ಚಳ್ಳಕೆರೆ ತಾಲ್ಲೂಕಿನಲ್ಲಿ ವಾಡಿಕೆಗಿಂತ ಉತ್ತಮ ಮಳೆ: ಬಿತ್ತನೆ ಕಾರ್ಯ ಚುರುಕು

 

ಚಳ್ಳಕೆರೆ: ತಾಲ್ಲೂಕಿನಾದ್ಯಂತಹ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ಜುಲೈ 10 ರವರೆಗೆ 20,585 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಕೆ. ಮೋಹನ್ ಕುಮಾರ್ ಮಾಹಿತಿ ನೀಡಿದರು.

ಕೃಷಿ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತಾಲ್ಲೂಕಿನಲ್ಲಿ 85 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಶೇಂಗಾ ಭಿತ್ತನೆ ಮಾಡುವ ಗುರಿಹೊಂದಲಾಗಿದೆ, ಈ ಗುರಿಯಲ್ಲಿಈಗಾಗಲೇ 20,585 ಹೆಕ್ಟರ್ ಪ್ರದೇಶದಲ್ಲಿ ಭಿತ್ತನೆಯಾಗಿದೆ. ಇನ್ನು 54 ಸಾವಿರಕ್ಕೂ ಹೆಚ್ಚು ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಬೇಕಾಗಿದೆ ಎಂದು ಹೇಳಿದರು.
ಮುಂಗಾರಿನಲ್ಲಿ ಶೇಂಗಾ 85 ಸಾವಿರ ಹೆಕ್ಟರ್, ತೊಗರಿ 8 ಸಾವಿರ ಹೆಕ್ಟರ್ ಹೊಂದಲಾಗಿದೆ. ಇದರಲ್ಲಿ ಜುಲೈ 10 ರವೆರೆ ಶೇಂಗಾ 20,585 ಬಿತ್ತನೆಯಾಗಿದ್ದು, ತೊಗರಿ 1645 ಹೆಕ್ಟರ್ ಪ್ರದೇಶದಲ್ಲಿ ಭಿತ್ತನೆಯಾಗಿದೆ.
ಇನ್ನು ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಸಬ್ಸಿಡ್ ದರದಲ್ಲಿ ಬಿತ್ತನೆ ಬೀಜ ನೀಡುವ ಕಾರ್ಯ ಚಾಲ್ತಿಯಲ್ಲಿದೆ. ಎಲ್ಲ ರೈತರು ಸಬ್ಸಿಡ್ ದರದಲ್ಲಿ ಬಿತ್ತನೆ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿ ಎಂದು ಹೇಳಿದ ಅವರು ರೈತರಿಗೆ ಬಿತ್ತನೆ ಬೀಜಗಳ ಕುರಿತಂತೆ ಯಾವುದೇ ಸಮಸ್ತೆ ಇದ್ದರೆ ರೈತರ ಸಂಕರ್ಪ ಕಚೇರಿ ಅಥವಾ ಕೃಷಿ ಸಹಾಯಕರ ಕಚೇರಿ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಮನವಿ ಮಾಡಿದರು.

[t4b-ticker]

You May Also Like

More From Author

+ There are no comments

Add yours