ದೇಶದ ಇತಿಹಾಸವನ್ನು ಮಕ್ಕಳಿಗೆ ತಿಳಿಸಿ, ರಾಷ್ಟ್ರಭಿಮಾನ ಬೆಳೆಸಿ: ತಹಶೀಲ್ದಾರ್ ಎನ್.ರಘುಮೂರ್ತಿ ಕರೆ

 

ಚಳ್ಳಕೆರೆ: ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರುಪೋಷಕರು ಗುಣಮಟ್ಟದ ಶಿಕ್ಷಣದ ಜೊತೆ ರಾಷ್ಟ್ರಭಿಮಾನ , ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ಬಗ್ಗೆ ಮಕ್ಕಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲಿ  ಪರಿಚಯಿಸಿ ಮಕ್ಕಳು ತಮ್ಮ ಪದವಿ ನಂತರದ ಕಾಲಘಟ್ಟದಲ್ಲಿ ಸೈನ್ಯದಲ್ಲಿ ಉನ್ನತ ಮಟ್ಟದ ಪರೀಕ್ಷೆಗಳಾದ ಏನ್ ಡಿ ಎ ಮತ್ತು ಸಿ ಡಿ ಎಸ್ ಪರೀಕ್ಷೆಗೆ ಮಕ್ಕಳನ್ನು ಹಣಿಗೊಳಿಸುವ ಮೂಲಕ ರಾಷ್ಟ್ರಕ್ಕೆ ಇಂತಹ ಕೊಡುಗೆ ಯನ್ನು ಸಮರ್ಪಿಸಬೇಕೆಂದು ಎಂದು  ಚಳ್ಳಕೆರೆ ತಹಶೀಲ್ದಾರ್ ಎನ್‌. ರಘುಮೂರ್ತಿ ಹೇಳಿದರು.

ಇಂದು  ನಗರದ  ಹೊಂಗಿರಣ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವದ ಸಮಾರಂಭದಲ್ಲಿ  ಮಾತನಾಡಿ ಭಾರತದ ಏಳು ನೂರು ಜನ ಸೈನಿಕರು ತಮ್ಮ ತ್ಯಾಗ ಬಲಿದಾನದ ಮೂಲಕ ತಮ್ಮ ನೆತ್ತರವನ್ನು ರಾಷ್ಟ್ರಕ್ಕೆ ಸಮರ್ಪಿಸಿ ಪಾಕಿಸ್ತಾನದ 5,000 ಸೈನಿಕರನ್ನು ದ್ವಂಸ ಮಾಡಿ ಭಾರತಾಂಬೆಯ ವಿಜಯ ಪತಾಕಿಯನ್ನು  ಹಾರಿಸಿದಂತ ದಿನ ಈ ಸುದಿನವಾಗಿದೆ.

ವೀರ ಮರಣವನ್ನು ಅಪ್ಪಿದ ಮತ್ತು ಭಾರತಕ್ಕೆ ವಿರೋಚಿತ ಗೆಲುವನ್ನು ತಂದು ಕೊಟ್ಟಂತ ಸೈನಿಕರಿಗೆ ಈ ದಿನ ನಾವುಗಳೆಲ್ಲರೂ ಕೂಡ ನಮ್ಮ ಅಶ್ರುತರ್ಪಣೆಯನ್ನು ಸಮರ್ಪಿಸಬೇಕಿದೆ.  ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರನ್ನು  ನೆನೆಯಬೇಕಿದೆ.  ಇಂದಿನ ಕಾರ್ಯಕ್ರಮ  ಮೂರು ಜನ ಸೈನಿಕರು ತಮ್ಮ ಅವಧಿಯಲ್ಲಿ ಕಾರ್ಗಿಲ್ ನಲ್ಲಿ ಕೆಲಸ ಮಾಡಿ ಭಾರತದ ವಿರೋಚಿತ ಗೆಲುವಿಗೆ ಕಾರಣರಾಗಿದ್ದಾರೆ. ಇಂದಿನ ದಿನ ಗೌರವಿತವಾಗಿ ಸನ್ಮಾನಿಸಿ ತಾಲೂಕ್ ಆಡಳಿತದ ವತಿಯಿಂದ ಇವರನ್ನು ಅಭಿನಂದಿಸುತಿದ್ದೇವೆ. ಮುಂದಿನ ತಿಂಗಳು ನಡೆಯುವಂತ 75ನೇ ಸ್ವತಂತ್ರ ದಿನಾಚರಣೆಯಲ್ಲಿ ಎಂದೆಂದೂ ಕಂಡು ಕೇಳರಿಯಾದಂತ ಅಮೋಘವಾದ ಸಮಾರಂಭವನ್ನು ಕ್ಷೇತ್ರದ ಶಾಸಕರ ಸಹಯೋಗದೊಂದಿಗೆ ಆಯೋಜಿಸಲಾಗಿದೆ.  ಈ ಶಾಲೆಯ ಮಕ್ಕಳು ಕೂಡ ದೇಶಾಭಿಮಾನಕ್ಕೆ ಸಂಬಂಧಿಸಿದ ಒಂದು ಸುಂದರ ನೃತ್ಯರೂಪಕವನ್ನು ಈ ಸಮಾರಂಭಕ್ಕೆ ಒದಗಿಸಬೇಕೆಂದು ಹೊಂಗಿರಣ ಶಾಲೆಯ ಸಿಬ್ಬಂದಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಹೊಂಗಿರಣ ಶಾಲೆಯ ಸಂಸ್ಥಾಪಕರಾದ ನಾಗಣ್ಣ , ವ್ಯವಸ್ಥಾಪಕರಾದ ದಯಾನಂದ , ಶಿವಕುಮಾರ್,  ರಾಜೇಶ್ ಗುಪ್ತ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours