ವಿಶೇಷ ವರದಿ:
ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ವಿಧಾನ ಪರಿಷತ್ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿ ಇರುವ ಚಿತ್ರದುರ್ಗ ವಿಧಾನ ಪರಿಷತ್ ಸ್ಥಾನ ಗೆದ್ದು ತನ್ನ ವಶಕ್ಕೆ ಪಡೆಯಬೇಕು ಎಂದು ಕಮಲ ಪಡೆ ರಣಕಹಳೆ ಮೊಳಗಿಸಿದರೆ ಕೈ ಪಡೆ ಸಹ ಏನೇ ಆಗಲಿ ಮರಳಿ ಕೈ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಹಠಕ್ಕೆ ಬಿದ್ದಂತೆ ಜಿಲ್ಲೆಯಾದ್ಯಂತ ಪ್ರಚಾರ ಮಾಡುತ್ತಿದ್ದಾರೆ.
ಚಿತ್ರದುರ್ಗ-ದಾವಣಗೆರೆ ವಿಧಾನ ಪರಿಷತ್ ಸ್ಥಾನಕ್ಕೆ ಕಳೆದ ಬಾರಿ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದ ಕೆ.ಎಸ್.ನವೀನ್ ಬಿಜೆಪಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ತುಮಕೂರು ಮೂಲದ ಉದ್ಯಮಿ ಸೋಮಶೇಖರ್ ವಿಧಾನ ಪರಿಷತ್ ಚುನಾವಣಾ ಪರೀಕ್ಷೆಯನ್ನು ಎದುರಿಸಲು ಸಜ್ಜಾಗಿದ್ದಾರೆ.
ಇತಿಹಾಸದಲ್ಲಿ ಕಾಂಗ್ರೆಸ್ ಮತ್ತು ಜನಾತಪರಿವಾರದ ಸತತವಾಗಿ ಆಯ್ಕೆಯಾಗುತ್ತಿದ್ದ ಚಿತ್ರದುರ್ಗ ವಿಧಾನ ಪರಿಷತ್ ಗೆ 2010 ರಲ್ಲಿ ಜಿ.ಹೆಚ್.ತಿಪ್ಪಾರೆಡ್ಡಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಬಂದು ಬಿಜೆಪಿಯ ವಿಧಾನ ಪರಿಷತ್ ಅಭ್ಯರ್ಥಿಯಾಗಿ ಸ್ವರ್ಧೆ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಕೋಟೆ ನಾಡಿನ ಸ್ಥಳೀಯ ಸಂಸ್ಥೆ ಸ್ಥಾನ ಕಮಲದ ತೆಕ್ಕೆಗೆ ಬಂದಿತು. ನಂತರ ನಡೆದ ರಾಜಕೀಯ ಲೆಕ್ಕಚಾರದಲ್ಲಿ 2013 ರಲ್ಲಿ ಎದುರಾದ 2013 ರ. ವಿಧಾನ ಸಭಾ ಚುನಾವಣೆಯಲ್ಲಿ ತಿಪ್ಪಾರೆಡ್ಡಿ ಸ್ವರ್ಧೆ ಮಾಡಿ ಗಲುವು ಸಾಧಿಸಿದ್ದರಿಂದ ಪರಿಷತ್ ಸ್ಥಾನ ತೆರವಾಗಿತ್ತು. ನಂತರ ಮೈಸೂರು ಮೂಲದ ಉದ್ಯಮಿ ಪಕ್ಷೇತರ ಅಭ್ಯರ್ಥಿ ಸ್ವರ್ಧೆ ಮಾಡಿ ರಘು ಆಚಾರ ಅವರು ಗೆಲುವಿನ ರುಚಿ ಸವಿದರು. ನಂತರ ಕಾಂಗ್ರೆಸ್ ಸೇರ್ಪಡೆಯಾಗಿ 2016 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಘು ಆಚಾರ ಸ್ವರ್ಧೆ ಮಾಡಿ ಅಲ್ಪ ಮತಗಳಿಂದ ಎರಡನೇ ಬಾರಿಗೆ ಗೆಲುವಿನ ಹಾರ ಹಾಕಿಕೊಂಡರು.
2013 ಮತ್ತು 2016 ರಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಕಾಂಗ್ರೆಸ್ ಅಭ್ಯರ್ಥಿ ರಘು ಆಚಾರ ಎದುರು ಅಲ್ಪ ಅಂತರದಿಂದ ಸೋಲು ಅನುಭಸಿದರು.
ಈ ಬಾರಿ ರಘು ಆಚಾರ ವಿಧಾನ ಸಭೆ ಸ್ವರ್ಧೆ ಮಾಡುವ ಹಿಂಗಿತ ವ್ಯಕ್ತಪಡಿಸುವ ಮೂಲಕ ಸ್ವರ್ಧೆಯಿಂದ ಹಿಂದೆ ಸರಿದಿದ್ದಾರೆ.
ಕಳೆದ ಎರಡು ಬಾರಿ ಸೋಲು ಅನುಭವಿಸಿರು ಸಹ , ಪಕ್ಷ ನಿಷ್ಠೆ, ಸಂಘ ಪರಿವಾರ, ಯಡಿಯೂರಪ್ಪ ಅವರ ಆಶೀರ್ವಾದ, ರಾಜ್ಯ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆ ಮಾಡಿರುವುದನ್ನು ಗಣನೆಗೆ ತೆಗೆದುಕೊಂಡಿರುವ ಬಿಜೆಪಿ ಹೈಕಮಾಂಡ ಮತ್ತೊಮ್ಮೆ ಕೆ.ಎಸ್. ನವೀನ್ ಅವರಿಗೆ ಟಿಕೆಟ್ ನೀಡಿದೆ ಎಂದು ಹೇಳಬಹುದು.
ಕಾಂಗ್ರೆಸ್ ಅಭ್ಯರ್ಥಿ ಬಿ.ಸೋಮಶೇಖರ್ ಜಿಲ್ಲೆಗೆ ಹೊಸಮುಖ ಆದರೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮೋಟಗೊಂಡನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮತ್ತು ಅಧ್ಯಕ್ಷ ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿ ಸಾವಯವ ಮಿಷನ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
ಎರಡು ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆ ಕಣ: ವಿಧಾನ ಪರಿಷತ್ ಸ್ಥಾನಕ್ಕೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ವರ್ಧೆ ಇದ. ಜೆಡಿಎಸ್ ಅಭ್ಯರ್ಥಿಯನ್ನು ಹಾಕಿಲ್ಲ. ಈ ಚುನಾವಣೆ ಬಿಜೆಪಿ-ಕಾಂಗ್ರೆಸ್ ನಾಯಕರಿಗೆ ಪ್ರತಿಷ್ಠೆಯಾಗಿದೆ. ಜಿಲ್ಲೆಯಾದ್ಯಂತ ಬಿಜೆಪಿ ಗಟ್ಟಿಯಾಗಿ ಬೇರುರಿ ಗೆಲ್ಲಲೇಬೇಕಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ತನ್ನ ಸ್ಥಾನ ಉಳಿಸಿಕೊಳ್ಳುವ ತವಕದಲ್ಲಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾದ ವಾತವರಣವಿತ್ತು. ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಸಹ ಇದ್ದು ಹೆಚ್. ಆಂಜನೇಯ ಮಂತ್ರಿ ಜೊತೆಗೆ ಜಿಲ್ಲೆಯಲ್ಲಿ 4 ಜನ ಕಾಂಗ್ರೆಸ್ ಶಾಸಕರು ಇದ್ದರು. ಸಂಸದರಾಗಿ ಬಿ.ಎನ್.ಚಂದ್ರಪ್ಪ ಇದ್ದರು. ಜೊತೆಗೆ ದಾವಣಗೆರೆ ಜಿಲ್ಲೆ ಸಹ ಕೈ ಹಿಡಿದಿತ್ತು. ಆದರೆ ಚಿತ್ರಣ ಬದಲಾಗಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ ಸಚಿವರಾಗಿ ಬಿ.ಶ್ರೀರಾಮುಲು ಮತ್ತು ದಾವಣಗೆರೆ ಮಂತ್ರಿಯಾಗಿ ಬೈರತಿ ಬಸವರಾಜ್ , ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಕೇಂದ್ರ ಮಂತ್ರಿ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ದಾವಣಗೆರೆ ಜೊತೆಗೆ ಭೀಮಸಮುದ್ರ ಭಾಗದಲ್ಲಿ ಹಿಡಿತ ಹೊಂದಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಹಿರಿಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ , ksrtc ಅಧ್ಯಕ್ಷ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಸೇರಿ 5 ಜನ ಶಾಸಕರು ನವೀನ್ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ.
ಕಾಂಗ್ರೆಸ್ ಪಕ್ಷ ಪರ ಮಾಜಿ ಸಚಿವ ಹೆಚ್.ಆಂಜನೇಯ, ಶಾಸಕ ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕರಾದ ಸುಧಾಕರ್,ಗೋವಿಂದಪ್ಪ, ತಿಪ್ಪೇಸ್ವಾಮಿ, ಉಮಾಪತಿ, ಜಿಲ್ಲಾ ಕಾಂ ಅಧ್ಯಕ್ಷ ತಾಜ್ ಪೀರ್ ಸೇರಿ ಕಾಂಗ್ರೆಸ್ ಪಕ್ಷದ ಪರ ಸಖತ್ ಜೋಷ್ ನಲ್ಲಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ.
ಕಾಂಗ್ರೆಸ್ ನ ಬಿ.ಸೋಮಶೇಖರ ಅವರಿಗೆ ಗ್ರಾಮ ಪಂಚಾಯತಿ ಕೆಲಸ ಮಾಡಿದ ಅನುಭವವಿದೆ ಮತ್ತು ಉತ್ತಮವಾಗಿ ಕೆಲಸ ಮಾಡುತ್ತಾರೆ. ಶಾಸಕರು ಸರ್ಕಾರ ಇಲ್ಲದೆ ಹೋದರು ಸಹ ಜಿಲ್ಲೆಯಲ್ಲಿ ಅತಿ ಹೆಚ್ಚು ಗ್ರಾಮ ಪಂಚಾಯತಿ ಸದಸ್ಯರು ಕಾಂಗ್ರೆಸ್ ಪಕ್ಷದವರು ಆಗಿರುವುದರಿಂದ ನಮ್ಮ ಸ್ಥಾನ ನಾವು ಉಳಿಸಿಕೊಳ್ಳುತ್ತೇವೆ ಎಂಬ ವಾದ ಕಾಂಗ್ರೆಸ್ ಪಕ್ಷದ್ದಾಗಿದೆ.
ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಅವರಿಗೆ ಎರಡು ಬಾರಿ ಸೋಲಿನ ಅನುಕಂಪ ಹೆಚ್ಚು ಕೆಲಸ ಮಾಡುತ್ತಿದೆ. ಕಳೆದ ಬಾರಿ ಶಾಸಕರು , ಸರ್ಕಾರ ಇಲ್ಲದೆ ಅತಿ ಕಡಿಮೆ ಅಂತರದಲ್ಲಿ ಸೋತಿದ್ದರು ಈ ಬಾರಿ ಬಿಜೆಪಿ ಸರ್ಕಾರ ,ಸಚಿವರ ದಂಡು, ಶಾಸಕರ ಪರಿಶ್ರಮದಿಂದ ಹೆಚ್ಚು ಗ್ರಾಮ ಪಂಚಾಯತಿ ಸದಸ್ಯರು ಬಿಜೆಪಿ ಅವರು ಹಾಗಾಗಿ ಗೆಲುವು ನಮ್ಮದೇ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ಗ್ರಾಮ ಪಂಚಾಯತಿ ಸದಸ್ಯರಿಗೆ ಡಿಮ್ಯಾಂಡ್: ಚಿತ್ರದುರ್ಗ- ದಾವಣಗೆರೆ ಸೇರಿ ಒಟ್ಟು 9 ತಾಲೂಕುಗಳಿಂದ 5073 ಮತದಾರರಿದ್ದಾರೆ. ಇದರಲ್ಲಿ 2384 ಮಹಿಳಾ ಸದಸ್ಯರು, 2689 ಪುರುಷ ಸದಸ್ಯರು ಇದ್ದರೆ.
ಇಬ್ಬರು ಅಭ್ಯರ್ಥಿಗಳು ತನ್ನದೇ ಆದ ರಣತಂತ್ರ ರೂಪಿಸುತ್ತಿದ್ದಾರೆ. ಸ್ವಲ್ಪ ಕಾಂಗ್ರೆಸ್ ಅಬ್ಬರದ ಪ್ರಚಾರ ಮಾಡುತ್ತಿದ್ದರು ಬಿಜೆಪಿ ಒಳ ಅರಿವು ಹರಿಯುತ್ತಿದ್ದು ಸಂಘ ಪರಿವಾರ ಮತ್ತು ಕಾರ್ಯಕರ್ತರು ಗ್ರೌಂಡ್ ಲೆವೆಲ್ ವರ್ಕ ಮಾಡುತ್ತಿದ್ದಾರೆ ಎಂಬುದು ಎಲ್ಲೆಡೆ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ಕೊನೆಯ ದಿನದ ಕಾಂಚಣದ ಆಟದ ಮುಂದೆ ಸೋಲು ಗೆಲುವು ಲೆಕ್ಕಚಾರವೋ, ಪಕ್ಷಗಳ ಅಸ್ವಿತ್ವ, ಅಧಿಕಾರ, ಸಿದ್ದಾಂತ, ಅನುಕಂಪ, ಗ್ರಾಮ ಪಂಚಾಯತಿ ಸದಸ್ಯರ ಮನಸ್ಥಿತಿ ಮೇಲೆ ಫಲಿತಾಂಶ ನಿರ್ಣಯವೋ ಎಂಬ ಇಬ್ಬರು ಅಭ್ಯರ್ಥಿಗಳ ಭವಿಷ್ಯ ಅಡಗಿದೆ.
ಎಲ್ಲಾದಕ್ಕೂ ಫಲಿತಾಂಶ ಬಂದ ನಂತರ ಅಷ್ಟೆ ಯಾರು ಬಲಿಷ್ಠರು ಎಂಬುದು ತಿಳಿಯಬೇಕೆಂದೇ ಇನ್ನು ಸ್ವಲ್ಪ ದಿನ ಕಾಯಲೇಬೇಕಾಗಿದೆ.
[t4b-ticker]
+ There are no comments
Add yours