ನಿಗಮ-ಮಂಡಳಿ ಅಧಿಕಾರ 2 ವರ್ಷ ಮಾತ್ರ ಏಕೆ?

 

ಬೆಂಗಳೂರು : ಪಕ್ಷಕ್ಕಾಗಿ ದುಡಿದ ಎಲ್ಲಾ ಶಾಸಕರು, ಕಾರ್ಯಕರ್ತರಿಗೂ ಅಧಿಕಾರ ಸಿಗಲಿ ಎಂದು ನಿಗಮ ಮಂಡಳಿಗಳಿಗೆ ಎರಡು ವರ್ಷ ಅವಧಿಯ ಸೂತ್ರವನ್ನು ಹೈಕಮಾಂಡ್ ಮಾಡಿದೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ನಿಗಮ ಮಂಡಳಿ ಅಧಿಕಾರವಧಿಯನ್ನು ಎರಡು ವರ್ಷ ಮೀಸಲಿಗೆ ಕೆಲ ಶಾಸಕರ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ಎಲ್ಲರಿಗೂ ಅವಕಾಶ ದೊರೆಯಬೇಕು.

ಇತರರಿಗೂ ಅಧಿಕಾರ ಹಂಚಬೇಕು. ಆದ ಕಾರಣ 2 ವರ್ಷ ಮಾತ್ರ ಅಧಿಕಾರವಧಿ ಎಂದು ಹೇಳಿದ್ದೇವೆ ಎಂದರು.

ಇದನ್ನೂ ಓದಿ: ಸಂವಿಧಾನ ವಿರೋಧಿ BJP-RSS ಅನ್ನು ತಿರಸ್ಕರಿಸಿ:ಸಿಎಂ ಸಿದ್ದರಾಮಯ್ಯ ಕರೆ

ಹೈಕಮಾಂಡ್ ಕೊಟ್ಟಿರುವ ಸೂತ್ರವನ್ನು ನಾವು ಜಾರಿಗೆ ತಂದಿದ್ದೇವೆ. ಇಲ್ಲಿ ಸಿದ್ದರಾಮಯ್ಯ ಅವರದ್ದು ಏನೂ ಇಲ್ಲ, ನನ್ನದೂ ಏನೂ ಇಲ್ಲ. ಪಕ್ಷ ಅಧಿಕಾರಕ್ಕೆ ಬರಲು ಸಾಕಷ್ಟು ಕಾರ್ಯಕರ್ತರು ದುಡಿದಿದ್ದಾರೆ. ಆದ ಕಾರಣ ಎಲ್ಲರಿಗೂ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಹೈಕಮಾಂಡ್ ಹೇಳಿದ ಹಾಗೆ ಎರಡು ವರ್ಷಕ್ಕೆ ಅಧಿಕಾರ ಸೀಮಿತ ಮಾಡಿದ್ದೇವೆ ಅಂತ ಸಮರ್ಥನೆ ನೀಡಿದರು.

 

[t4b-ticker]

You May Also Like

More From Author

+ There are no comments

Add yours