ಚಿತ್ರದುರ್ಗ ಜಿಲ್ಲಾ ವಾಲ್ಮೀಕಿ ನೌಕರರ ಸಂಘದಿಂದ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಫೇಸ್ ಸಿಲ್ಡ್ ವಿತರಣೆ.

 

ಚಿತ್ರದುರ್ಗ: ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಘ ಚಿತ್ರದುರ್ಗ ವತಿಯಿಂದ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಚಿತ್ರದುರ್ಗ ತಾಲೂಕು* *ವ್ಯಾಪ್ತಿಯಲ್ಲಿ ಪ್ರಾಥಮಿಕ ಹಾಗೂ ನಗರ ಆರೋಗ್ಯ ಕೇಂದ್ರ ಗಳಲ್ಲಿ ಗಂಟಲು ದ್ರವ ಸಂಗ್ರಹ ಮಾಡುವ ಮತ್ತು ವ್ಯಾಕ್ಸೀನ್ ನೀಡುತ್ತಿರುವ, ಮಾಹಿತಿ ನಮೂದು ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 200 ಸಿಬ್ಬಂದಿಯವರಿಗೆ ಅತ್ಯುತ್ತಮವಾದ FACE SHIELD ಮುಖ ಗವಚಗಳನ್ನು ವಿತರಿಸುವ ಕೆಲಸಕ್ಕೆ ಇಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಡಾ.ಪಾಲಾಕ್ಷ ರವರು ಹಾಗೂ ಆರ್ ಸಿ ಹೆಚ್ ಅಧಿಕಾರಿಗಳಾದ ಡಾ.ಕುಮಾರಸ್ವಾಮಿ ರವರು ಚಾಲನೆ ನೀಡಿದರು.

ಚಿತ್ರದುರ್ಗ ವಾಲ್ಮೀಕಿ ನಾಯಕ ನೌಕರರ ಸಂಘದ ಪದಾಧಿಕಾರಿಗಳು ಹಂತ ಹಂತವಾಗಿ ಇನ್ನು 2 ದಿನಗಳಲ್ಲಿ ತಾಲೂಕಿನ ಎಲ್ಲ 18 ಆರೋಗ್ಯ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ ಮುಖಗವಚಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

*ವಾಲ್ಮೀಕಿ ಸಮುದಾಯದ ನೌಕರರು ಪ್ರಸ್ತುತ ಸಂದರ್ಭದಲ್ಲಿ ಇಂತಹ ಉತ್ತಮವಾದ ಮುಖಾಗವಚಗಳನ್ನು ಆರೋಗ್ಯ ಇಲಾಖೆಯ ಫ್ರಂಟ್ ಲೈನ್ ಸಿಬ್ಬಂದಿಗಳಿಗೆ ನೀಡುತ್ತಿರುವುದು ಉತ್ತಮವಾದ ಕಾರ್ಯ, ಇದರಂತೆ ಸಾರ್ವಜನಿಕರಲ್ಲಿ ವ್ಯಾಕ್ಸೀನ್ ಪಡೆಯುವ ಬಗ್ಗೆ ಜಾಗೃತಿ ನೀಡುವಂತಹ ಕಾರ್ಯವನ್ನು ಮಾಡಿದರೆ ಜಿಲ್ಲೆಯಲ್ಲಿ ಸಾವು ನೋವುಗಳು ಕಡಿಮೆ ಆಗುವುದರ ಜೊತೆಗೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ ಆದ್ದರಿಂದ ಈ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳು ಕೆಲಸ ನಿರ್ವಹಿಸಿದ್ದಲ್ಲಿ ಚಿತ್ರದುರ್ಗದಲ್ಲಿ ಸೊಂಕಿತರ ಸಂಖ್ಯೆ ಕಡಿಮೆ ಆಗಿ ಪ್ರಾಣಹಾನಿ ಸಂಖ್ಯೆಯೂ ಕೂಡ ಕಡಿಮೆ ಆಗುವುದು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದರು.

*ಜಿಲ್ಲೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಾಕ್ಸೀನ್ ಕೇಂದ್ರಗಳಿಗಿಂತ ಹೆಚ್ಚು ಕೇಂದ್ರಗಳು ಸ್ಥಾಪಿಸಲಾಗಿದ್ದು, ಹಳ್ಳಿಗಳಲ್ಲಿ ಸಾರ್ವಜನಿಕರು ವ್ಯಾಕ್ಸೀನ್ ಪಡೆಯಲು ಮುಂದಾಗಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆರ್ ಸಿ ಹೆಚ್ ಅಧಿಕಾರಿಗಳು ತಿಳಿಸಿದರು.

*ಪ್ರಸ್ತುತ covid ಸಂದರ್ಭದಲ್ಲಿ, ಕಾರ್ಯಕ್ರಮದಲ್ಲಿ ವಾಲ್ಮೀಕಿ ನೌಕರ ಸಂಘದ ಅಧ್ಯಕ್ಷರು ಗುಡ್ಡದೇಶ್ವರಪ್ಪ ಮತ್ತು ಗೌರವ ಅಧ್ಯಕ್ಷರು ಡಾII ಪ್ರಹ್ಲಾದ್ ಎನ್ ಬಿ ರವರ ಪರವಾಗಿ ಕಾರ್ಯದರ್ಶಿ ನಾಗೇಂದ್ರ ಬಾಬು,ಖಜಾಂಚಿ ರವಿ ಶಂಕರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್,ರವಿ ಪೊಲೀಸ್ ಇಲಾಖೆ,ಸಹಾಯಕ ಅಭಿಯಂತರರು ಹರೀಶ್, ಮತ್ತು ಪದಾಧಿಕಾರಿಗಳು, ಆರೋಗ್ಯ ನಿರೀಕ್ಷಕರಾದ ಗಂಗಾಧರ ಮತ್ತು ಚಿದಾನಂದಪ್ಪ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ನೌಕರ ಸಂಘ ಜಿಲ್ಲಾಧ್ಯಕ್ಷರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours