ಮಂತ್ರಿಗಿರಿಗೆ ಭರ್ಜರಿ ಪೈಪೋಟಿ ಸಂಭನೀಯ ಸಚಿವರ ಪಟ್ಟಿ ಹೀಗಿದೆ‌.

 

ಬೆಂಗಳೂರು: ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಬರುತ್ತಿದ್ದಂತೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಸಿಎಂ ಸ್ಥಾನಕ್ಕಾಗಿ ಜಿದ್ದಿಗೆ ಬಿದ್ದಿದ್ದರು. ಈ ಸಂದರ್ಭದಲ್ಲಿ ಇಬ್ಬರು ನಾಯಕರನ್ನು ಮನವೋಲಿಸುವುದೇ ಹೈಕಮಾಂಡ್​ಗೆ ಭಾರೀ ತಲೆನೋವಾಗಿತ್ತು.

ಅಂತಿಮವಾಗಿ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ನೀಡಿತ್ತು. ಆದರೆ ಸದ್ಯ ಸಚಿವ ಸಂಪುಟ ರಚನೆ ತಲೆನೋವಾಗಿ ಪರಿಣಮಿಸಿದ್ದು, ಸಚಿವ ಸ್ಥಾನಕ್ಕೆ ಅನೇಕರು ಲಾಬಿ ನಡೆಸುತ್ತಿದ್ದಾರೆ.

ಈ ನಡುವೆ ಸಿದ್ದರಾಮಯ್ಯ ಹಾಗೂ ಡಿಕೆಶಿ ತಮ್ಮ ನಿಷ್ಠಾವಂತ ನಾಯಕರ ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಸಿದ್ದು, ಹೈಕಮಾಂಡ್​ ಮೊರೆ ಹೋಗಿದ್ದಾರೆ. ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್​ನಲ್ಲಿ ಹಲವಾರು ಆಕಾಂಕ್ಷಿಗಳಿದ್ದು. ಈ ಪೈಕಿ ಹಿರಿತನ, ಜಾತಿ ಹಾಗೂ ಪ್ರಾಂತ್ಯವಾರು ವಿಭಜನೆ ಮೂಲಕ ಸಚಿವರನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಈ ನಡುವೆ ಸಂಭವನೀಯ ಸಚಿವ ಸ್ಥಾನಕ್ಕಾಗಿ ಕೆಲವು ಪ್ರಮುಖ ನಾಯಕರ ಹೆಸರುಗಳು ಮುನ್ನಲೆಗೆ ಬಂದಿವೆ.

ಈಶ್ವರ ಖಂಡ್ರೆ, ಲಕ್ಷ್ಮಿ ಹೆಬ್ಬಾಳಕರ್, ಶಿವಾನಂದ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಬಸವರಾಜ್​ ರಾಯರೆಡ್ಡಿ, ಡಾ. ಮಹಾದೇವಪ್ಪ, ಪಿರಿಯಾಪಟ್ಟಣ ವೆಂಕಟೇಶ್, ಎಸ್.ಎಸ್.ಮಲ್ಲಿಕಾರ್ಜುನ, ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ರಹೀಂ ಖಾನ್, ಅಜಯ್ ಸಿಂಗ್, ಪುಟ್ಟರಂಗ ಶೆಟ್ಟಿ, ನರೇಂದ್ರ ಸ್ವಾಮಿ, ಚಿಂತಾಮಣಿ ಸುಧಾಕರ್, ಹಿರಿಯೂರು ಸುಧಾಕರ್ ಅಥವಾ ಚಳ್ಳಕೆರೆ ಟಿ‌.ರಘುಮೂರ್ತಿ, ಎಚ್.ಕೆ. ಪಾಟೀಲ್,  ಚೆಲುವರಾಯಸ್ವಾಮಿ, ಮಧುಗಿರಿ ರಾಜಣ್ಣ ಅಥವಾ ಬಳ್ಳಾರಿ  ನಾಗೇಂದ್ರ, ಮಧು ಬಂಗಾರಪ್ಪ, ಮಾಂಕಾಳ ವೈದ್ಯ, ಶಿವರಾಜ ತಂಗಡಗಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.

ಇನ್ನೊಂದೆಡೆ ಡಿ.ಕೆ.ಶಿ ಮತ್ತು ಸಿದ್ದರಾಮಯ್ಯ ತಮ್ಮ ಬೆಂಬಲಿಗರಿಗೆ ಪ್ರಭಾವಿ ಖಾತೆಗಳನ್ನು ನೀಡಬೇಕೆಂದು ಪಟ್ಟು ಹಿಡಿದಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ಮುಂದುವರೆದಿದೆ.

[t4b-ticker]

You May Also Like

More From Author

+ There are no comments

Add yours