ಈರುಳ್ಳಿ ಲಾರಿ ಪಲ್ಟಿಯಾಗಿ ಸ್ಥಳದಲೇ ನಾಲ್ವರ ಸಾವು

 

ಚಿತ್ರದುರ್ಗ,ಡಿ.13 – ಈರುಳ್ಳಿ ತುಂಬಿದ್ದ ಲಾರಿ ಪಲ್ಟಿ ಹೊಡೆದು ಒಂದೇ ಗ್ರಾಮದ ನಾಲ್ಕು ಜನ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ 4-30 ರ ಸುಮಾರಿನಲ್ಲಿ ಜಿಲ್ಲೆಯ ಹಿರಿಯೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿನ ಆಲೂರು ಕ್ರಾಸ್ ಬಳಿ ನಡೆದಿದೆ.
ಗದಗ ಜಿಲ್ಲೆಯ ಹುಯಿಲಾಳು ಗ್ರಾಮದ ರೈತರಾದ ಹನುಮಪ್ಪ ಕಳಕಪ್ಪ ಹುನಗುಂದಿ (30), ಗುರಪ್ಪಾ ಹುಗರ್ (26), ರಮೇಶ್ (28), ಪ್ರಶಾಂತ್ ಹಟ್ಟಿ (36) ಮೃತಪಟ್ಟ ದುರ್ಧೈವಿಗಳು.
ಗದಗ ಜಿಲ್ಲೆಯ ಹುಯಿಲಾಳು ಗ್ರಾಮದ ಹನುಮಪ್ಪ ಕಳಕಪ್ಪ ಹುನಗುಂದಿ ಹಾಗೂ ಪ್ರಶಾಂತ್ ಶೆಟ್ಟಿ ಅವರ ಜಮೀನಿನಲ್ಲಿ ಬೆಳೆದ ಈರುಳ್ಳಿಯನ್ನು ಕಳೆದ ರಾತ್ರಿ ಲಾರಿಯಲ್ಲಿ ತುಂಬಿಕೊಂಡು ಬೆಂಗಳೂರಿನ ಮಾರುಕಟ್ಟೆಗೆ ಮಾರಾಟ ಮಾರಲೆಂದು ಕೊಂಡೊಯ್ಯುವಾಗ ರಾಷ್ಟ್ರೀಯ ಹೆದ್ದಾರಿ ೪ ರ ಹಿರಿಯೂರು ಸಮೀಪದ ಆಲೂರು ಕ್ರಾಸ್ ಬಳಿ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಯನ್ನು ಗಮನಿಸದೆ ಈರುಳ್ಳಿ ತುಂಬಿದ್ದ ಲಾರಿಯ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಮುಂದೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಲಾರಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಲಾರಿಯ ಹಿಂಬದಿ ಈರುಳ್ಳಿ ಮೂಟೆ ಮೇಲೆ ಕುಳಿತಿದ್ದ ಹನುಮಪ್ಪ ಕಳಕಪ್ಪ ಹುನಗುಂದಿ, ಗುರಪ್ಪಾ ಹುಗರ್, ರಮೇಶ್ ಹಾಗೂ ಪ್ರಶಾಂತ್ ಹಟ್ಟಿ ಅವರ ಮೇಲೆ ಈರುಳ್ಳಿ ಚೀಲಗಳು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಲಾರಿಯ ಕ್ಲೀನರ್
ತುಮಕೂರು ಜಿಲ್ಲೆಯ ಗಿರಿಯನ ಪಾಳ್ಯ ಗ್ರಾಮದ ಆನಂದ ಹಾಗೂ ಹುಯಿಲಾಳು ಗ್ರಾಮದ ರೈತ ಸಂಗಪ್ಪ ಅವರನ್ನು ಹಿರಿಯೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಲ್ಟಿ ಹೊಡೆದು ಬಿದ್ದಿದ್ದ ಲಾರಿಯನ್ನು ನೋಡುತ್ತಾ ಲಾರಿ ಹಿಂದೆ ನಿಧಾನವಾಗಿ ಬರುತ್ತಿದ್ದ ಕಾರಿಗೆ ಅತೀವೇಗವಾಗಿ ಬಂದ ಕಾರಿನ ಹಿಂದಿನ ಲಾರಿಯು ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಾಧಿಕಾ ಜಿ. ಡಿವೈಎಸ್ಪಿ ರೋಷರ್ ಜಮೀರ್, ಸಿಪಿಐ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[t4b-ticker]

You May Also Like

More From Author

+ There are no comments

Add yours