ಜಾಜೂರು ಉಪ ಪೊಲೀಸ್ ಠಾಣೆ ಮೇಲ್ದರ್ಜೆಗೇರಿಸಿ :ಶಾಸಕ ಟಿ.ರಘುಮೂರ್ತಿ

 

 

 

 

ಬೆಳಗಾವಿ ಸುವರ್ಣವಿಧಾನಸೌಧ ಡಿ.06: ಚಳ್ಳಕೆರೆ ತಾಲ್ಲೂಕು ಪರುಶುರಾಂಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಜಾಜೂರು ಉಪ ಪೊಲೀಸ್ ಠಾಣೆಯನ್ನು ಮೇಲದ್ದರ್ಜೆಗೇರಿಸುವ ಕುರಿತಂತೆ ಶಾಸಕ (MLA)ಟಿ.ರಘಮೂರ್ತಿ ಬೆಳಗಾವಿಯ ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

 

 

ಜಾಜೂರು ಆಂದ್ರ ಪ್ರದೇಶ ಗಡಿಭಾಗದಲ್ಲಿದೆ. ಇಲ್ಲಿ ಅನೇಕ ವಾಹನಗಳು ಸಂಚರಿಸುತ್ತಿದ್ದು, ರಸ್ತೆ ಅಪಘಾತ ಹಾಗೂ ಕಳ್ಳತನ ಪ್ರಮಾಣ ಹೆಚ್ಚಾಗುತ್ತಿದೆ. ಉಪಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರೆತೆ ಇದೆ. ಇದನ್ನು ಸರಿಪಡಿಸಲು ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಚುಕ್ಕೆ ಗುರುತಲ್ಲದ ಪ್ರಶ್ನೆ ಸಂಖ್ಯೆ 77ರಲ್ಲಿ ಶಾಸಕ ಟಿ.ರಘುಮೂರ್ತಿ ಕೇಳಿದ್ದಾರೆ.

ಜಾಜೂರು ಉಪಠಾಣೆ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷದಲ್ಲಿ ವಾರ್ಷಿಕವಾಗಿ ಸರಾಸರಿ 32 ಅಪಘಾತ ಮತ್ತು 126 ಅಪರಾಧ ಪ್ರಕರಣಗಳು ದಾಖಲಾಗಿವೆ. ಸದ್ಯ ಅಪಘಾತ ಹಾಗೂ ಕಳ್ಳತನ ತಡೆಗಟ್ಟಲು ಪರುಶುರಾಂಪುರ ಠಾಣೆಯಿಂದ ಅಗತ್ಯ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಮಂಗಳವಾರ ಲಿಖಿತವಾಗಿ ಉತ್ತರಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours