ಗ್ರಾಮೀಣ ಭಾಗದ ಜನರು ದಾಖಲೆಗಳಿಗೆ ತಾಲೂಕು ಕಚೇರಿಗೆ ಬರಬೇಡಿ, ಗ್ರಾಮ ಒನ್ ಕೇಂದ್ರದಲ್ಲಿ ಎಲ್ಲಾ ದಾಖಲೆ‌ ಪಡೆಯಿರಿ: ತಹಶೀಲ್ದಾರ್ ಎನ್‌.ರಘುಮೂರ್ತಿ

 

ನಾಯಕನಹಟ್ಟಿ: ಗ್ರಾಮೀಣ ಭಾಗದ ಜನರ ಅಲೆದಾಟ ತಪ್ಪಿಸುವ ದೃಷ್ಟಿಯಿಂದ  ರಾಜ್ಯ  ಸರ್ಕಾರದಿಂದ 150 ಕ್ಕೂ ಹೆಚ್ಚು  ಸರ್ಕಾರಿ ಸೇವೆಗಳನ್ನು ಪಡೆಯಲು ತಾಲೂಕು ಕಚೇರಿ ಅಥವಾ ನಾಡ ಕಚೇರಿಗಳನ್ನು ಅವಲಂಬಿಸದೆ ತಮ್ಮ ಪಂಚಾಯಿತ  ವ್ಯಾಪ್ತಿಯಲ್ಲಿ ಅಗತ್ಯ ದಾಖಲೆ ಪಡೆಯಬೇಕು  ಎಂದು ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.

ತಾಲೂಕಿನ ನಾಯಕನಹಟ್ಟಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ   ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ  ಸಾರ್ವಜನಿಕರಿಗೆ ಅಗತ್ಯವಾದ ಎಲ್ಲಾ ಸೇವೆಗಳು   ನಿಮ್ಮ ಗ್ರಾಮದ ಅಥವಾ ಪಂಚಾಯಿತಿಯ ಕೇಂದ್ರಸ್ಥಾನದಲ್ಲಿ ನಾಗರಿಕರು ಪಡೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ , ನಾಗರಿಕ ಸಮಾಜದ ಒಬ್ಬ ಕಟ್ಟಕಡೆಯ ವ್ಯಕ್ತಿ ಅಂದಾಜು 40 ಕಿಲೋ ಮೀಟರ್  ಮಿಕ್ಕ ಅಂತರವನ್ನು ಕ್ರಮಿಸಿ ತಾಲೂಕು ಕಚೇರಿ ಅಥವಾ ನಾಡ ಕಚೇರಿಗಳಿಗೆ ಬಂದು ಈ ಕಚೇರಿಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಕೆಲವೊಮ್ಮೆ ವಿದ್ಯುತ್ ವ್ಯತ್ಯಯ ಅಥವಾ ತಾಂತ್ರಿಕ ಕಾರಣಗಳಿಂದ ಹಲವು ಗಂಟೆಗಳನ್ನು ಕಳೆದು ತನ್ನ ಹಣ ಸಮಯ ಮತ್ತು ಸಂಯಮವನ್ನು ವ್ಯರ್ಥ ಮಾಡಕೂಡದೆಂದು ಸರ್ಕಾರವು ದಿಟ್ಟ ತೀರ್ಮಾನ ತೆಗೆದುಕೊಂಡಿದೆ. ಚಳ್ಳಕೆರೆ ತಾಲೂಕಿನ 70 ಕೇಂದ್ರಗಳಲ್ಲಿ ಗ್ರಾಮ ಒನ್  ಸೆಂಟರ್ ಗಳನ್ನು ಮಂಜೂರಿ ಮಾಡಿ ಈಗಾಗಲೇ 40 ಗ್ರಾಮಪಂಚಾಯಿತಿಗಳಲ್ಲಿ ಈ ಗ್ರಾಮದ ಸೆಂಟರ್ ಗಳನ್ನು ಸ್ಥಾಪಿಸಿ 150 ಕ್ಕೂ ಮಿಗಿಲಾದ ಸರ್ಕಾರಿ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ ಹೀಗಿದ್ದರು ಕೆಲವು ನಾಗರಿಕರು ವೃತ ತಾಲೂಕು ಕಚೇರಿಗೆ ಬಂದು ಮೇಲ್ಕಂಡಂತೆ ನಾಗರಿಕ ಸೇವೆಗಳು ಪಡೆಯಲು ಬಂದು ತಮ್ಮ ಹಣ ಸಮಯ ವ್ಯಯ ಮಾಡುತ್ತಿರುವುದು ವಿಷಾದದ ಸಂಗತಿಯಾಗಿದೆ.

ದಯಮಾಡಿ ಯಾವುದೇ ನಾಗರಿಕರು ಗ್ರಾಮ ಪಂಚಾಯಿತಿ ಮಟ್ಟದಿಂದ ಈ ಸೇವೆಗಳನ್ನು ಪಡೆಯಲು ಕಚೇರಿಗೆ ಅಲೆದಾಡ ಕೂಡದೆಂದು ಮನವಿ ಮಾಡಿದರು ಸಾರ್ವಜನಿಕರು ನೀಡುವ ಯಾವುದೇ ಇಲಾಖೆ ಯಾವುದೇ ಸೇವೆಯ ಎಲ್ಲಾ ಅರ್ಜಿಗಳನ್ನು ಗ್ರಾಮ ಒನ್  ಸೆಂಟರ್  ನಲ್ಲಿ ಪಡೆದುಕೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಅದರಂತೆ ಎಲ್ಲ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದು ಸರ್ಕಾರದ ಆಶಯವು ಸಫಲವಾಗುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ ಕೋಡಿ ಭೀಮರಾವ್ ಉಪ ತಹಶೀಲ್ದಾರ್ ಚೇತನ್ ಕುಮಾರ್ ಮತ್ತು ಪಟ್ಟಣ ಪಂಚಾಯತಿಯ ಸದಸ್ಯರುಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours