ಯಾವ ಕಾರ್ಮಿಕರು ಸಹ ಮದ್ಯವರ್ತಿಗಳಿಗೆ ಹಣ-ದಾಖಲೆ ನೀಡದಿರಲು ಸೂಚನೆ:ಜಿಲ್ಲಾ ಕಾರ್ಮಿಕ ಅಧಿಕಾರಿ ಡಿ.ಎಂ.ವಿನುತಾ

 

ಚಿತ್ರದುರ್ಗ,ಮೇ.28: ಕರ್ನಾಟಕ ಕಟ್ಟಡ  ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿಸಿದ ಕಟ್ಟಡ ಕಾರ್ಮಿಕರಿಗೆ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ವರ್ಗಕ್ಕೆ ರಾಜ್ಯ ಸರ್ಕಾರವು ಕೋವಿಡ್-19ರ ಆರ್ಥಿಕ  ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪರಿಹಾರವನ್ನು ಪಡೆಯಲು ಕಾರ್ಮಿಕ ಇಲಾಖೆಯು ಯಾವುದೇ ದಾಖಲೆಗಳನ್ನು ಕೇಳಿರುವುದಿಲ್ಲ ಹಾಗೂ ಯಾರಿಗೂ ಸಹ ನಿರ್ದೇಶನ ನೀಡಿರುವುದಿಲ್ಲ. ಆದ್ದರಿಂದ ಮದ್ಯವರ್ತಿಗಳಿಗೆ ಹಣ ಹಾಗೂ ಯಾವುದೇ ದಾಖಲೆಗಳನ್ನು ನೀಡಬಾರದೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಡಿ.ಎಂ.ವಿನುತಾ ತಿಳಿಸಿದ್ದಾರೆ.
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ರೂ.3000/- ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ನೋಂದಾಯಿಸಿದ ಹಮಾಲರು, ಮನೆಕೆಲಸದವರು, ಚಿಂದಿ ಆಯುವವರು, ಟೇಲರ್‍ಗಳು, ಮ್ಯಾಕಾನಿಕ್, ಅಕ್ಕಸಾಲಿಗರು ಹಾಗೂ ಇತರರಿಗೆ  ರೂ.2000/-ಗಳ ಕೋವಿಡ್ ಪರಿಹಾರ ಘೋಷಣೆ ಮಾಡಿದೆ  ಎಂದು ತಿಳಿಸಿದ್ದಾರೆ.
 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಗಮನಕ್ಕೆ: ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಕಟ್ಟಡ ಕಾರ್ಮಿಕರಿಗೆ ರೂ.3000/- ಮೊತ್ತವನ್ನು ಬಿಡುಗಡೆ ಮಾಡುವ ಸಂಬಂಧ ಷರತ್ತುಗಳನ್ನು ವಿಧಿಸಲಾಗಿದೆ.
 ನೋಂದಾಯಿತ ಕಟ್ಟಡ ಕಾರ್ಮಿಕರಾಗಿರಬೇಕು. ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸಿರಬೇಕು. ನಿಷ್ಕ್ರೀಯ ಖಾತೆಯನ್ನು ಚಾಲ್ತಿ ಮಾಡಿಸಿರಬೇಕು. ಕಚೇರಿಗಳಿಗೆ ಅಥವಾ ಯಾವುದೇ ಸಿ.ಎಸ್.ಸಿ ಸೆಂಟರ್‍ಗಳಿಗೆ ಅರ್ಜಿಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ನೇರವಾಗಿ ಮಂಡಳಿಯಿಂದ ಆಧಾರ್ ಕಾರ್ಡ್ ಮೂಲಕ ರೂ.3000/-ಮೊತ್ತವನ್ನು ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours