ರಾಜ್ಯದ ಶಾಸಕರಿಗೆ ತಿಪ್ಪಾರೆಡ್ಡಿ ಅಭಿವೃದ್ದಿ ಕಾರ್ಯಗಳು ಮಾದರಿ: ಮಾಜಿ ಸಿಎಂ ಯಡಿಯೂರಪ್ಪ

 

ಚಿತ್ರದುರ್ಗ,ಜ.20.

ಈ ಒಂದು ಸಲ ಕಾಂಗ್ರೇಸ್ ಹೊಡೆದೊಡಿಸಿದರೆ ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಅಡ್ರಸ್ ಇರುವುದಿಲ್ಲ. ಮೀಸಲಾತಿ ನಿರ್ಧಾರ ದೊಡ್ಡ ಕೊಡುಗೆ ನೀಡಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೂ  ನಮಗೆ ಜಾತಿ ಗೊತ್ತಿಲ್ಲ. ಆದರೆ ಕಾಂಗ್ರೆಸ್  ಜಾತಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದೀರಿ. ನೀವು ಇದರಲ್ಲಿ ಯಶಸ್ಸು ಕಾಣಿವುದಿಲ್ಲ ಎಂದು ಕಾಂಗ್ರೆಸ್ ವಿರುದ್ದ ಯಡೆಯೂರಪ್ಪ ಕಿಡಿ ಕಾರಿದ್ದಾರೆ.

ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಬಿಜೆಪಿವತಿಯಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋದಿ ಅವರಿಗೆ ಕಾಂಗ್ರೇಸ್‌ನ ಯಾವೊಬ್ಬ ವ್ಯಕ್ತಿಯು ಸರಿ ಸಮಾನರಿಲ್ಲ. ಒಂದು ದಿನ ನಿದ್ರೆ ಮಾಡದೆ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪಕ್ಷದಲ್ಲಿರುವ ನಾವುಗಳು ಪಕ್ಷಕ್ಕೆ ನಾವು ಕೆಲಸ ಮಾಡಬೇಕು.ಹಣಬಲ ಹೆಂಡದ ಬಲ ಹೊಂದಿ ಆಧಿಕಾರ ಹಿಡಿದಿದ್ದ ಕಾಂಗ್ರೇಸ್ ಇಂದು ಮೊಲೆ ಗುಂಪಾಗಿದೆ. ರಾಹುಲ್ ಹೊರದೇಶದಲ್ಲಿ ನಮ್ಮ ದೇಶದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಇವರು ತಪ್ಪು ಮಾಡಿದ್ದಾರೆ ಎಂದು ಗೊತ್ತಿದ್ದರು ಕ್ಷಮೆ ಕೇಳಿಲ್ಲ. ಇದರಿಂದ ಲೋಕಾಸಭೆ ಕಾರ್ಯಕಲಾಪಗಳು ನಿಂತಿವೆ ಎಂದು ದೂರಿದರು.

ಗ್ಯಾರೆಂಟಿ ಕಾರ್ಡ್ ೫೦ ವರ್ಷ ದೇಶ ಆಳಿದ ನೀವು ಏನು ಕೊಟ್ಟಿದ್ದಿರಾ. ತಿರುಕನ ಕನಸ್ಸು ಕಾಣುತ್ತಿದ್ದಿರಿ. ಸೂರ್ಯ ಚಂದ್ರರ ಸಾಕ್ಷಿಯಾಗಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಲೂಟಿ ಮಾಡಿದ ಹಣ ಜನರ ಹಣಕ್ಕೆ ಉತ್ತರ ಕೊಡಿ. ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಪ್ರಸ್ತಾಲ ಮಾಡಲು ನಿಮಗೆ ನೈತಿಕ ಹಕ್ಕಿಲ್ಲ.ಜಗತ್ತೇ ಇಂದು ಮೋದಿ ಅವರ ಕಡೆ ನೋಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ೨ ಸ್ಥಾನಗಳನ್ನು ಗೆದ್ದು ಸರ್ವ ನಾಶ ಆಗಿದ್ದಿರಿ ಎಂದು ದೂರಿದ್ದು, ೮೦ ವರ್ಷ ಆಗಿರುವ ನಾನು ಮನೆ ಸೇರಿಲ್ಲ. ಎಲ್ಲಾ ಜನರ ಜೊತೆ ಸೇರಿ ಮತ್ತೊಮ್ಮೆ ಅಧಿಕಾರಕ್ಲೆ ತರಬೇಕು. ವೀರಶೈವ ಭಾಂದವರಲ್ಲಿ ಯಡಿಯೂರಪ್ಪ ಅಧ್ಯಕ್ಷ ಸ್ಥಾನದಿಂದ ಇಳಿಸಿ ಅಪಮಾನ ಮಾಡಿದ್ದಾರೆ ಸುಳ್ಳು ಹೇಳಿಕೆ ನೀಡಿದ್ದಾರೆ. ಇದು ನಾನೇ ತೆಗೆದು ಕೊಂಡ ನಿರ್ಧಾರ ಎಂದರು.

ಭದ್ರ ಯೋಜನೆಯನ್ಮು ರಾಷ್ಟೀಯ ಯೋಜನೆ ಮಾಡಿ ೫೪೦೦ ಕೋಟಿ ನೀಡಲಾಗಿದೆ. ಮಹಿಳೆಯರ ಸಬಲಿಕರಣಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದೆವೆ. ಈ ಯೋಜನೆಗಳನ್ನು ಮನೆ ಮನೆಗೆ ತಿಳಿಸುವ ಕೆಲಸ. ಕಾಂಗ್ರೇಸ್ ಅವರನ್ನು ಮನೆ ಬಾಗಿಲಿಗೆ ಸೇರಿಸಬೇಡಿ. ತೊಘಲಕ್ ದರ್ಬಾರ್ ಮಾಡಿದ್ದಾರೆ. ಜಿಲ್ಲೆಯ ಉಸ್ತವಾರಿ ತೆಗೆದುಕೊಂಡು ಜಿಲ್ಲೆಯ ಎಲ್ಲಾ ಸ್ಥಾನಗಳನ್ನು ಗೆಲ್ಲಿಸಿಕೊಂಡು ಬನ್ನಿ. ಈ ಚುನಾವಣೆ ಮತ್ತು ಮುಂದಿನ ಚುನಾವಣೆಯನ್ನು ಗೆಲ್ಲಿಸಬೇಕಿದೆ ಇದು ನನ್ನ ಕರ್ತವ್ಯ ಎಂದು ಯಡೆಯೂರಪ್ಪ ತಿಳಿಸಿದರು.

ಕಳೆದ ಭಾರೀ ತಿಪ್ಪಾರೆಡ್ಡಿ ಅವರನ್ನು ೨೫ ಸಾವಿರ ಮತಗಳ ಅಂತರದಿAದ ಗೆದ್ದಿದ್ದರು, ಆದರೆ ಈ ಭಾರೀ ೪೫ ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಕಾಂಗ್ರೇಸ್ ನವರು ೪ ತಲೆಮಾರಿಗೆ ಆಗುವಷ್ಟು ಗಂಟು ಮಾಡಿದ್ದೆವೆ ಎಂದು ಹೇಳಿದ್ದರು ಅದನ್ನು ಯಾರೂ ಕೂಡ ಅಲ್ಲಗೆಳೆದಿಲ್ಲ. ರಮೇಶ್ ಕುಮಾರ್ ಹೇಳಿಕೆಗೆ ಮೊದಲು ಉತ್ತರ ಕೊಟ್ಟು ನಂತರ ಮತ ಕೇಳಿ ಎಂದರು.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ ಡಬಲ್ ಇಂಜಿನ್ ಸರ್ಕಾರದಿಂದ ದೇಶ ಹಾಗೂ ರಾಜ್ಯದಲ್ಲಿ ಅಭಿವೃದ್ಧಿಯ ಮಹಾಪೂರ ನಿರ್ಮಾಣವಾಗಿದೆ. ಇದರಿಂದಲೇ ಇಂದು ಬಿಜೆಪಿ ಕಾರ್ಯಕ್ರಮಕ್ಕೆ ಹೆಚ್ಚು ಜನರು ಸೇರುತ್ತಿದ್ದಾರೆ. ಬಿಜೆಪಿ ಸರ್ಕಾರದ ಎಲ್ಲಾ ವರ್ಗದ ಜನರನ್ನು ಪ್ರೀತಿಸುತ್ತದೆ. ಆದ್ದರಿಂದಲೇ ಇಂದು ಜನರು ಬಿಜೆಪಿಯತ್ತ ಬರುತ್ತಿದ್ದಾರೆ. ಕಾರ್ಮಿಕ ಮಕ್ಕಳಿಗೆ ಬಸ್ ಪಾಸ್, ಗ್ಯಾರೆಂಟಿ ಕಾರ್ಡ್ ಕೊಟ್ಟು ನಾವು ಯೋಜನೆಗಳನ್ನು ಜಾರಿಗೆ ತರಲಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಕೇಂದ್ರೀಯ ವಿದ್ಯಾಲಯ ಈ ವರ್ಷ ಪ್ರಾರಂಭ ಮಾಡಲಿದ್ದೆವೆ. ಈ ಕೆಲಸವನ್ನು ಯಾಕೆ ಯಾವ ಸಂಸದರು ಮಾಡಲಿಲ್ಲ. ರಾಹುಲ್ ಗಾಂಧಿ ಜಮ್ಮುಗೆ ಹೋದಾಗ ಬಯೋತ್ಪಾದಕರನ್ನು ನೋಡಿದರಂತೆ. ಗಂಭೀರವಾಗಿ ನಕ್ಕಂತಹ ಅವರಿಗೆ ಮತ ಹಾಕಬೇಕು ನೀವೇ ತೀಮ್ನಾ ಮಾಡಿ. ಮತ್ತೊಮ್ಮೆ ತಿಪ್ಪಾರೆಡ್ಡಿ ಸೇರಿದಂತೆ ೬ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ ಚಿತ್ರದುರ್ಗವನ್ನು ಬರದ ನಾಡನ್ನು ಕೆಲವೆ ದಿನಗಳಲ್ಲಿ ಬಂಗಾರದ ಮಾಡ ಆಗಲಿದೆ. ಇದಕ್ಕೆ ಯಡಿಯೂರಪ್ಪ ಅವರ ಕೊಡುಗೆಯೆ ಕಾರಣ. ೨೦೦೦ ಕೋಟಿ ರೂ.ಗಳ ರೈಲ್ವೆ ಯೋಜನೆ, ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿದೆ. ದೇವರಿಗೆ ನೈವೇದ್ಯ ಓಕೆ. ದೆವ್ವಕ್ಕೆ ಹುಣುಸೆ ಜರಲು ಹಿಡಿದು ಜಾಡಿಸಬೇಕು. . ಈ ಭಾರೀ ಟಿಪ್ಪು ಜಪ ಕಡಿಮೆ ಮಾಡಿ, ಸುಳ್ಳಿನ ಕಾರ್ಡ್ ನೀಡುವ ಮೂಲಕ ಟೋಪಿ ಸುಲ್ತಾನ್ ಅಗಿದ್ದಾರೆ. ಆಸೆ ತೋರಿಸುವವರು ಮೋಸ ಮಾಡುವುದು ಗ್ಯಾರೆಂಟಿ. ಕೊತ್ವಾಲ್ ರಾಮಚಂದ್ರ ಮೈಮೇಲೆ ಬಂದು ವ್ಯಕ್ತಿಯನ್ಮು ಜೈಲಿಗೆ ಹಾಕಿಸಿದ್ದಾರೆ. ಇಂತಹವರು ಇಂದು ೨೦೦ ಯುನಿಟ್ ಉಚಿತ ಅಂತೇ. ಇವರನ್ನು ವಿದ್ಯುತ್ ಕೇಳಿದರೆ ಜೈಲು ಗ್ಯಾರೆಂಟಿ. ಒಬ್ಬ ನಾಯಕರು ೪೦ ವರ್ಷ ರಾಜಕಾರಣ ಮಾಡಿದವರಿಗೆ ಗೆಲ್ಲುವ ಗ್ಯಾರೆಂಟಿ ಇಲ್ಲ. ಮತ್ತೊಮ್ಮೆ ಬಿಜೆಪಿ ಗೆಲುವು ಗ್ಯಾರೆಂಟಿ ಎಂದರು.

ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಮಾತನಾಡಿ, ಕ್ಷೇತ್ರದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯ ಮಾಡಿ ಮುಗಿಸಿದ್ದೆನೆ. ಯಾವುದೇ ಕೆಲಸ ಭಾಕಿ ಇಲ್ಲ. ಗ್ಯಾಸ್ ಲಿಂಕ್, ಸೇರಿದಂತೆ ಕೆಲವು ಕೆಲಸಗಳಿಗೆ ಶೀಘ್ರವೇ ಚಾಲನೆ ದೊರೆಯಲಿದೆ. ಮೋದಿ ಸರ್ಕಾರ ಭದ್ರ ಯೋಜನೆಗೆ ೫ ಸಾವಿರ ಕೋಟಿ ನೀಡಿ ಕುಡಿಯುವ ನೀರಿಗೆ ಆದ್ಯತೆ ನೀಡಿದ್ದಾರೆ.ಚುನಾವಣೆ ಪ್ರಣಾಳಿಕೆಯಂತೆ ಹಕ್ಕುಪತ್ರ ನೀಡಿದ್ದೇವೆ.ಮನೆ ಇಲ್ಲದವರಿಗೆ ಮನೆಗಳನ್ನು ಕಟ್ಟಿಸುವ ಕೆಲಸ ಮಾಡಲಾಗುತ್ತಿದೆ. ವಿರೋಧ ಪಕ್ಷದವರಿಗೆ ಗೆದ್ದರೆ ಏನು ಕೆಲಸ ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಅಷ್ಟೊಂದು ಕೆಲಸ ಮಾಡಿದ್ದೆವೆ. ೨೦೨೩ ಚುನಾವಣೆಯಲ್ಲಿ ಜಿಲ್ಲೆಯ ೬ ಕ್ಷೇತ್ರ ಸೇರಿದಂತೆ ೧೫೦ ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿದ್ದೇಶ್ ಯಾದವ್, ಅನಿತ್ ಕುಮಾರ್ ಡಾ.ಸಿದ್ದಾರ್ಥ ಗುಡಾರ್ಪಿ, ಸುರೇಶ್ ಸಿದ್ದಾಪುರ,ಮಾಜಿ ಶಾಸಕ ತಿಪ್ಪೇಸ್ವಾಮಿ, ವಿಧಾನ ಪರಿಷತ್ ಸದಸ್ಯ ರವಿ, ಜಿಲ್ಲಾಧ್ಯಕ್ಷ ಎ.ಮುರಳಿಧರ್ ಸೇರಿದಂತೆ ಇತರರು ಭಾಗವಹಿಸಿದ್ದರು ಇದಕ್ಕೂ ಮುನ್ನಾ ನಗರದ ಹೊಳಲ್ಕೆರೆ ರಸ್ತೆಯ ಸಂಗೂಳ್ಳಿ ರಾಯಣ್ಣ ಪ್ರತಿಮೆಯಿಂದ ಹಳೇ ಮಾಧ್ಯಮಿಕ ಶಾಲಾ ಆವರಣದವರೆಗೆ ಮೆರವಣಿಗೆಯನ್ನು ನಡೆಸಲಾಯಿತು.

[t4b-ticker]

You May Also Like

More From Author

+ There are no comments

Add yours