ರೈತರಿಗೆ ಸಿಹಿ ಸುದ್ದಿ: ಚಳ್ಳಕೆರೆಯಲ್ಲಿ ಟೊಮೊಟೊ ಮಾರುಕಟ್ಟೆ ಆರಂಭ

 

*ಚಳ್ಳಕೆರೆಯಲ್ಲಿ ಟೊಮೊಟೊ ಮಾರುಕಟ್ಟೆ ಆರಂಭ*

ಚಳ್ಳಕೆರೆ: ತಳಕು ಹೋಬಳಿಯ ಚಿಕ್ಕಮ್ಮನಹಳ್ಳಿ ಬಳಿ ಖಾಸಗಿ ಟೊಮೋಟೊ ಹಣ್ಣಿನ‌ ಮಾರುಕಟ್ಟೆ ಆರಂಭವಾಗಿರುವುದರಿಂದ ಟೊಮೋಟೊ ಬೆಳೆಗಾರರಿಗೆ ಸಂತಸ ತಂದಿದೆ.

ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳ ಇಂತಿಷ್ಟು ರೈತರು ಟಮೋಟಾ ಹಣ್ಣು ಗಳು ಬೆಳೆಯುತ್ತಿದ್ದಾರೆ. ಆದರೆ ಅವರಿಗೆ ಇಷ್ಟು ದಿನ ಮಾರುಕಟ್ಟೆ ಇಲ್ಲದೆ, ಕೋಲಾರದ ಮಾರುಕಟ್ಟೆಗೆ , ಲಾರಿಗಳ ಮೂಲಕ ರಫ್ತು ಮಾಡುಕೊಂಡು ಹೋಗುತ್ತಿದ್ದರು, ಆದರೆ ಅಲ್ಲಿಗೆ ಟಮೋಟಾ ಹಣ್ಣುಗಳನ್ನು ರಫ್ತು ಮಾಡಬೇಕಾದರೆ ಸಾಕಷ್ಟು ವೆಚ್ಚವಾಗುತ್ತಿತ್ತು, ಆದರೆ ಇದಕ್ಕೆ ಈಗ ಖಾಸಗಿ ಕಂಪನಿಯೊಂದು ಚಿಕ್ಕಮ್ಮನಹಳ್ಳಿ ಬಳಿ ಟಮೋಟಾ ಹಣ್ಣಿನ‌ ಮಾರುಕಟ್ಟೆ ಆರಂಭಿಸಿ ರೈತರಿಗೆ ಬೇರೆ ಕಡೆಗೆ ಸಾಗಿಸುವ ಪರಿಪಾಟಲನ್ನು ತಪ್ಪಿಸಿದೆ. ಇದರಿಂದ ತಾಲ್ಲೂಕಿನ ಟಮೋಟಾ ಬೆಳೆಗಾರರು ಸಂತಸವಾಗಿದ್ದಾರೆ..

ಈ ಹಿಂದೆ ಸಾಕಷ್ಟು ರೈತರು ಕೋಲಾರ ಟಮೋಟಾ ಮಾರುಕಟ್ಟೆಗೆ ಟೊಮೋಟಾ ಹಣ್ಣುಗಳು ಸಾಗಿಸಿ ನಷ್ಟವನ್ನು ಕಂಡು , ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು, ಆದರೆ ಈಗ ಸ್ಥಳೀಯವಾಗಿ ಮಾರುಕಟ್ಟೆ ಆರಂಭವಾಗಿರುವುರಿಂದ ಇಲ್ಲಿಯೇ ಮಾರಾಟ ಮಾಡಿ ಬಂದಷ್ಟೋ ಆದಾಯ ಪಡೆಯಬಹುದು ರಫ್ತು ಮಾಡಿದ ಖರ್ಚು ಉಳಿಯುತ್ತದೆ ಎನ್ನುತ್ತಾರೆ……

ವರದಿ: ತಿಪ್ಪೇಶ್ ಚಳ್ಳಕೆರೆ

[t4b-ticker]

You May Also Like

More From Author

+ There are no comments

Add yours