ಕರ್ನಾಟಕ ಲೋಕಸೇವಾ ಆಯೋಗದಿಂದ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ

 

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಸಿಹಿಸುದ್ದಿ ನೀಡಿದ್ದು, ಪೌರಾಡಳಿತ ನಿರ್ದೇಶನಾಲಯ ಅಡಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ KPSC ಯಿಂದ ಅಧಿಸೂಚನೆ ಹೊರಡಿಸಲಾಗಿದೆ.

ಕೆಪಿಎಸ್ ಸಿ ಯು ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ (ನಗರ/ಪುರಸಭೆ/ಪಟ್ಟಣಪಂಚಾಯಿತಿ) ಗ್ರೂಪ್ ಸಿ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಮುಖ ದಿನಾಂಕಗಳು

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 31-03-2022

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-04-2022

ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 30-04-2022

ಹುದ್ದೆಗಳ ಮಾಹಿತಿ

ಕಿರಿಯ ಅಭಿಯಂತರರು (ಸಿವಿಲ್)- 89 ಹುದ್ದೆಗಳು

ಕಿರಿಯ ಆರೋಗ್ಯ ನಿರೀಕ್ಷಿಕರು -57

ಎಲೆಕ್ಟ್ರಿಷಿಯನ್ ಗ್ರೇಡ್ -1 – 02

ಎಲೆಕ್ಟ್ರಿಷಿಯನ್ ಗ್ರೇಡ್ -2 -10

ನೀರು ಸರಬರಾಜು ಅಪರೇಟರ್ -89

ಸಹಾಯಕ ನೀರು ಸರಬರಾಜು ಆಪರೇಟರ್ -163

ಒಟ್ಟುಹುದ್ದೆಗಳು ಕಲ್ಯಾಣ ಕರ್ನಾಟಕ 281 ಸೇರಿ 410 ಹುದ್ದೆಗಳು

ವಿದ್ಯಾರ್ಹತೆ: Diploma, PUC, SSLC, ITI

[t4b-ticker]

You May Also Like

More From Author

+ There are no comments

Add yours