ಕಾವೂರು: ಇಲ್ಲಿಯ ಗಾಂಧಿನಗರ ದೋಟ ಕುಲಾಲರ ಕರ್ಮರನ್ ಗೋತ್ರದ ನಾಗಮೂಲ ದೈವಸ್ಥಾನದಲ್ಲಿ ಆ. 17ರಂದು ನಾಗರ ಪಂಚಮಿ ಪ್ರಯುಕ್ತ ಶ್ರೀ ನಾಗದೇವರಿಗೆ ನಾಗತಂಬಿಲ ಸೇವೆ ಜರಗಲಿದೆ.

ಸಂಕ್ರಮಣ ಪೂಜೆ, ಮಹಾಸಭೆ, ಸನ್ಮಾನ ಕಾರ್ಯಕ್ರಮ
ಅಂದು ಬೆಳಿಗ್ಗೆ 9-30ಕ್ಕೆ ಸಂಕ್ರಮಣ ಪೂಜೆ ನಡೆಯಲಿದೆ. 10-00 ಗಂಟೆಗೆ ಮಹಾಸಭೆ, 10-30ಕ್ಕೆ ಶೈಕ್ಷಣಿಕ ಸಾಧಕಿ ಪಿಯುಸಿಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಂಡಿರುವ ಕುಟುಂಬದ ಸದಸ್ಯರ ಪುತ್ರಿ ಕು. ಜ್ಞಾನಶ್ರೀ ಡಿ. ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಳಿಕ 11-30ಕ್ಕೆ ಶ್ರೀ ನಾಗದೇವರಿಗೆ ಕುಟುಂಬ ಸದಸ್ಯರಿಂದ ಸಾಮೂಹಿಕ ನಾಗತಂಬಿಲ ಸೇವೆ ನಡೆಯಲಿದೆ. ಈ ಬಾರಿ ಸಂಕ್ರಮಣ (ಸಿಂಹ ಸಂಕ್ರಮಣ) ಪೂಜೆಯಂದೇ ನಾಗರಪಂಚಮಿ ಬಂದಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕುಟುಂಬ ಸದಸ್ಯರು ಹಾಗೂ ಮನೆಯವರು ಪಾಳ್ಗೊಂಡು ಶ್ರೀ ದೇವರುಗಳ ಕೃಪೆಗೆ ಪಾತ್ರರಾಗುವಂತೆ ಆಡಳಿತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ವಿ.ಸೂ.: ನಾಗರಪಂಚಮಿಯಂದು ಕುಟುಂಬದ ಸದಸ್ಯರು ಮಕ್ಕಳ ಸಹಿತ ಆಧಾರ್ ಕಾರ್ಡ್ ಪ್ರತಿಯನ್ನು ಟ್ರಸ್ಟ್ಗೆ ನೀಡುವಂತೆ ಆಡಳಿತ ಸಮಿತಿ ಪ್ರಕಟಣೆ ತಿಳಿಸಿದೆ.
ನಾಗರಪಂಚಮಿ ದಿನ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದ್ದು, ಧನ ಸಹಾಯ ನೀಡಲಿಚ್ಚಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9341608047 ಕುಠೀರ ಮನೆಯ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.




