20 ವರ್ಷದ ಇತ್ಯರ್ಥವಾಗದ ಜಾಗವನ್ನು ಶಾಲೆಗೆ ಬಿಡಿಸಿಕೊಟ್ಟು ಜನರ ಮೆಚ್ಚುಗೆಗೆ ಪಾತ್ರರಾದ ತಹಶೀಲ್ದಾರ್ ಎನ್.ರಘುಮೂರ್ತಿ

 

ಚಳ್ಳಕೆರೆ: 20 ವರ್ಷದ ಇತ್ಯರ್ಥ ವಾಗದ ಜಾಗವನ್ನು ಶಾಲೆಗೆ ಬಿಡಿಸಿಕೊಟ್ಟಿದ್ದಯ  ತಹಶೀಲ್ದರ್ ಎನ್.ರಘುಮೂರ್ತಿ ಅವರ ಬಗ್ಗೆ   ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ನಾಗುಂಡನಹಳ್ಳಿ ಗ್ರಾಮದ ರಿ.ಸರ್ವೆ ನಂಬರ್ ನ 23/1 ರಲ್ಲಿ 8-39 ಗುಂಟೆ ಸರ್ಕಾರಿ ಜಮೀನು ಸರ್ಕಾರಿ ಪ್ರೈಮರಿ ಶಾಲೆಗೆ ಮುಂಜೂರಾತಿ ಪಡೆದ 25 ವರ್ಷ ಕಳೆದರೂ ಗ್ರಾಮದ ಒತ್ತುವರಿದಾರರು ಶಾಲೆಗೆ ಬಿಟ್ಟುಕೊಡದೆ ಇಲ್ಲಿಯತನಕ ಸತಾಯಿಸಿ ಕೊಂಡು ಬಂದಿದ್ದರು. ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರು ಹಾಗೂ ಗ್ರಾಮಸ್ಥರು ತಹಶೀಲ್ದರ್ ಎನ್.ರಘಮೂರ್ತಿ ಅವರಿಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ತಹಶೀಲ್ದಾರ್  ಗ್ರಾಮಕ್ಕೆ ಬೇಟಿ ನೀಡಿ ಪರಶೀಲನೆ ಮಾಡಲಾಗಿದ್ದು  ಗ್ರಾಮದ ಗ್ರಾಮಸ್ಥರು ಸರ್ಕಾರಿ ಪ್ರೈಮರಿಶಾಲೆ ಜಾಗವನ್ನು  ಕಣವನ್ನಾಗಿ ಪ್ರವರ್ತಿಸಿಕೊಂಡು ಹುಲ್ಲಿನ ಬಣವೆ ,ಕುರಿ ,ಜಾನುವಾರುಗಳ ಸಾಕಾಣಿಕೆ ಜಾಗವನ್ನಾಗಿ ಒತ್ತುವರಿ ಮಾಡಿಕೊಂಡಿದ್ದರು. ಸರ್ವೇ  ಅಧಿಕಾರಿಗಳೊಂದಿಗೆ ತಹಶೀಲ್ದರ್ ಒತ್ತುವರಿದಾರರೊಂದಿಗೆ ಮಾತನಾಡಿ ಜಾಗವನ್ನು ಶಾಲೆಗೆ ಬಿಟ್ಟುಕೊಡಬೇಕು, ನೂರು ದೇವಸ್ಥಾನ ನಿರ್ಮಾಣ ಮಾಡುವುದಕಿಂತ ಒಂದು ಶಾಲೆ ತರೆದರೆ ಸವಿರಾರು ಮಕ್ಕಳು ಭವಿಷ್ಯ ಉಜ್ವಲವಾಗುತ್ತೆ ಎಂದು ಅಂಬೇಡ್ಕರ್ ಹೇಳಿದ್ದಾರೆ.
ಅದರಂತೆ ಈ ಜಾಗವನ್ನು ಶಾಲೆಗೆ ಬಿಟ್ಟುಕೊಡಬೇಕು ನಿಮಗೆ ಕಣಕ್ಕೆ ಸರ್ಕಾರಿ ಜಾಗವನ್ನು ಕೊಡಲಾಗುವುದು.ಹಾಗಾಗಿ  ಇಲ್ಲಿನ ಜಾಗವನ್ನು ಇನ್ನು ಒಂದು ತಿಂಗಳೊಳಗಾಗಿ ಬಿಟ್ಟು ಕಣಗಳನ್ನ ತೆರವು ಮಾಡಿಕೊಳ್ಳಿ ಎಂದರು.  ಇದಕ್ಕೊಪ್ಪಿದ ಒತ್ತುವರಿದರರು ಶಾಲೆಗೆ ಬಿಟ್ಟುಕೊಡಲು ಒಪ್ಪದಿರು .ತಕ್ಷಣವೇ ಜೆಸಿಬಿ ಯಂತ್ರದ ಮೂಲಕ 8 .39 ಗುಂಟೆ ಒತ್ತುವರಿ ಜಾಗವನ್ನು ಸುತ್ತಲೂ ಗುಂಡಿ ತೆಗೆಸಿ ವಶಕ್ಕೆ ಪಡೆದು ಶಾಲೆಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಬಿಇಓ ಕೆ.ಎಸ್ ಸುರೇಶ್ ಸರ್ವೆ ಅಧಿಕಾರಿ ಪ್ರಸನ್ ಕುಮಾರ್ ಗ್ರಾಮ ಲೆಕ್ಕಿಗ ಹೀರಿಯಪ್ಪ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಲ್ಮೇಶ ಸರ್ಕರಿ ಕಿರಿಯ ಪ್ರಥಾಮಿಕ ಪಾಠಶಾಲೆಯ ಮುಖ್ಯ ಶಿಕ್ಷಕ ಸತ್ಯನಾರಾಯರಾವ್ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮಸ್ಥರು ಇದ್ದರು.

[t4b-ticker]

You May Also Like

More From Author

+ There are no comments

Add yours