ಗುಡ್ ನ್ಯೂಸ್:ಫಿಜಿಯೋಥೆರಫಿ ಹುದ್ದೆಗೆ ಅರ್ಜಿ ಆಹ್ವಾನ

 

ದಾವಣಗೆರೆ: ಪ್ರಸಕ್ತ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕ ಸಮನ್ವಯ ಶಿಕ್ಷಣದ ಅನುಮೋದಿತ ಚಟುವಟಿಕೆಯಾದ ತೀವ್ರತರ ವಿಕಲತೆ ಹೊಂದಿರುವ ವಿದ್ಯಾರ್ಥಿಗಳಿಗೆ ದೈಹಿಕ ಚಿಕಿತ್ಸೆ/ಫಿಜಿಯೋಥೆರಫಿ ಮಾಡಿಸುವ ಅಗತ್ಯತೆ ಇರುವುದರಿಂದ ತ್ರಿಸದಸ್ಯ ಸಮಿತಿಯಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರ ದಾವಣಗೆರೆ ದಕ್ಷಿಣವಲಯ ಇಲ್ಲಿಗೆ ಒಂದು ಹುದ್ದೆ ಫಿಜಿಯೋಥೆರಫಿಸ್ಟ್ (ಡಿಪ್ಲೋಮ ಇನ್ ಫಿಜಿಯೋಥೆರಫಿಸ್ಟ್/ಬ್ಯಾಚುಲರ್ ಆಫ್ ಫಿಜಿಯೋಥೆರಪಿಸ್ಟ್) ನೇಮಕ ಮಾಡಿಕೊಳ್ಳಲು ಉದ್ದೇಶಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸೂಕ್ತ ವಿದ್ಯಾರ್ಹತೆಯುಳ್ಳ ಆಸಕ್ತ ಅಭ್ಯರ್ಥಿಗಳು ದಾಖಲೆಗಳೊಂದಿಗೆ ನ.25 ರ ಸಂಜೆ 5.30 ಗಂಟೆಯೊಳಗಾಗಿ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಮೋತಿ ವೀರಪ್ಪ ಕಾಲೇಜ್ ಆವರಣ, ವಿಶ್ವೇಶ್ವರಯ್ಯ ಪಾರ್ಕ್ ಎದುರು, ದಾವಣಗೆರೆ ದಕ್ಷಿಣ ವಲಯ ಮೊ.ಸಂ: 94806951789449910879 ನ್ನು ಸಂಪರ್ಕಿಸಬಹುದೆಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
[t4b-ticker]

You May Also Like

More From Author

+ There are no comments

Add yours