ವೇಣೂರು: ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂಚಾಯತಿಯವರ ಸಹಭಾಗಿತ್ವದೊಂದಿಗೆ ಸಂಜೀವಿನಿ ಒಕ್ಕೂಟ, ಪಿಯು ಕಾಲೇಜು ವೇಣೂರು ಇವರೆಲ್ಲರ ಸಹಯೋಗದೊಂದಿಗೆ ದಂಪತಿ ಸಬಲೀಕರಣ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ವೇಣೂರು ಗ್ರಾ.ಪಂ. ಅಧ್ಯಕ್ಷ ಮಲ್ಲಿಕಾ ಕಾಶಿನಾಥ್ ಹೆಗ್ಡೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯೆ ಶಂಭಾಷಿಣಿ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಅಂತರ ಫಲಾನುಭವಿಗಳು 6, ಉದರ ದರ್ಶಕಕ್ಕೆ 1, ಛಾಯಾ ಮಾತ್ರೆ ಪಡೆದವರು 2 , ನಿರೋದ್ ಬಳಕೆ1 ., ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳಾಗಿ ಮನವೊಲಿಸುವಿಕೆಯ ಮುಖಾಂತರ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಿಂದ ನಡೆಸಲಾಯಿತು.



