ಕೇಬಲ್ ವೈರ್ ಕಳವು ಪ್ರಕರಣದಲ್ಲಿ ಮೂವರ ಬಂಧನ

 

ಈಚಘಟ್ಟ ಗ್ರಾಮದ ಬಳಿ ಕೇಬಲ್ ವೈರ್ ಕಳವು ಪ್ರಕರಣ: ಮೂವರ ಬಂಧನ

ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಗೇಟ್ ಪೋಲಿಸ್ ಠಾಣಾ ವ್ಯಾಪ್ತಿಯ ಈಚಘಟ್ಟ ಗ್ರಾಮದ ಬಳಿ ಕೇಬಲ್ ವೈರ್ ಕಳವು ಪ್ರಕರಣ ದಾಖಲಾಗಿತ್ತು….

ಈ ಸಂಬಂಧ. ಕೇಬಲ್ ವೈರ್ ಕಳವು ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಚಿತ್ರಹಳ್ಖಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ…

ಇನ್ನೂ ಬಂಧಿತ ಆರೋಪಿಗಳಿಂದ 30 ಸಾವಿರ ಮೌಲ್ಯದ ಕಬ್ಬಿಣದ ಪೈಪ್ 200 ಮೀಟರ್ ಕೇಬಲ್ ವೈರ್ ಅನ್ಜು ವಶಪಡಿಸಿಕೊಂಡಿದ್ದಾರೆ…

ಇನ್ನೂ ಬಂಧಿತ ಆರೋಪಿಗಳನ್ನು ಹೊಳಲ್ಕೆರೆ ತಾಲ್ಲೂಕಿನ ಬ್ರಹ್ಮಪುರ ಗ್ರಾಮದ ಶಿವಕುಮಾರ್, ಈಚಘಟ್ಟ ಗ್ರಾಮದ ಮಧುಸೂದನ್, ಕಲ್ಲೇಶ್ ಎಂದು ಗುರುತಿಸಲಾಗಿದೆ….

ಇನ್ನೂ ಈಚಘಟ್ಟ ಗ್ರಾಮದ ಹಳ್ಳದಲ್ಲಿ ಬೋರ್ವೆಲ್ ಗೆ ಆಲವಡಿಸಿದ್ದ‌ ಕೇಬಲ್ ವೈರ್ ಹಾಗೂ ಪೈಪ್ ಕಳ್ಳತನವಾಗಿದ್ದು ಈ ಸಂಬಂಧ ಚಿತ್ರಹಳ್ಖಿ ಗೇಟ್ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿತ್ತು…

ಇನ್ನೂ ಆರೋಪಿಗಳ ಪತ್ತೆ ಚಿತ್ರದುರ್ಗ ಎಸ್ಪಿ ಪರುಶುರಾಂ ಮಾರ್ಗದರ್ಶನದಲ್ಕಿ ಹೊಳಲ್ಕೆರೆ ಪಿಎಸ್ ಐ ರವೀಶ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು ಖಚಿತ ಮಾಹಿತಿ‌ಮೇರೆಗೆ ಕೇಬಲ್ ಕಳವು‌ ಮಾಡುತ್ತಿದ್ದ ನಾಲ್ವರಲ್ಕಿ ಮೂವರು ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ್ದ ಮಾಲನ್ಬು ವಶಪಡಿಸಿಕೊಂಡು, ಇನ್ನೊರ್ವ ಪ್ರಮುಖ ಆರೋಪಿ ಮೋಹನ್ ಕುಮಾರ್ ನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ…

ಈ ಸಂಬಂಧ ಚಿತ್ರಹಳ್ಖಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[t4b-ticker]

You May Also Like

More From Author

+ There are no comments

Add yours