ಕೋಟೆ ನಾಡು ಕಲೆ ಸಂಸ್ಕೃತಿಯ ತವರೂರು: ತಹಶೀಲ್ದಾರ್ ಎನ್.ರಘುಮೂರ್ತಿ

 

ಚಿತ್ರದುರ್ಗ: ಜಿಲ್ಲೆಯ  ಜನತೆಗೂ ಕಲಾಭಿಮಾನಕ್ಕೂ ಅವಿನಭಾವನ ಸಂಬಂಧವಿದೆ.  ಇಲ್ಲಿನ ಸಾಂಸ್ಕೃತಿಕ ನೆಲೆಗಟ್ಟಿಗೂ ಪಾಳೆಗಾರರ ಸಾಹಸಕ್ಕೂ ಪೂರಕವಾದ ಪುತಾವೆಗಳಿವೆ.  ಜಗತ್ತಿನಲ್ಲಿ ಚಿತ್ರದುರ್ಗ ಎಂದರೆ ನೆನಪಾಗುವುದು ಚಿತ್ರದುರ್ಗದ ಕೋಟೆಯ ಕಲ್ಲಿನ ಮೇಲೆ ಚೆಲ್ಲಿದಂತಹ ಬಿಸಿ ರಕ್ತದ ನೆನಪು ಕೆಚ್ಚೆದೆಯ ಹೋರಟ  ಸ್ವಾಭಿಮಾನ ಮತ್ತು ರಾಷ್ಟ್ರಪ್ರೇಮ ಇವುಗಳನ್ನು ಇಮ್ಮಡಿಗೊಳಿಸಿದಂತ ಗಂಡುಗಲಿ ವೀರ ಮದಕರಿ ನಾಯಕ ಮತ್ತು ಒನಕೆ ಓಬವ್ವ  ನೆನಪುಗಳನ್ನು ನಾವು ನೋಡಬಹದು  ಎಂದು ತಹಶೀಲ್ದಾರ್ ಎನ್‌.ರಘುಮೂರ್ತಿ ಹೇಳಿದರು.

ಗುರುವಾರದಂದು  ಗೌರಸಮುದ್ರ ಮಾರಮ್ಮ ದೇವಿಯ ಜಾತ್ರಾ ಪ್ರಯುಕ್ತ ಏರ್ಪಡಿಸಿದ  ನಾಟಕ ಪ್ರದರ್ಶನದಲ್ಲಿ ಕಾರ್ಯಕ್ರಮದಲ್ಲಿ  ಮಾತನಾಡಿ ಈ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರಜ್ಞೆಯ ಜೊತೆ ಈ ಭಾಗದ ಪ್ರತಿಯೊಬ್ಬ ಸಾರ್ವಜನಿಕರು ಕೂಡ ಶೈಕ್ಷಣಿಕವಾಗಿ ಉತ್ತಮವಾದ ಪ್ರಗತಿ ಸಾಧಿಸಬೇಕಿದೆ.  ಪ್ರತಿಯೊಂದು ಕುಟುಂಬದಲ್ಲೂ ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣದತ್ತ ಕೊಂಡೊಯ್ಯಬೇಕು , ಶೈಕ್ಷಣಿಕ ನೆಲೆಗಟ್ಟು ಭದ್ರವಾದಾಗ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು.

ಈ‌ ಭಾಗದ ಜನರು ಕಲೆಯನ್ನು  ಪ್ರೋತ್ಸಾಹ ನೀಡುವ ವಿಶೇಷ ಗುಣ ಉಳ್ಳವರು. ಗ್ರಾಮೀಣ ಭಾಗದಲ್ಲಿ ರೈತರಿಗೆ ಇಂತಹ ನಾಟಕಗಳು ಎನರ್ಜಿ ಬೂಸ್ಟ್ ಇದ್ದಂತೆ. ತಮ್ಮ ಬಿಡುವಿಲ್ಲದ ಕೆಲಸದ ನಡುವೆ ನಾಟಕ‌ ವಿಕ್ಷಣೆಯಿಂದ ರೈತರ‌ ಮನಸ್ಸಿಗೆ ಮದ ನೀಡಿತ್ತದೆ ಎಂದರು.

ಮಾಜಿ ಶಾಸಕರಾದ ನೇರಲಗುಂಟೆ  ತಿಪ್ಪೇಸ್ವಾಮಿ ಮಾತನಾಡಿ  ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಿಗೂ ತರಿಕೆರೆ ತಾಲೂಕಿನ ಜನತೆಗೂ ಭಾವನಾತ್ಮಕವಾದ ನಂಟಿದೆ.  ಇಲ್ಲಿಯ ಜನ ಕಲೆಯನ್ನು ಜೀವಂತವಾಗಿಟ್ಟಿದ್ದಾರೆ.  ಜನರಿಗೆ ಈ ದೇವಿಯ ಭಕ್ತಿ ಪರಾಕಾಷ್ಟೆ ತಲುಪಿದೆ. ಮುಂದಿನ ಪೀಳಿಗೆಗೂ ಕೂಡ ಈ ಪರಂಪರೆಯನ್ನು ಮುಂದುವರೆಸಬೇಕಿದೆ.  ನಾನು ಕೂಡ ಪೌರಾಣಿಕ ನಾಟಕಗಳಲ್ಲಿ ಯಾವುದೇ ಚಿತ್ರರಂಗದ ನಟನಿಗೆ ಕಡಿಮೆ ಇಲ್ಲದಂತ ದುರ್ಯೋಧನ ಪಾತ್ರವನ್ನು ನಾನು ಶಾಸಕನಾಗಿದ್ದ ಸಮಯದಲ್ಲಿ ಅಭಿನಯಿಸಿ ಮಾದರಿಯಾಗಿದ್ದೇನೆ.  ಇದರಿಂದಲೇ ಈಗ ಸಚಿವರಾದಂತ ಮುನಿರತ್ನ ಅವರು ಕುರುಕ್ಷೇತ್ರ ಚಿತ್ರವನ್ನು ಮಾಡಲು ದಾರಿಯಾಗಿತ್ತು ಎಂದು ಹೇಳಿದರು.

ಸಮಾರಂಭದಲ್ಲಿ ವಕೀಲರಾದ ಚಂದ್ರಣ್ಣ ಗ್ರಾಮ ಪಂಚಾಯತಿ ಸದಸ್ಯರಾದಂತ ಓಬಣ್ಣ , ವಕೀಲ ಶಶಿ ಮತ್ತಿತರರು ಇದ್ದರು.

[t4b-ticker]

You May Also Like

More From Author

+ There are no comments

Add yours