ಗ್ರಾಮೀಣ ಮಕ್ಕಳಿಗೆ ಪರ್ಯಾಯ ಶಿಕ್ಷಣ ಯೋಜನೆ ಶ್ಲಾಘನೀಯ:ಶಾಸಕ ಗೂಳಿಹಟ್ಟಿ ಶೇಖರ್

 

ಗ್ರಾಮೀಣ ಮಕ್ಕಳಿಗೆ ಪರ್ಯಾಯ ಶಿಕ್ಷಣ ಯೋಜನೆ ಶ್ಲಾಘನೀಯ

ಹೊಸದುರ್ಗ : ಕೊರೊನಾ ಹಾವಳಿ ವಿಪರೀತವಾಗಿರುವುದರಿಂದ ಮಕ್ಕಳನ್ನು ಹೇಗೆ ಒಂದೆಡೆ ಸೇರಿಸೋದು ಅನ್ನುವ ಆತಂಕ ಇರುವ ಬೆನ್ನಲ್ಲೇ ಇಲ್ಲಿನ ಶಿಕ್ಷಣ ಇಲಾಖೆ ತಾಲ್ಲೂಕಿನ ಮಕ್ಕಳೊಂದಿಗೆ ಆನ್‌ಲೈನ್‌, ಆಫ್‌ಲೈನ್‌ ನೊಂದಿಗೆ ನಿರಂತರ ಸಂಪರ್ಕ ಕಲ್ಪಿಸಲು ಮುಂದಾಗಿರುವುದು ನಿಜಕ್ಕೂ ಸವಾಲಿನ ಕೆಲಸ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮನೆಯೇ ಮೊದಲ ಪಾಠಶಾಲೆ ಕಲಿಕಾ ಪುನಶ್ಚೇತನ ಪರಿಕಲ್ಪನೆಯ ನಿರಂತರ ಎಂಬ ಸಾಹಿತ್ಯ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.

ಶಾಲೆ ಕಾಲೇಜುಗಳನ್ನ ತೆರೆಯಲು ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ರಾಜ್ಯದಲ್ಲಿ ಎಂದಿನಿಂದ ಶಾಲೆ ಕಾಲೇಜುಗಳನ್ನು ಓಪನ್ ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿವೆ.
ಒಂದೆಡೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟರೂ, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸೋಕೆ ಹೆದರುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಆನ್‌ಲೈನ್ ಶಿಕ್ಷಣ ವಿಧಾನವು ಪರ್ಯಾಯವಾಗಿ ಹೊರಹೊಮ್ಮಿದೆ. ಈಗಾಗಲೇ ನಗರ ಪ್ರದೇಶಗಳಲ್ಲಿ ಆನ್‌ಲೈನ್ ಕ್ಲಾಸ್ ಗಳು ನಡೀತಿವೆ. ಆದರೆ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಇಲ್ಲಿನ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರಲು ಹೊಸ ಯೋಜನೆಯೊಂದನ್ನು ರೂಪಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ ಜಯಪ್ಪ ಮಾತನಾಡಿ, ಕೋವಿಡ್ ಪರಿಣಾಮ ಒಂದೂವರೆ ವರ್ಷದಿಂದ ಶಾಲೆಗಳು ಮುಚ್ಚಿದ್ದು, ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತಿದ್ದಾರೆ. ಇದರಿಂದ ವಿಧ್ಯಾಭ್ಯಾಸ ಹಿನ್ನೆಡೆಯಾಗಿದೆ. ಆದ್ದರಿಂದ 1ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ‘ನಿರಂತರ’ ಎಂಬ ಸಾಹಿತ್ಯ ಕೈಪಿಡಿ ಹೊರತಂದಿದೆ. ಶಿಕ್ಷಕರು ಮನೆಯಲ್ಲಿದ್ದುಕೊಂಡೇ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಿ, ಕಲಿಕೆಗೆ ಪ್ರೇರೇಪಿಸುವ ಉದ್ದೇಶ ಈ ಯೋಜನೆಯದು. ಬಿಇಒ, ಬಿಆರ್‌ಸಿ, ಇಸಿಒ, ಬಿಆರ್‌ಪಿ, ಸಿಆರ್‌ಪಿಗಳುಳು ಸೇರಿ 20 ಸಂಪನ್ಮೂಲ ಶಿಕ್ಷಕರು, ಅನುಭವಿ ಶಿಕ್ಷಕರು ತಮ್ಮ ಅನುಭವಗಳನ್ನು ಕ್ರೋಢಿಕರಿಸಿ ಚಟುವಟಿಕೆ ಸಿದ್ಧಪಡಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಆರ್.ಶಾಂತಪ್ಪ, ಕ್ಷೇತ್ರ ಸಮನ್ವಯ ಅಧಿಕಾರಿ ಮೌನೇಶ್, ಪ್ರಾಥಮಿಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮಂಜುನಾಥ್, ಅಶೋಕ್ ಹಾಗೂ ಬಿಆರ್ ಪಿ ಮಚತ್ತು ಸಿಆರ್ ಪಿ ಸಿಬ್ಬಂದಿಗಳು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours