹಕರಿಗೆ ಶಾಕ್ ನೀಡಲಿದೆ. ಉಳಿದಂತೆ ೩ನೇ ವ್ಯಕ್ತಿಯ ವಿಮಾ ದರ ಹೆಚ್ಚಳವಾಗಲಿರುವ ಎಲ್ಲ ಸೂಚನೆಗಳು ಕಂಡು ಬಂದಿವೆ.
ಎಸ್‌ಬಿಐನ ಗೃಹ ಸಾಲದ ಬಡ್ಡಿ ಹೆಚ್ಚಳ
ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಗೃಹ ಸಾಲಗಳಿಗೆ ಬಾಹ್ಯ ಮಾನದಂಡ ಸಾಲ ದರವನ್ನು (ಇಬಿಎಲ್‌ಆರ್) ಹೆಚ್ಚಿಸಿದೆ. ಈಗ ಈ ಮಾನದಂಡದ ದರವು ಶೇಕಡಾ ೦.೪೦ ರಿಂದ ಶೇಕಡಾ ೭.೦೫ ಕ್ಕೆ ಏರಿದೆ.
ಅದೇ ರೀತಿ, ರೆಪೊ ಲಿಂಕ್ಡ್ ಲೆಂಡಿಂಗ್ ರೇಟ್ (ಖಐಐಖ) ಕೂಡ ಶೇ ೦.೪೦ ರಿಂದ ಶೇ ೬.೬೫ ಕ್ಕೆ ಏರಿಕೆಯಾಗಿದೆ. ಈ ಹಿಂದೆ ಈ ಎರಡೂ ದರಗಳು ಕ್ರಮವಾಗಿ ಶೇ.೬.೬೫ ಮತ್ತು ಶೇ.೬.೨೫ರಷ್ಟಿದ್ದವು. ಎಸ್‌ಬಿಐ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಹೆಚ್ಚಿದ ಬಡ್ಡಿದರಗಳು ಜೂನ್ ೦೧ ರಿಂದ ಅನ್ವಯವಾಗಲಿದೆ. ಎಸ್‌ಬಿಐ ಸಹ ಕನಿಷ್ಠ ವೆಚ್ಚ ಆಧಾರಿತ ಸಾಲದ ದರವನ್ನು ಶೇಕಡಾ ೦.೧೦ ರಷ್ಟು ಹೆಚ್ಚಿಸಿದ್ದು, ಇದು ಮೇ ೧೫ ರಿಂದ ಜಾರಿಗೆ ಬಂದಿದೆ.
ಮೋಟಾರು ವಿಮೆ ಪ್ರೀಮಿಯಂ ದುಬಾರಿ
ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಇತ್ತೀಚಿನ ಅಧಿಸೂಚನೆಯ ಪ್ರಕಾರ, ೧೦೦೦ ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯದ ಕಾರುಗಳಿಗೆ ವಿಮಾ ಪ್ರೀಮಿಯಂ ೨,೦೯೪ ರೂ. ಆಗಲಿದೆ. ಕೋವಿಡ್ ಗೂ ಮುನ್ನ ೨೦೧೯-೨೦ರಲ್ಲಿ ೨,೦೭೨ ರೂ. ಇತ್ತು. ೧೦೦೦ ಸಿಸಿಯಿಂದ ೧೫೦೦ ಸಿಸಿ ವರೆಗಿನ ಕಾರುಗಳಿಗೆ ವಿಮಾ ಕಂತು ೩,೪೧೬ ರೂ ಆಗುತ್ತಿದೆ. ಇದು ಮೊದಲು ರೂ ೩,೨೨೧ ಆಗಿತ್ತು.
ನಿಮ್ಮ ಕಾರಿನ ಎಂಜಿನ್ ೧೫೦೦ ಸಿಸಿಗಿಂತ ಹೆಚ್ಚಿದ್ದರೆ, ಈಗ ವಿಮಾ ಪ್ರೀಮಿಯಂ ರೂ ೭,೮೯೦ ಕ್ಕೆ ಇಳಿಯುತ್ತದೆ. ಈ ಹಿಂದೆ ಇದು ೭,೮೯೭ ರೂ.ಗಳಷ್ಟಿತ್ತು. ಸರ್ಕಾರವು ೩ ವರ್ಷಗಳ ಏಕ ಪ್ರೀಮಿಯಂ ಅನ್ನು ಕೂಡ ಹೆಚ್ಚಿಸಿದೆ. ಇನ್ನು ೧೦೦೦ಸಿಸಿವರೆಗಿನ ಕಾರುಗಳಿಗೆ ರೂ.೬,೫೨೧, ೧೫೦೦ಸಿಸಿವರೆಗಿನ ಕಾರುಗಳಿಗೆ ರೂ.೧೦,೫೪೦ ಮತ್ತು ೧೫೦೦ಸಿಸಿ ಮೇಲ್ಪಟ್ಟ ಕಾರುಗಳಿಗೆ ರೂ.೨೪,೫೯೬ ವೆಚ್ಚವಾಗಲಿದೆ. ಅದೇ ರೀತಿ ದ್ವಿಚಕ್ರ ವಾಹನಗಳ ವಿಮಾ ಕಂತು ಕೂಡ ಹೆಚ್ಚಿಸಲಾಗಿದೆ.

[t4b-ticker]

You May Also Like

More From Author

+ There are no comments

Add yours