ವೇಣೂರು: ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.
ಈ ಬಾರಿಯ 11ನೇ ವರ್ಷದ ಆಚರಣಾ ಸಮಿತಿಯ ಗೌರವಾಧ್ಯಕ್ಷರಾಗಿ ಬಾಲಕೃಷ್ಣ ಭಟ್ ಕಾಮೆಟ್ಟು ಅವರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ದಯಾನಂದ ದೇವಾಡಿಗ ಹಾಗೂ ಕಾರ್ಯದರ್ಶಿ ಸಂತೋಷ್ ಮಂಜಲೊಕ್ಕು ಹಾಗೂ ಕೋಶಾಧಿಕಾರಿಯಾಗಿ ಪ್ರಮೋದ್ ಶೆಟ್ಟಿ ಸಿರಿಮನೆ ಆಯ್ಕೆಯಾದರು.
ಸದಸ್ಯರುಗಳಾಗಿ ಸತೀಶ್ ಚಿಗುರು, ಅರವಿಂದ ಶೆಟ್ಟಿ, ಪುರುಷೋತ್ತಮ ಪೂಜಾರಿ, ಬಾಲಕೃಷ್ಣ ದೇವಾಡಿಗ, ರಾಜೇಶ್ ಶೆಟ್ಟಿ ಮೂಡುಕೋಡಿ, ಗಣೇಶ್ ದೇವಾಡಿಗ ವೇಣೂರು, ಸೇಷ ಎಂ., ಶಿವರಾಮ ಕನಡ ಕುಕ್ಕೇಡಿ ಆಯ್ಕೆಯಾಗಿದ್ದಾರೆ.




