ನಿಮ್ಮ ಹೃದಯ ಆರೋಗ್ಯ ನಿಮ್ಮ ಕೈಯಲ್ಲಿ ಹೃದಯ ಆರೋಗ್ಯದ ಬಗ್ಗೆ ನಿಮಗೆಷ್ಟು ಗೊತ್ತು.

 

ಹೃದ್ರೋಗ ಹಾಗೂ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಹಾಗೂ ಹೃದಯದ ಆರೋಗ್ಯದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟೆಂಬರ್‌ 29 ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಜಗತ್ತಿನಲ್ಲಿ 18 ಲಕ್ಷಕ್ಕೂ ಅಧಿಕ ಮಂದಿ ಪ್ರತಿವರ್ಷ ಹೃದಯ ಸಂಬಂಧೀ ಸಮಸ್ಯೆಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂಬುದು ಕಳವಳಕಾರಿ ಸಂಗತಿ.
ಜಗತ್ತಿನಲ್ಲಿ ಇಂದು ಅತಿ ಹೆಚ್ಚು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಅಗ್ರಸ್ಥಾನದಲ್ಲಿದೆ. ಹೃದಯದ ಆರೋಗ್ಯದ ಬಗೆಗಿನ ಸಿಮೀತ ಜ್ಞಾನವು ಹೃದಯ ಸಂಬಂಧಿ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಿರಬಹುದು ಎಂಬುದು ತಜ್ಞರ ಅಭಿಪ್ರಾಯ.

 

ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಹೃದಯ ಹಾಗೂ ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸೆಪ್ಟೆಂಬರ್‌ 30ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಹೃದಯ ದಿನವು ಜಾಗತಿಕ ಮಟ್ಟದ ಹಾಗೂ ಬಹುಭಾಷಾ ಅಭಿಯಾನವಾಗಿದೆ.

ಹೃದ್ರೋಗ ಮತ್ತು ಪಾರ್ಶ್ವವಾಯು ಸೇರಿದಂತೆ ಹೃದಯರಕ್ತನಾಳದ ಕಾಯಿಲೆಗಳು ವಿಶ್ವದಾದ್ಯಂತ ಸಾವಿನ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ವಿಶ್ವ ಹೃದಯ ದಿನವು ಪ್ರಪಂಚದಾದ್ಯಂತ ಪ್ರತಿಯೊಬ್ಬರಿಗೂ ತಮ್ಮ ಹೃದಯದ ಬಗ್ಗೆ ಕಾಳಜಿ ವಹಿಸಲು ಜ್ಞಾಪನೆಯಾಗಿದೆ. ಈ ವರ್ಷ ಅಭಿಯಾನವು ನಮ್ಮ ಹೃದಯವನ್ನು ನಾವು ಮೊದಲು ಅರಿಯಬೇಕು, ಅದಕ್ಕಾಗಿ ಅಗತ್ಯ ಹಂತದ ಮೇಲೆ ಕೇಂದ್ರೀಕರಿಸುತ್ತದೆ.

ದಿನಾಂಕ
ಹೃದಯ ರಕ್ತನಾಳದ ಕಾಯಿಲೆಗಳು, ಅವುಗಳ ತಡೆಗಟ್ಟುವಿಕೆ ಮತ್ತು ಜಾಗತಿಕ ಪ್ರಭಾವದ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲು, ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್‌ 29ರಂದು ಆಚರಿಸಲಾಗುತ್ತದೆ.

ಇತಿಹಾಸ
1999ರಲ್ಲಿ ಮೊದಲ ಬಾರಿ ವಿಶ್ವ ಹೃದಯ ದಿನವನ್ನು ಆಚರಿಸಲಾಗಿತ್ತು. ವರ್ಲ್ಡ್‌ ಹಾರ್ಟ್‌ ಫೆಡರೇಶನ್‌ (WHF) ವಿಶ್ವ ಆರೋಗ್ಯ ಸಂಸ್ಥೆ (WHO) ಸಹಯೋಗದೊಂದಿಗೆ ಈ ದಿನದ ಆಚರಣೆಗೆ ಕರೆ ನೀಡಿತ್ತು. 1997 ರಿಂದ 2011ರ ವರೆಗೆ ವರ್ಲ್ಡ್‌ ಹಾರ್ಟ್ ಫೆಡರೇಶನ್‌ನ ಅಧ್ಯಕ್ಷರಾಗಿದ್ದ ಆಂಟೊನಿ ಬೇಯಸ್‌ ಡಿ ಕೂನಾ ಅವರು ಈ ಆಚರಣೆಯ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದರು, ಅಲ್ಲದೆ ಅದನ್ನು ಕಾರ್ಯಗತಗೊಳಿಸಿದರು. ಸಾಮಾನ್ಯವಾಗಿ ಸೆಪ್ಟೆಂಬರ್‌ ತಿಂಗಳ ಕೊನೆಯ ಭಾನುವಾರವನ್ನು ವಿಶ್ವ ಹೃದಯ ದಿನ ಎಂದು ಆಚರಿಸಲು ನಿರ್ಧರಿಸಲಾಗಿತ್ತು. ಈ ದಿನದ ಆಚರಣೆಯನ್ನು ಜಾರಿಗೊಳಿಸಿದ ಬಳಿಕ 2000ರ ಸೆಪ್ಟೆಂಬರ್‌ 24ರಂದು ಮೊದಲ ಬಾರಿ ವಿಶ್ವ ಹೃದಯ ದಿನವನ್ನು ಆಚರಿಸಲಾಗಿತ್ತು.

 

ಮಹತ್ವ
ವರ್ಲ್ಡ್‌ ಹಾರ್ಟ್‌ ಫೆಡರೇಶನ್‌ ಅವರ ಪ್ರಕಾರ ʼಹೃದ್ರೋಗ ಮತ್ತು ಪಾರ್ಶ್ವವಾಯು ಸೇರಿದಂತೆ ಇತರ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪ್ರತಿವರ್ಷ18.6 ಮಿಲಿಯನ್‌ ಜೀವಗಳು ಬಲಿಯಾಗುತ್ತಿವೆ ಎಂಬುದನ್ನು ವಿಶ್ವ ಹೃದಯ ದಿನ ದಿನವು ನೆನಪಿಸುತ್ತದೆ. ಹೃದಯ ರಕ್ತನಾಳದ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ವ್ಯಕ್ತಿಗಳು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಎತ್ತಿ ತೋರಿಸುತ್ತದೆ. ತಂಬಾಕು ಹಾಗೂ ತಾಂಬಾಕಿನ ಉತ್ಪನ್ನಗಳ ಸೇವನೆ, ಅನಾರೋಗ್ಯಕರ ಆಹಾರ ಸೇವನೆ ಮತ್ತು ಜಡಜೀವನಶೈಲಿಯಂತಹ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ ಹೃದ್ರೋಗ ಮತ್ತು ಪಾರ್ಶ್ವವಾಯುಗಳಿಂದ ಕನಿಷ್ಠ ಶೇ 80 ರಷ್ಟು ಅಕಾಲಿಕ ಮರಣಗಳನ್ನು ತಪ್ಪಿಸಬಹುದು ಎಂಬುದನ್ನು ಜನರಿಗೆ ತಿಳಿಸುವ ಕ್ರಮಗಳನ್ನು ಈ ದಿನದ ಆಚರಣೆ ಹೊಂದಿದೆ.

2023ರ ವಿಶ್ವ ಹೃದಯ ದಿನ ಥೀಮ್‌
ಇತ್ತೀಚಿನ ವರ್ಷಗಳಲ್ಲಿ ಇಮೋಜಿ ಬಳಕೆ ಹೆಚ್ಚಾಗಿದೆ, ಅದರಲ್ಲೂ ಹೃದಯದ ಇಮೋಜಿಯನ್ನು ನಾವು ನಮ್ಮ ದಿನಂಪ್ರತಿಯಲ್ಲಿ ಹೆಚ್ಚು ಬಳಸುತ್ತೇವೆ. ಇದು ಹೃದಯದ ಆರೋಗ್ಯವನ್ನು ಸೂಚಿಸುತ್ತದೆ. ಹಾಗಾಗಿ ಇಮೋಜಿ ಬಳಕೆಯ ಮೂಲಕ ಹೃದಯದ ಆರೋಗ್ಯವನ್ನು ತಿಳಿಯಿರಿ ಹಾಗೂ ಹೃದಯದ ಮಹತ್ವವನ್ನು ತಿಳಿಯಿರಿ ಎಂಬುದಾಗಿದೆ. ಇಮೋಜಿ ಬಳಕೆಯ ಮೂಲಕ ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ವರ್ಲ್ಡ್‌ ಹಾರ್ಟ್‌ ಫೆಡರೇಶನ್‌ ಮಾಡುತ್ತಿದೆ.

ಆಚರಣೆ
ಈ ದಿನದಂದು ವ್ಯಕ್ತಿಗಳು ಹಾಗೂ ಸಮುದಾಯ ಹೃದಯ ರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗುವ ಅಂಶಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡಬಹುದು. ಧೂಮಪಾನ ಮಾಡುವುದನ್ನು ತಡೆಯುವುದು, ನಿಯಮಿತ ದೈಹಿಕ ಚಟುವಟಿಕೆಗೆ ಒತ್ತು ನೀಡುವುದು, ಆರೋಗ್ಯಕರ ಆಹಾರ ಸೇವನೆ, ಒತ್ತಡ ನಿರ್ವಹಣೆ ಇಂತಹವುಗಳ ಮೇಲೆ ಜನರು ಹೆಚ್ಚು ಗಮನ ಹರಿಸುವಂತೆ ಮಾಡಬೇಕು. ಅಲ್ಲದೆ ಕೆಲವು ಆರೋಗ್ಯ ಸೇವಾ ಸಂಸ್ಥೆಗಳು ಉಚಿತ ಹಾಗೂ ರಿಯಾಯಿತಿಯ ಹೃದಯದ ಆರೋಗ್ಯ ತಪಾಸಣೆಗಳನ್ನು ಮಾಡುತ್ತದೆ. ಇದು ಹೃದ್ರೋಗದ ಅಪಾಯವನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ. ಕೆಲವು ಸಂಘ ಸಂಸ್ಥೆಗಳು, ಸರ್ಕಾರ, ಗುಂಪುಗಳು, ಸಮುದಾಯಗಳು ಹೃದಯಕ್ಕೆ ಸಂಬಂಧಿಸಿದ ಅಪಾಯಕಾರಿ ಅಂಶಗಳ ಬಗ್ಗೆ ಜನರಿಗೆ ತಿಳಿಸು ಜಾಗೃತಿ ಅಭಿಯಾನಗಳು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ವಿಶ್ವ ಹೃದಯ ದಿನದಂದು ಹೃದಯದ ಆರೋಗ್ಯವನ್ನು ಉತ್ತೇಜಿಸಲು ದೈಹಿಕ ಚಟುವಟಿಕೆಗಳು ಮತ್ತು ವ್ಯಾಯಾಮದ ಈವೆಂಟ್‌ಗಳಲ್ಲಿ ಭಾಗವಹಿಸಲು ಜನರನ್ನು ಉತ್ತೇಜಿಸುವ ವಾಕಥಾನ್‌ಗಳು, ಸೈಕ್ಲಿಂಗ್ ಈವೆಂಟ್‌ಗಳು ಮತ್ತು ಫಿಟ್‌ನೆಸ್ ತರಗತಿಗಳ ಮೂಲಕ ಮತ್ತೊಂದು ಮಾರ್ಗವಾಗಿದೆ.

[t4b-ticker]

You May Also Like

More From Author

+ There are no comments

Add yours