ದೇವರು ಕೊಟ್ಟ ಸಾಮಾಜಿಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ: ತಹಶೀಲ್ದಾರ್ ಎನ್.ರಘುಮೂರ್ತಿ ಸಲಹೆ

 

ಚಳ್ಳಕೆರೆ:  ಕಳಂಕ ರಹಿತವಾಗಿ ಮಾಡುವಂತಹ ಸಾಮಾಜಿಕ ಸೇವೆ ಜೀವನದಲ್ಲಿ ಮನುಷ್ಯನಿಗೆ  ಸಾರ್ಥಕತೆಯನ್ನು ಒದಗಿಸುತ್ತದೆ ಹಾಗೂ ತಮ್ಮ ವ್ಯಕ್ತಿತ್ವವನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ತಹಸಿಲ್ದಾರ್ ರಘುಮೂರ್ತಿ ಹೇಳಿದರು.

ಇಂದು ಚಳ್ಳಕೆರೆ ತಾಲೂಕಿನ ಸಿದ್ದೇಶ ದುರ್ಗ ಗ್ರಾಮ ಪಂಚಾಯಿತಿಯಲ್ಲಿ ಚುನಾವಣಾಧಿಕಾರಿಯಾಗಿ ಪಾಲ್ಗೊಂಡು ಅಧ್ಯಕ್ಷರಾಗಿ ಎಂ ಮೌರ್ಯ ಉಪಾಧ್ಯಕ್ಷ ರಾಗಿ ನಾಗ ಭೋವಿ ಅವರನ್ನ ಅವಿರೋದವಾಗಿ ಆಯ್ಕೆ ಮಾಡಿ ಮಾತನಾಡಿ  ಚುನಾಯಿತ ಪ್ರತಿನಿಧಿ ಯಾಗಿ ಸಾಮಾಜಿಕ ಸೇವೆ ಮಾಡಲು ಕೆಲವೊಂದು ಸಂದರ್ಭದಲ್ಲಿ ಮಾತ್ರ ದೇವರು ಅವಕಾಶವನ್ನು ಕಲ್ಪಿಸುತ್ತಾನೆ ಇಂತಹ ಅವಕಾಶವನ್ನು ಬಳಸಿಕೊಂಡು ನಿಮ್ಮ ವ್ಯಾಪ್ತಿಯಲ್ಲಿನ ದುರ್ಬಲ ವರ್ಗದವರ ಏಳಿಗೆಗಾಗಿ ಶ್ರಮ ವಹಿಸಿ ಕೆಲಸ ಮಾಡಬೇಕು ಇಂದಿನ ಗ್ರಾಮೀಣಾಭಿವೃದ್ಧಿ ಮಂತ್ರಿಗಳಾದ ಅಂತ ಅಬ್ದುಲ್ ನಜೀರ್ ಸಾಬ್ ಅವರು ಗ್ರಾಮದಲ್ಲಿ ಏಳಿಗೆಗಾಗಿ ಮ ಕನಸು ಕಂಡವರು ಹಾಗಾಗಿಯೇ ಅವರು ಗ್ರಾಮೀಣಾಭಿವೃದ್ಧಿ ವಿಚಾರದಲ್ಲಿ ದೇಶದಲ್ಲೇ ಕರ್ನಾಟಕವನ್ನು ತಿರುಗಿ ನೋಡುವಂತೆ ಮಾಡಿದವರು ಅವರ ಆದರ್ಶಗಳು ಮತ್ತು ಕನಸುಗಳು ಇವತ್ತು ನನ ಸಾಗಬೇಕೆಂದರೆ ಸ್ಥಳೀಯ ಮಟ್ಟದ ಚುನಾಯಿತ ಪ್ರತಿನಿಧಿಗಳು ಗ್ರಾಮಗಳ ಜ್ವಲಂತ ಸಮಸ್ಯೆಗಳಾದ ಕುಡಿಯುವ ನೀರು ನೈರ್ಮಲ್ಯತೆ ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳಿಗೆ ಆದ್ಯತೆ ಕೊಟ್ಟು ಕೆಲಸ ಮಾಡಬೇಕೆಂದರು ಬಹು ಮುಖ್ಯವಾಗಿ ಕಂದಾಯ ಇಲಾಖೆಯಿಂದ ಒದಗಿಸಿರುವ ಅಂತಹ ಸ್ಮಶಾನದ ಭೂಮಿಗಳನ್ನು ತಮ್ಮ ವ್ಯಾಪ್ತಿಯಲ್ಲಿ ಬರುವಂತಹ ನರೇಗಾ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಬೇಕೆಂದು ಮನವಿ ಮಾಡಿದರು ಇದೇ ಸಂದರ್ಭದಲ್ಲಿ ಆರಕ್ಷಕ ಉಪ ನಿರೀಕ್ಷಕರಾದ ನವೀನ್ ರಾಜಸ್ವನಿರೀಕ್ಷಕರ ಮೋಹನ್ ಮುಂತಾದವರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours