ಎಲ್ಲಾ ರೈತರಿಗೆ ಫೆಬ್ರವರಿ 15ರೊಳಗೆ ಪರಿಹಾರ ಮೊತ್ತ, ಮಾರ್ಚ್‍ನಲ್ಲಿ ರೈಲ್ವೆ ಕಾಮಗಾರಿ ಆರಂಭ

 

ಮಾರ್ಚ್‍ನಲ್ಲಿ ರೈಲ್ವೆ ಕಾಮಗಾರಿ ಆರಂಭ: ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗದ ಕಾಮಗಾರಿಯನ್ನು ಮಾರ್ಚ್ ಮಾಹೆಯಲ್ಲಿ ಆರಂಭಿಸಲು ಗುರಿ ಹೊಂದಲಾಗಿದ್ದು, ಭೂಸ್ವಾಧೀನವಾದ ಎಲ್ಲ ರೈತರಿಗೆ ಫೆಬ್ರವರಿ 15ರೊಳಗೆ ಪರಿಹಾರ ಮೊತ್ತ ಪಾವತಿಸಲು ಭೂಸ್ವಾಧೀನಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗೆ ಸೂಚಿಸಿದರು.
ಸರ್ವೇ ಮಾಡಲಾದ ರೈಲ್ವೆ ಮಾರ್ಗದಲ್ಲಿ ಗುರಿತಿಸಲಾದ ಕಲ್ಲುಗಳನ್ನು ಕಿತ್ತು ಹಾಕಿರುತ್ತಾರೆ. ಇದನ್ನು ಮುಂದಿನ ವಾರದಲ್ಲಿ ಸರ್ವೇ ಅಧಿಕಾರಿಗಳು, ರೈಲ್ವೆ ಇಂಜಿನಿಯರ್‍ಗಳು ಸೇರಿಕೊಂಡು ಬಾಂದ್‍ಗಲ್ಲುಗಳನ್ನು ಪುನರ್ ಸ್ಥಾಪಿಸಬೇಕು ಎಂದು ಸರ್ವೇ ಹಾಗೂ ರೈಲ್ವೆ ಇಂಜಿನಿರ್‍ಗೆ ಸೂಚಿಸಿದರು.  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್‍ರೆಡ್ಡಿ ಮಾತನಾಡಿ, ಡಿಎಂಎಫ್ ನಿಧಿಯಲ್ಲಿ 142 ಕೊಠಡಿಗಳನ್ನು ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ. 2021-22ನೇ ಸಾಲಿನಲ್ಲಿ 24 ಶಾಲೆಗಳಿಗೆ 49 ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಆರ್‍ಐಡಿಎಫ್‍ನಲ್ಲಿ 198 ಶಾಲೆಗಳಿಗೆ 294 ಕೊಠಡಿಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 211 ಶಾಲಾ ಕೊಠಡಿಗಳು ಪೂರ್ಣಗೊಂಡಿವೆ. 50 ತಳಪಾಯ ಹಂತದಲ್ಲಿ ಹಾಗೂ 7 ಕೊಠಡಿಗಳು ನಿರ್ಮಾಣದ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಹಾಗೂ ವಿವಿಧ ಇಲಾಖೆಯ ಜಿಲ್ಲಾಮಟ್ಟ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours