ಕುರಿ ಕಾಯುತ್ತಿದ್ದ ಬಾಲಕನನ್ನು ಶಾಲೆಗೆ ಸೇರಿಸಿದ ಸಿಎಂ

 

ಚಿತ್ರದುರ್ಗ: ಶಾಲೆಯನ್ನು ಬಿಟ್ಟು  ಕುರಿ ಕಾಯುತ್ತಿದ್ದ ಬಾಲಕನನ್ನು ಸಿಎಂ ಸಿದ್ದರಾಮಯ್ಯ ಮರಳಿ ಶಾಲೆಗೆ ಸೇರಿಸಿದ ಸನ್ನಿವೇಶವೊಂದು ಚಳ್ಳಕೆರೆಯಲ್ಲಿ ನಡೆದಿದೆ.

ಓದಿ: ಭೂ ಕಬಳಿಕೆ ಆರೋಪದ ಬಗ್ಗೆ ಸಚಿವ ಸುಧಾಕರ್ ಹೇಳಿದ್ದೇನು‌. 

ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ 11 ವರ್ಷದ ಬಾಲಕ ಯೋಗೀಶ್ . ಶಾಲೆ ಬಿಟ್ಟು ಕುರಿಕಾಯಲು ಹೋಗುತ್ತಿದ್ದ ಹೀಗಾಗಿ ಗ್ರಾಮದ ಮಹೇಂದ್ರ ಎಂಬ ಯುವಕ ಸಿಎಂ ಎಕ್ಸ್ (ಟ್ಯಾಬ್) ಈ ಖಾತೆಗೆ ಟ್ಯಾಗ್ ಮಾಡಿ ವಿಚಾರಿಸಿ. ಸಿಎಂ ಕಾರ್ಯಾಲಯ ತಕ್ಷಣ ಇದನ್ನು ಪರಿಗಣಿಸಿ ಕೇವಲ 23 ಗಂಟೆಯಲ್ಲಿ ಇದರ ಬಗ್ಗೆ ಕ್ರಮ ವಹಿಸಿ ಬಾಲಕ ಮರಳಿ ಶಾಲೆಗೆ ಹೋಗುವಂತೆ ಮಾಡಿದೆ.

ಓದಿ: ಗಣೇಶ ಮೂರ್ತಿ ಸ್ಥಾಪಿಸಲು ಏನೇನು ರೂಲ್ಸ್ ,ಡಿಸಿ ಹೇಳಿದ್ದೇನು

ಕಳೆದ 2 ವರ್ಷದಿಂದ ಯೋಗೀಶ್ ಶಾಲೆಗೆ ಹೋಗದೆ ಕುರಿ ಹೊಡೆದುಕೊಂಡು  ತೆರಳುತ್ತಿದ್ದ. ಹೀಗಾಗಿ ಕುರಿ ಕಾಯುತ್ತಿದ್ದ ಸ್ಥಳಕ್ಕೆ ತೆರಳಿದ್ದ ಶಿಕ್ಷಣ ಇಲಾಖೆ ಸಿಬ್ಬಂದಿ ಮತ್ತೆ ಶಾಲೆಗೆ ಬಾಲಕನನ್ನು ಕರೆ ತಂದಿದ್ದಾರೆ. ಈಗ ಬಾಲಕನಿಗೆ ಸರ್ಕಾರಿ ಬಸಾಪುರ ಗ್ರಾಮದ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದಲು ಅವಕಾಶ ಕಲ್ಪಿಸಲಾಗಿದೆ.

[t4b-ticker]

You May Also Like

More From Author

+ There are no comments

Add yours