ದಾವಣಗೆರೆ ನೂತನ ಎಸ್‍ಪಿಯಾಗಿ ಉಮಾ ಪ್ರಶಾಂತ್ ಅಧಿಕಾರ ಸ್ವೀಕಾರ  

 

ದಾವಣಗೆರೆ ;ಆ.25( ಕರ್ನಾಟಕ ವಾರ್ತೆ):  ದಾವಣಗೆರೆಯ ನೂತನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿ ಉಮಾ ಪ್ರಶಾಂತ್  ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಜಿಲ್ಲೆಯಲ್ಲಿ ಕ್ರಿಮಿನಲ್ ಚಟುವಟಿಕೆ ತಡೆಗಟ್ಟುವುದು,  ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮವಹಿಸಲಾಗುತ್ತದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಿರುವುದರಿಂದ ಹಾದು ಹೋಗಿರುವುದರಿಂದ ಹೆಚ್ಚು ಅಪಘಾತ ಸಂಭವಿಸುತ್ತದೆ, ಅಪಘಾತಗಳ ತಡೆಗೆ ಕ್ರಮ ಕೈಗೊಳ್ಳಲಾಗುತ್ತದೆ.  ಪೆÇಲೀಸರ ಜನಸ್ನೇಹಿಯಾಗಿರುಲು ಕ್ರಮ ಕೈಗೊಂಡು ಎಲ್ಲರ ಸಹಕಾರದೊಂದಿಗೆ ಉತ್ತಮ ಕೆಲಸÀ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು. ಈ ವೇಳೆ ಈ ಹಿಂದಿನ ಎಸ್.ಪಿ ಆಗಿದ್ದ ಡಾ.ಅರುಣ್ ಕೆ ಅವರು ಅಧಿಕಾರ ಹಸ್ತಾಂರಿಸಿ ಶುಭ ಕೋರಿದರು.

[t4b-ticker]

You May Also Like

More From Author

+ There are no comments

Add yours