ಇಂದಿನಿಂದ ಸರ್ಕಾರದ ಹೊಸ ರೂಲ್ಸ್ ಏನಿರುತ್ತೆ, ಏನಿರಲ್ಲ.

 

ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದ್ದು, ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ. ನಾಳೆಯಿಂದಲೇ ರಾಜ್ಯದಲ್ಲಿ ಹೊಸ ಬಿಗಿ ನಿಯಮಗಳು ಜಾರಿಗೆ ಬರಲಿವೆ.

ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೋವಿಡ್ ಕುರಿತ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ರಾಜ್ಯಾದ್ಯಂತ ಕೋವಿಡ್ ಟೆಸ್ಟ್ ಹೆಚ್ಚಿಸಲಾಗುವುದು ಪ್ರತಿದಿನ ಈಗಿರುವ 1 ಲಕ್ಷದ 10 ಸಾವಿರ ಟೆಸ್ಟಿಂಗ್ ಸಂಖ್ಯೆಯನ್ನು 1 ಲಕ್ಷದ 50 ಸಾವಿರಕ್ಕೆ ಹೆಚ್ಚಿಸಲಾಗುವುದು.

ಮಾಸ್ಕ್, ದೈಹಿಕ, ಸಾಮಾಜಿಕ ಅಂತರ ಕಡ್ಡಾಯ ಪಾಲನೆಗೆ ಸೂಚಿಸಲಾಗಿದೆ ಎಂದರು.

ಶಾಲೆಗಳಲ್ಲಿ, ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಹರಡುತ್ತಿದ್ದು, ಈ ನಿಟ್ಟಿನಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು. ಶಾಲೆಗಳನ್ನು ಬಂದ್ ಮಾಡುವುದು ಅಥವಾ ರಜೆ ನೀಡುವ ಬಗ್ಗೆ ತಾಲುಕು ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿನ ಪ್ರಮುಖ ನಿರ್ಧಾರ:

* ಕೋವಿಡ್ ಟೆಸ್ಟಿಂಗ್ ಹೆಚ್ಚಳ

* ಮಾಸ್ಕ್, ದೈಹಿಕ ಅಂತರ, ಸಾಮಾಜಿಕ ಅಂತರ ಪಾಲನೆ ಕಡ್ಡಾಯ

* ವಿಶೇಷವಾಗಿ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ

* ಬೂಸ್ಟರ್ ಡೋಸ್ ವೇಗ ಹೆಚ್ಚಳಕ್ಕೆ ಸೂಚನೆ

* ಹೋಂ ಐಸೋಲೇಷನ್ ನಲ್ಲಿರುವವರ ಬಗ್ಗೆ ನಿಗಾ

* ಜನಸಂದಣಿಯಾಗದಂತೆ ಕ್ರಮ

* ಜನ ಗುಂಪು ಸೇರದಂತೆ ಹಬ್ಬ ಆಚರಣೆಗೆ ಸೂಚನೆ

* ದೇವಸ್ಥಾನಗಳಲ್ಲಿ ಈಗಿರುವ ನಿಯಮ ಕಡ್ಡಾಯ ಪಾಲನೆ, ನಿಯಮ ಉಲ್ಲಂಘಿಸಿದರೆ ಕೇಸ್ ದಾಖಲು

* ಐಟಿ-ಬಿಟಿ ಕಚೇರಿ ಓಪನ್ ಬಗ್ಗೆ ಯಥಾಸ್ಥಿತಿ ಮುಂದುವರಿಕೆ

* ಹೋಟೆಲ್, ಬಾರ್, ರೆಸ್ಟೋರೆಂಟ್ ಗಳಲ್ಲಿ ಈಗಿರುವ ಯಥಾಸ್ಥಿತಿ ಮುಂದುವರಿಕೆ

* ಸರ್ಕಾರಿ ಹಾಗೂ ಖಾಸಗಿ ಶಾಲೆ-ಕಾಲೇಜು, ಹಾಸ್ಟೇಲ್ ಬಂದ್ ಬಗ್ಗೆ ಶಿಕ್ಷಣ ಸಂಸ್ಥೆ ಹಾಗೂ ಜಿಲ್ಲಾಡಳಿತದ ನಿರ್ಧಾರಕ್ಕೆ ಬಿಟ್ಟದ್ದು

* ಮಕ್ಕಳಿಗಾಗಿ ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್, ಬೆಡ್ ಮೀಸಲು

* ಮಾರ್ಕೆಟ್ ಗಳಲ್ಲಿ ಜನಸಂದಣಿಯಾಗದಂತೆ ಕ್ರಮ, ಮಾರ್ಕೆಟ್ ಸ್ಥಳಾಂತರಕ್ಕೆ ವ್ಯವಸ್ಥೆ

ನಾಳೆಯಿಂದಲೇ ರಾಜ್ಯಾದ್ಯಂತ ಈ ನಿಯಮ ಜಾರಿಗೆ ಬರಲಿದ್ದು, ಇನ್ನಷ್ಟು ಕಠಿಣ ನಿಯಮಗಳ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ. ಕೋವಿಡ್ ಸ್ಥಿತಿಗತಿ ನೋಡಿಕೊಂಡು ಮುಂದಿನ ಸಭೆಯಲ್ಲಿ ಮತ್ತಷ್ಟು ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

[t4b-ticker]

You May Also Like

More From Author

+ There are no comments

Add yours