ಹರ್ತಿಕೋಟೆ ಬಳಿ ಫಲಾನುಭವಿಗಳ ಕಾರ್ಯಕ್ರಮ ಜರುಗುವ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

 

ಚಿತ್ರದುರ್ಗ ಮಾರ್ಚ್ 21  (ಕರ್ನಾಟಕ ವಾರ್ತೆ):
ತಾಂಡಾ, ಹಾಡಿ, ಹಟ್ಟಿ ಮುಂತಾದ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿಸಲಾಗಿದ್ದು, ಚಿತ್ರದುರ್ಗ ಸೇರಿದಂತೆ ರಾಜ್ಯ 09 ಜಿಲ್ಲೆಗಳ ಇಂತಹ ಗ್ರಾಮಗಳ ಸುಮಾರು 50 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಸಮಾರಂಭವನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಹರ್ತಿಕೋಟೆ ಗ್ರಾಮದ ಬಳಿ ಏರ್ಪಡಿಸಲಾಗುತ್ತಿದ್ದು, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಮಂಗಳವಾರ ಕಾರ್ಯಕ್ರಮ ಏರ್ಪಡಿಸಲಾಗುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಂಡಾ, ಹಾಡಿ, ಗೊಲ್ಲರಹಟ್ಟಿ, ಹಟ್ಟಿ ಸೇರಿದಂತೆ ವಿವಿಧ ಜನವಸತಿ ಪ್ರದೇಶಗಳನ್ನು ಸರ್ಕಾರದಿಂದ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ.  ಚಿತ್ರದುರ್ಗ ಜಿಲ್ಲೆಯೂ ಸೇರಿದಂತೆ, ತುಮಕೂರು, ವಿಜಯನಗರ, ಹಾವೇರಿ, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ಹಾಸನ ಹಾಗೂ ಚಿಕ್ಕಮಗಳೂರು ಸೇರಿದಂತೆ ಒಟ್ಟು 09 ಜಿಲ್ಲೆಗಳಲ್ಲಿರುವ ಇಂತಹ ಗ್ರಾಮಗಳಲ್ಲಿನ ಸುಮಾರು 50 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಸಮಾರಂಭವನ್ನು ಚಳ್ಳಕೆರೆ- ಹಿರಿಯೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಹರ್ತಿಕೋಟೆ ಗ್ರಾಮದ ಬಳಿ ಆಯೋಜಿಸಲು ಸ್ಥಳ ನಿಗದಿಪಡಿಸಲಾಗಿದ್ದು, ಸಮಾರಂಭಕ್ಕಾಗಿ ಸ್ಥಳ ಸಿದ್ಧತೆ ಕಾರ್ಯ ಪ್ರಾರಂಭಗೊಂಡಿದೆ.  ಜಿಲ್ಲಾಧಿಕಾರಿಗಳು ಮಂಗಳವಾರ ಕಾರ್ಯಕ್ರಮ ಜರುಗುವ ಸ್ಥಳಕ್ಕೆ ಭೇಟಿ ನೀಡಿ, ಸಿದ್ಧತೆ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದರು.  ಸಮಾರಂಭಕ್ಕಾಗಿ ಬೃಹತ್ ವೇದಿಕೆ, 09 ಜಿಲ್ಲೆಗಳಿಂದ ಆಗಮಿಸುವ ವಾಹನಗಳ ಪಾರ್ಕಿಂಗ್, ಗಣ್ಯಾತಿಗಣ್ಯರಿಗಾಗಿ ಹೆಲಿಪ್ಯಾಡ್‍ಗಳ ನಿರ್ಮಾಣ, ಊಟದ ಕೌಂಟರ್‍ಗಳು ಮತ್ತಿತರ ಉದ್ದೇಶಕ್ಕಾಗಿ ನಿಗದಿಪಡಿಸುವ ಸ್ಥಳದ ಪರಿಶೀಲನೆ ನಡೆಸಿದರು.
ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ಚಂದ್ರಯ್ಯ, ಹಿರಿಯೂರು ತಹಸಿಲ್ದಾರ್ ಪ್ರಶಾಂತ್ ಪಾಟೀಲ್ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours