ರಾಜ್ಯದ 25 ಸಂಸದರು ದಂಡಪಿಂಡಗಳು, ಬೆಲೆ ಏರಿಕೆಗೆ ಮಾತಡುತ್ತಿಲ್ಲ: ಬಿ.ವಿ.ಶ್ರೀನಿವಾಸ್

 

 

 

 

ಚಿತ್ರದುರ್ಗ: ಪಂಚ ರಾಜ್ಯ ಚುನಾವಣೆಗಾಗಿ 130 ದಿನ ಬೆಲೆ ಏರಿಕೆಗೆ ಬ್ರೇಕ್ ಹಾಕಿ ಗೆಲುವು ಕಂಡ ನಂತರ ಮತ್ತೆ ಬೆಲೆ ಏರಿಕೆಯ ಮೂಲಕ ಜನರ ಬದುಕಲಿ ಆಟವಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ವಾಗ್ದಾಳಿ ನಡೆಸಿದರು.

ನಗರದ ಜಿಲ್ಲಾಧಿಕಾರಿ ವೃತ್ತದಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ ಎರಡು ವರ್ಷಗಳಿಂದ ದೇಶದ ಮತ್ತು ರಾಜ್ಯದ ಜನರು ಸತತ ಬೆಲೆ ಏರಿಕೆಯಿಂದ ಬೇಸತ್ತಿದ್ದಾರೆ. ಜಿಎಸ್ ಟಿ ತರುವ ಮೂಲಕ ಮಧ್ಯಮ ವರ್ಗದ ಚಿಕ್ಕ ಪುಟ್ಟ ಉದ್ಯಮಗಳನ್ನು ಮುಗಿಸುವ ಕೆಲಸ ಮಾಡಿದರು. ನಿರುದ್ಯೋಗದಿಂದ ಯುವಕರು ಹೈರಾಣಗಿದ್ದಾರೆ. ರಾಜ್ಯದಲ್ಲಿ ಉದ್ಯೋಗ ಇಲ್ಲದೆ ಏಳು ಸಾವಿರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಭಿವೃದ್ಧಿ ಮತ್ತು ಉದ್ಯೋಗ , ಬೆಲೆ ಏರಿಕೆ ಬಗ್ಗೆ ಮಾತನಾಡದೆ ಹಿಜಾಬ್, ಹಲಾಲ್ ಕಟ್ ಬಗ್ಗೆ ಹೇಳಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

 

 

ಸಿಎಂ ಬೊಮ್ಮಾಯಿ ಅವರು ಒಂದು ದಿನ ಸಹ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿಲ್ಲ. ಜನಸಾಮನ್ಯರ ಬಗ್ಗೆ ಕಾಳಜಿ‌ಇಲ್ಲ. ಕಳೆದ 2010 ರಲ್ಲಿ ಸೃತಿ ಇರಾನಿ ಅವರು 50 ಹೆಚ್ಚಿಸಿದಾಗ ಕಾಂಗ್ರೆಸ್ ವಿರುದ್ದ ಉತ್ತಮವಾಗಿ ನಾಟಕವಾಡಿದರು.

ರಾಜ್ಯದಿಂದ ಸಂಸದರಾಗಿರುವ 25 ಸಂಸದರು ಧ್ವನಿ ಎತ್ತದೆ ದಂಡಪಿಂಡಗಲಾಗಿದ್ದಾರೆ. ಇವರು ಒಂದು ದಿನ ಸಹ ರಾಜ್ಯದ ಜನತೆಯ ಪರವಾಗಿ ಲೋಕಸಭೆಯಲ್ಲಿ ಒಂದು ದಿನ ಸಹ ಮಾತಡಲಿಲ್ಲ. ಕೋವಿಡ್ ಸಂದರ್ಭದಲ್ಲಿ ಸಹ

ಟೆಲಿವಿಜನ್ ಸರ್ಕಾರ ಬಿಜೆಪಿ ಸರ್ಕಾರವಾಗಿದೆ. ಅಣ್ಣ ತಮ್ಮಂದಿರ ನಡುವೆ ಒಡೆದಾಟವಾಡುವುದಕ್ಕೆ ಬಿಜೆಪಿ ಹೆಸರುವಾಸಿಯಾಗಿದೆ. ಬಿಜೆಪಿ ಸರ್ಕಾರ ಸರ್ವೆ ಪ್ರಕಾರ 50 ಸ್ಥಾನ ಪಡೆಯುತ್ತೇವೆ ಎಂದು ತಿಳಿದ ತಕ್ಷಣ ಧರ್ಮಗಳ ನಡುವೆ ಕೋಮುಗಲಭೆ ಸೃಷ್ಟಿಸಲು ಹೊರಟು ಗೆಲುವು ಕಾಣಲು ಹೊರಟಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ ಎಂದರು

ಮಾಜಿ  ಜಿಲ್ಲಾ ಪಂಚಾಯತ ಸದಸ್ಯ ಯೋಗೇಶ್ ಬಾಬು, ಸವಿತಾ ರಘು , ಯುವ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಮಧುಪಾಲೇಗೌಡ, ಮುಖಂಡರಾದ ಕರಿಯಪ್ಪ, ರಘು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours