ವೇಣೂರು: ಇತಿಹಾಸ ಪ್ರಸಿದ್ಧ ಅಳದಂಗಡಿ ಬರಾಯ ಅರಮನೆಯಲ್ಲಿ ವಾರ್ಷಿಕ ಮಹಾಲಯ ಕಾರ್ಯ ಹಾಗೂ ದೈವಗಳ ನೇಮೋತ್ಸವವು ಜು. 7ರಿಂದ 9ರವರೆಗೆ ನಡೆಯಲಿದೆ.
ನಿನ್ನೆ ಜು. 7ರಂದು ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಅಳದಂಗಡಿ ಅರಮನೆ ಬಿಟ್ಟು ಬರಾಯ ಅರಮನೆಗೆ ಪ್ರವೇಶಿಸುವ ಮೂಲಕ ಧಾರ್ಮಿಕ ವಿಧಿ ವಿಧಾನ ನಡೆದಿದೆ.
ಜು. 8ರಂದು ಮಧ್ಯಾಹ್ನ ಮಹಾಲಯಕಾರ್ಯ ನಡೆಯುತ್ತಿದೆ. ರಾತ್ರಿ ನೆತ್ತರಮುಗುಳಿ ಹಾಗೂ ಪುರುಷರಾಯ ದೈವಗಳ ನೇಮೋತ್ಸವ ನಡೆಯಲಿದೆ.
ಜು. 9ರಂದು ರಾತ್ರಿ 7-00 ಗಂಟೆಯಿಂದ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ, ಬಳಿಕ ಮೂಜಿಲ್ನಾಯ ದೈವಗಳ ನಢಮೋತ್ಸವ ನಡೆಯಲಿದೆ.



