ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ಹನಿ ಹನಿ ನೀರು ಅಮೂಲ್ಯವಾಗಿದ್ದು  ನೀರನ್ನು ಉಪಯೋಗಿಸಿದ ನಂತರ ಬಂದ್ ಮಾಡಿದರೆ ನೀರನ್ನು ಸಂರಕ್ಷಣೆ ಆಗುತ್ತದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಜೋಗಿಮಟ್ಟಿ ರಸ್ತೆಯ ಕೆಎಸ್ಆರ್ಟಿಸಿ ಬಡಾವಣೆಯಲ್ಲಿ ನಗರಸಭೆ ವತಿಯಿಂದ ನೂತನವಾಗಿ ಕಲ್ಪಿಸಿರುವ ಕುಡಿಯುವ ನೀರಿನ ಸಂಪರ್ಕಕ್ಕೆ ಚಾಲನೆ ನೀಡಿ ಮಾತನಾಡಿದರು.
ನಗರದಲ್ಲಿ ನೀರಿನ ಸಮಸ್ಯೆ ಇಲ್ಲದಂತೆ ಮಾಡಲಾಗಿದೆ. ಯಾರು ನೀರಿನ ಹಾಹಕಾರ ಎದುರಿಸುತ್ತಿಲ್ಲ. ಎಲ್ಲಾರ ಮನೆ ನೀರು ಸರಬರಾಜು ಆಗುತ್ತಿದೆ. ಕೆಎಸ್ಆರ್ಟಿಸಿ ಹೊಸ ಬಡಾವಣೆ ಆದ್ದರಿಂದ ನೀರಿನ ಸಂಪರ್ಕ ಇರಲಿಲ್ಲ. ಆದ್ದರಿಂದ ಸ್ಥಳೀಯರು ನನಗೆ ಮನವಿ ಮಾಡಿದ್ದರು ಕೂಡಲೇ ನಗರಸಭೆ ಅಧಿಕಾರಿಗಳಿಗೆ ತಳಿಸಿ 5 ರಿಂದ 6 ಲಕ್ಷ ವೆಚ್ಚದಲ್ಲಿ ಹೊಸ ಪೈಪ್ ಲೈನ್ ಮಾಡುವ ಮುಖಾಂತರ ನೂರಾರು ಮನೆಗಳಿಗೆ ಪ್ರತಿ ಮನೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದರು.
ನಗರಸಭೆ 34 ಮತ್ತು 35 ನೇ ವಾರ್ಡ್ ಗಳು ಹೆಚ್ಚು ಜನಸಂಖ್ಯೆ ಮತ್ತು ಪ್ರದೇಶವನ್ನು ಹೊಂದಿದ್ದು ಸಮಾರು 30 ಕೋಟಿ ಹಣ ನೀಡಿ ಸಿ.ಸಿ.ರಸ್ತೆಗಳು ಮಾಡಲಾಗಿದೆ. ಇನ್ನು 11 ಕೋಟಿ ಹಣ ರಸ್ತೆಗಳ ಅಭಿವೃದ್ಧಿಗೆ ನೀಡಿದ್ದು ಕೆಲಸ ಪ್ರಾರಂಭವಾಗುವ ಹಂತದಲ್ಲಿದೆ. ಐಯುಡಿಪಿ, ಟೀಚರ್ಸ್ ಕಾಲೋನಿ, ಕೆಎಸ್ಆರ್ಟಿಸಿ ಬಡಾವಣೆಗಳಲ್ಲಿ ಖಾಲಿ ಇರುವ ಸ್ಥಳಗಳನ್ನು ಸ್ಥಳೀಯರು ಸ್ವಚ್ಚವಾಗಿಟ್ಟಕೊಂಡರೆ ಉತ್ತಮ ಆರೋಗ್ಯ ಪಡೆಯಬಹುದು ಎಂದು ಸ್ಥಳೀಯರಿಗೆ ಕಿವಿ ಮಾತು ಹೇಳಿದರು.
ನಗರಸಭೆ ಪರಿಸರ ಅಧಿಕಾರಿಗೆ ಎಲ್ಲಾ ಕಡೆ ಸ್ವಚ್ಚತೆಗೆ  ಗ್ಯಾಂಗ್ ಮೂಲಕ ಮೊದಲು ಸ್ವಚ್ಚತೆ ಮಾಡುತ್ತಿದ್ದಲ್ಲ ಆ ಮಾದರಿಯಲ್ಲಿ ಹೆಚ್ಚು ಜನರನ್ನು ಬಿಟ್ಟು  ಖಾಲಿ ಸ್ಥಳಗಳ ಕಡೆ ಸ್ವಚ್ಚಗೊಳಿಸಲು ಸೂಚಿಸಿದರು.ಸ್ಥಳೀಯರು ಹೊಸ ಬಡಾವಣೆಗೆ ಬೀದಿ ದೀಪ ಕೇಳಿದ್ದು ಕೂಡಲೇ 10 ರಿಂದ 15 ಬೀದಿ ದೀಪಗಳನ್ನು ಹಾಕಲು ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅತಿ ಹೆಚ್ಚ ಜನವಸತಿ ಪ್ರದೇಶದಲ್ಲಿ ಮೊದಲು ಪಾರ್ಕ್ ಅಭಿವೃದ್ಧಿ ಮಾಡಲಾಗುತ್ತಿದೆ. ಈಗ ಆದಿಶಕ್ತಿ ನಗರ,  ಐಯುಡಿಪಿ, ಜೋಗಿಮಟ್ಟಿ ರಸ್ತೆಯಲ್ಲಿ 1.5೦ ಕೋಟಿ  ಮೂರು ಪಾರ್ಕ್ ಗಳ  ಅಭಿವೃದ್ಧಿ   ಕಾಮಗಾರಿ ಸದ್ಯದಲ್ಲೇ  ಪ್ರಾರಂಭಿಸಲಾಗುವುದು. ಜೋಗಿಮಟ್ಟಿ ತಿರುವಿನಲ್ಲಿ ಪೂರ್ಣ ರಸ್ತೆ ಮಾಡಲು 3 ಕೋಟಿ ಹಣ ನೀಡಿದ್ದು ವಿಶಾಲವಾದ ರಸ್ತೆ ಮತ್ತು ಅಲಂಕಾರಿಕ ಬೀದಿ ದೀಪ ಹಾಕಲಾಗುತ್ತದೆ  ಎಂದು ಹೇಳಿದರು‌.
ನಗರಸಭೆ ಸದಸ್ಯೆ ಶ್ರೀದೇವಿ ಚಕ್ರವರ್ತಿ,    ನಗರಸಭೆ ಪೌರಯುಕ್ತರಾದ ಹನುಮಂತರಾಜು,
ಮುಖಂಡರದಾ ಆರ್. ರಾಮು, ಹೇಮಂತ್ ಕುಮಾರ್, ಹನುಮಂತರೆಡ್ಡಿ, ಸೀತಾರಾಮಯ್ಯ, ಜನಿನಿ ಪ್ರಭು, ಭಗತ್, ಪರಮೇಶ್ವರಯ್ಯ ಇದ್ದರು.
[t4b-ticker]

You May Also Like

More From Author

+ There are no comments

Add yours