ಗ್ರಾಹಕ‌ ಪ್ರಿಯ ಆಕರ್ಷಕ 2022 ರ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸುಕೋ ಬ್ಯಾಂಕ್

 

ಚಿತ್ರದುರ್ಗ:   ಸುಕೋ ಬ್ಯಾಂಕಿನ ಕ್ಯಾಲೆಂಡರ್ ವೈವಿಧ್ಯಮಯ ಹಾಗೂ ಗುಣಮಟ್ಟದ ಸೇವೆ ಸುಕೋ ಬ್ಯಾಂಕಿನ ಉದ್ದೇಶ ಎಂದು  ಸುಕೋ ಬ್ಯಾಂಕ್ ಸಲಹಾ ಸಮಿತಿಯ ಸದಸ್ಯ ಇ.ಸಿ.ಗಣೇಶ್ ಹೇಳಿದರು.

ನಗರದ ತುರುವನೂರು ರಸ್ತೆಯ ಸುಕೋ   ಬ್ಯಾಂಕ್ ನ 2022 ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ ಸುಕೋ ಬ್ಯಾಂಕ್  ಸದಾ ಕ್ರಿಯಾತ್ಮಕತೆ ಮತ್ತು ಕಲಾ ಪ್ರೋತ್ಸಾಹ ನೀಡುತ್ತಿದೆ  ಎಂದರು.

ಕೃಷಿಕರಿಗೆ, ವಿದ್ಯಾರ್ಥಿಗಳಿಗೆ  ಮತ್ತು ಜನ ಸಾಮಾನ್ಯರಿಗೆ ವರ್ಷದ. ವಿಶೇಷ ದಿನಗಳಬ ಸಂಪೂರ್ಣ  ಮಾಹಿತಿಯನ್ನು    ಕ್ಯಾಲೆಂಡರ್ ಒಳಗೊಂಡಿದೆ. ಸುಕೋ ಬ್ಯಾಂಕ್ ಕಳೆದ 27 ವರ್ಷಗಳಿಂದ ಗ್ರಾಹಕರಿಗೆ ಕ್ಯಾಲೆಂಡರ್  ನೀಡುತ್ತಿದೆ, ಅದರಲ್ಲೂ ಗಣ್ಯರ, ಕೃಷಿ ಕೇತ್ರ, ಕಲಾ ಕ್ಷೇತ್ರ, ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರ ಹುಟ್ಟುಹಬ್ಬಕ್ಕೆ   ವಿನೂತನ. ಕ್ಯಾಲೆಂಡರ್ ನೀಡುತ್ತಿದೆ ಎಂದು ಹೇಳಿದರು.

ದರ್ಶನ್  ಇಂಗಳದಾಳ್  ಮಾತನಾಡಿ  ಸುಕೋ ಬ್ಯಾಂಕಿನ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯು ಸದಾ ಕ್ರಿಯಾಶೀಲತೆ, ಸ್ನೇಹಪರತೆ ಮತ್ತು ಅಭಿವೃದ್ದಿಗೆ ಪೂರಕವಾದ ಯೋಜನೆಗಳನ್ನು ಜಾರಿ ಮಾಡುತ್ತಿರುವುದು ವಿಶೇಷವಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ  ಪ್ರತಿಯೊಬ್ಬ ಬ್ಯಾಂಕ್ ಗ್ರಾಹಕರಿಗೆ  ಬ್ಯಾಂಕಿನ ಎಲ್ಲಾ ಮಾಹಿತಿಯನ್ನು ಮಾರ್ಗದರ್ಶನ ಮಾಡಿ ಗ್ರಾಹಕ ಪ್ರೀಯ ಬ್ಯಾಂಕ್ ಆಗಿ ಸುಕೋ ಬ್ಯಾಂಕ್ ಮಾರ್ಪಟ್ಟಿದೆ ಎಂದು ಹೇಳಿದರು.

ಸುಕೋ ಬ್ಯಾಂಕಿನ ಅಸೆಟ್ ಮ್ಯಾನೇಜರ್  ಮಧುಚಂದ್ರ  ಕೋಸಗಿ ಮಾತನಾಡಿ ಸುಕೋ ಬ್ಯಾಂಕ್  ಸ್ವರ್ಣ ಸಿರಿ ಆಭರಣ ಸಾಲ ಮತ್ತು ಅತಿ ಕಡಿಮೆ ಬಡ್ಡಿದರದಲ್ಲಿ ವಾಹನ ಸಾಲ ನೀಡಿ  ಅನೇಕರಿಗೆ ನೆರವಾಗಿದೆ ಹಾಗೂ ಗೃಹಪಯೋಗಿ ವಸ್ತುಗಳ ಖರೀದಿ ಸಾಲ ಸೌಲಭ್ಯ ಯೋಜನೆ ನೀಡಿ  ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ.

ಸಕೋ  ಬ್ಯಾಂಕಿನ ವ್ಯವಸ್ಥಾಪಕರಾದ ಸಿ. ಶೈಲಜಾ ಮಾತನಾಡಿ  ಸುಕೋ ಬ್ಯಾಂಕಿನ ಚಿತ್ರದುರ್ಗ ಶಾಖೆಯ ಒಟ್ಟು ವ್ಯವಹಾರವು ಐವತ್ತೆರಡು ಕೋಟಿ ದಾಟಿದ್ದು,(52 Crore) ಠೇವಣಿ ಸಂಗ್ರಹ  20 ಕೋಟಿ ಮತ್ತು 32 ಕೋಟಿ ಸಾಲ ವಿತರಣೆ ಮಾಡಲಾಗಿದೆ, ಈ ಸಾಧನೆ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಆಗಿದೆ.ಕೆಳೆದ ತಿಂಗಳಲ್ಲಿ ಲಾಕರ ಕ್ಯಾಂಪೇನ್ ಯೋಜನೆಯನ್ನು  ಕೊಡುವ ಮೂಲಕ  ಗ್ರಾಹಕರ ಗಮನ ಸೆಳೆದಿದೆ.. ಅತಿ ಕಡಿಮೆ ದರದಲ್ಲಿ ಲಾಕರ್  ಸೌಲಭ್ಯವಿದ್ದು ಗ್ರಾಹಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ  ಸಂದರ್ಭದಲ್ಲಿ  ಪೆಟ್ರೋಲ್ ಬಂಕ್ ಮಲೀಕರಾದ  ಮುರುಘರಾಜೇಂದ್ರ ಸ್ವಾಮಿ ,‌‌ ಅಭಿ ವಿಷ್ಣು ಸೈಂಟಿಪಿಕ್ ಮಾಲೀಕ  ಕೆ .ಶ್ರೀರಾಮ್ , ವಕೀಲರಾದ  ಸಿದ್ದೇಶ್, ಸುಕೋ ಬ್ಯಾಂಕಿನ ಸಿಬ್ಬಂದಿಗಳಾದ ಉಲ್ಲೂರು ಗಾದಿಲಿಂಗಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು. ಎಂ.ರಂಜಿತಾ ಸ್ವಾಗತಿಸಿದರು, ಹಾಗು ಹಾಲೇಶ್ , ನಾಗರಾಜ, ಇದ್ದರು.

[t4b-ticker]

You May Also Like

More From Author

+ There are no comments

Add yours