ಕೇಳಿದಾಕ್ಷಣ ಮೀಸಲಾತಿ ಕೊಡಬೇಕು ಎನ್ನುವ ವಾದವನ್ನು ಯಾರೂ ಮಾಡಬಾರದು: ಸಚಿವ ಬಿ.ಶ್ರೀರಾಮುಲು

 

ಸಂಡೂರು:  ರಾಜ್ಯದಲ್ಲಿ  ಅನೇಕ  ಸಮಾಜದವರು ಮೀಸಲಾತಿಗಾಗಿ ಹೋರಾಟವನ್ನು ಮಾಡುತ್ತಿದ್ದಾರೆ, ಅದರೆ ನಮ್ಮ ಸಮಾಜದವರು ಬೀದಿಗಿಳಿದು ಹೋರಾಟ ಮಾಡುವ ಅವಶ್ಯಕತೆ ಇಲ್ಲ ಎಂದು ಸಚಿವ ಶ್ರೀರಾಮುಲು ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ತಾಲೂಕಿನ ಚೋರನೂರು ಗ್ರಾಮದಲ್ಲಿ ಅರಕ್ಷಕ ಠಾಣೆ ಭೂಮಿ ನೆರವೇರಿಸಲು ಅಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ  ಉದ್ದೇಶಿಸಿ ಮಾತನಾಡಿ, ವಾಲ್ಮೀಕಿ ಗುರುಪೀಠದ ಸ್ವಾಮಿಗಳೂ ಸಹ 100 ದಿನಗಳ ಕಾಲ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಟಮಾಡುತ್ತಿದ್ದು ಅದಕ್ಕೆ ನಮ್ಮೆಲ್ಲರ ಬೆಂಬಲವಿದೆ, ಅದರೆ ನಾವು ಪ್ರತಿಭಟಿಸಿದ ತಕ್ಷಣವೇ ಮೀಸಲಾತಿ ಕೊಡಬೇಕು ಎಂದರೆ ಹೇಗೆ?

ಅದಕ್ಕೆ ಪೂರಕವಾಗಿ ಶ್ರೀರಾಮುಲು ಏನು ಕೆಲಸ ಮಾಡುತ್ತಿದ್ದಾರೆ ಎನ್ನುವುದು ಸ್ವಾಮೀಜಿಗಳಿಗೆ ತಿಳಿದಿದೆ. ಆದ್ದರಿಂದ ಶೀಘ್ರದಲ್ಲಿ ಮೀಸಲಾತಿ ಗೊಂದಲ ಪರಿಹಾರವಾಗುತ್ತದೆ ಎಂದರು.

ಯುವಕರು ಅವಸರ ಬಿದ್ದು ಹೋರಾಟಮಾಡಿದೆವು ಕೊಡಲಿಲ್ಲ ಎಂದು ಆಘಾತಕ್ಕೆ ಒಳಗಾಗುವುದು ಸರಿಯಲ್ಲ. ಮಸ್ಕಿಯಲ್ಲಿ ರಾಜಶೇಖರ ಪಾಟೀಲ್‌ ಎನ್ನುವವರು ಸಾವನ್ನಪ್ಪಿದ್ದು ನೋವಿನ ಸಂಗತಿಯಾಗಿದೆ. ಈ ಹೋರಾಟದಲ್ಲಿ ಪಕ್ಷಬೇಧ ಮರೆತು ಕಾರ್ಯ ನಿರ್ವಹಿಸುತ್ತಿದ್ದೇವೆ. ಆದರೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಮಾಜವನ್ನು ಬೀದಿಗಿಳಿಸುವಂಥ ಕಾರ್ಯ ಮಾಡುತ್ತಿದೆ ಅದು ಸರಿಯಲ್ಲ ಎಂದು‌ ವಿರೋಧ ಪಕ್ಷದವರ ಬೆಂಬಲಕ್ಕೆ  ವಿರೋಧಿಸಿದರು.

ಕೇಳಿದಾಕ್ಷಣ ಮೀಸಲಾತಿ ಕೊಡಬೇಕು ಎನ್ನುವ ವಾದವನ್ನು ಯಾರೂ ಮಾಡಬಾರದು. ಶಾಂತಿಯಿಂದ ಸಮಾಜಕ್ಕೆ ಉಂಟಾಗುವ ಅನ್ಯಾಯವನ್ನು ಸರಿಪಡಿಸುತ್ತೇನೆ. ನಮ್ಮ ಸಮಾಜದವರು ತಾಳ್ಮೆ ಕಳೆದುಕೊಳ್ಳದೇ ಮೀಸಲಾತಿಗಾಗಿ ಶ್ರಮಪಡಬೇಕಾದುದು ಅತಿ ಅವಶ್ಯಕ ಎಂದರು.

ಈ ಸಂದರ್ಭದಲ್ಲಿ ಸಮಾಜದ ಹಲವಾರು ಗಣ್ಯರು, ಸಂಸದರು, ತಾಲೂಕು ಬಿಜೆಪಿ ಅಧ್ಯಕ್ಷ ಜಿ.ಟಿ. ಪಂಪಾಪತಿ, ದರೋಜಿ ರಮೇಶ್‌ ಇತರರು ಉಪಸ್ಥಿತರಿದ್ದರು.

 

[t4b-ticker]

You May Also Like

More From Author

+ There are no comments

Add yours