ತೋರೆ ಕೊಲ್ಲಮ್ಮನಹಳ್ಳಿ ರಾಜಕಾಲುವೆ ಒತ್ತವರಿ ಕಾಮಗಾರಿ ಪ್ರಾರಂಭ: ತಹಶೀಲ್ದಾರ್ ಎನ್.ರಘುಮೂರ್ತಿ

 

ಚಳ್ಳಕೆರೆ: 20 ವರ್ಷಗಳಿಂದ ವಿವಾದದಿಂದ ನೆನೆಗುದಿಗೆ ಬಿದ್ದಂತಹ ರಾಜಕಾಲುವೆ ಕಾಮಗಾರಿಯನ್ನು ತಹಶೀಲ್ದಾರ್ ಎನ್.ರಘುಮೂರ್ತಿ ಪ್ರಾರಂಭಿಸಿದ್ದಾರೆ.

ತಾಲೂಕಿನ  ತೊರೆಕೋಲಮ್ನಳ್ಳಿ  ಗ್ರಾಮದ ಸರ್ವೆ ನಂಬರ್ 52 ಮತ್ತು 54 ರಲ್ಲಿ ಇರುವಂತಹ ರಾಜ ಕಾಲುವೆಯನ್ನು ಒತ್ತುವರಿ ಮಾಡಿ ಇದರಿಂದ ಗ್ರಾಮದ ನೈರ್ಮಲ್ಯದ ನೀರು ಸರಾಗವಾಗಿ ಹರಿಯದೆ ಸುಮಾರು 10 ವರ್ಷಗಳಿಂದ ಕೆಲಸ ಕುಂಠಿತವಾಗಿದ್ದು ಈ ವಿವಾದವನ್ನು ಬಗೆಹರಿಸುವಂತೆ ಹಲವಾರು ಬಾರಿ ತೊರೆ ಕೋಲಮ್ನಳ್ಳಿ ಚುನಾಯಿತ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ವಿವಿಧ ಇಲಾಖೆಗಳಿಗೆ  ಮನವಿ ಮಾಡಿದರು.

ಈ‌ ಸಂದರ್ಭದಲ್ಲಿ ತಹಶೀಲ್ದಾರ್ ರಘುಮೂರ್ತಿ ಮಾತನಾಡಿ ಮನುಷ್ಯ ತನ್ನ ಅತಿಯಾಸೆಗೆ ಬಲಿಯಾಗಿ ಜಲಮೂಲಗಳು ಮತ್ತು ಪ್ರಾಕೃತಿಕ ಸಂಪತ್ತನ್ನು ಅತಿಕ್ರಮಿಸಿ ಸಮಾಜದ ಅಪ ನಿಂದನೆಗೆ ಗುರಿಯಾಗುವುದು ಬೇಡ ಇವುಗಳನ್ನು ಸಂರಕ್ಷಿಸಿ ಇದರ ಮುಖಾಂತರ ದಾರಿ ದೀಪವಾಗಬೇಕೆಂದು ಒತ್ತುವರಿದಾರರಿಗೆ ಮನವಿ ಮಾಡಿದರು.

ಗ್ರಾಮದ ಹಿತ ದೃಷ್ಟಿಯಿಂದ ಬಹು ದಿನಗಳ ಸಮಸ್ಯೆ ಇದು ಬಗೆಹರಿಸುವಂತೆ ಅಗ್ರಹಿಸಿದಾಗ ತಾಲೂಕ್ ಸರ್ವೆಯರ್ ಮತ್ತು ರಾಜಸ್ವನಿರೀಕ್ಷಕರೊಂದಿಗೆ ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್ ಸ್ಥಳ ಪರಿಶೀಲಿಸಿ ವಸ್ತು ಸ್ಥಿತಿಯನ್ನು ಮನಗಂಡು ಬಾದಿತ ವ್ಯಕ್ತಿಗಳನ್ನು ಮತ್ತು ಅಡ್ಡಿ ಪಡಿಸಿದ ವ್ಯಕ್ತಿಗಳನ್ನು ಕರೆಸಿ ಕಾನೂನು ವ್ಯಾಪ್ತಿಯ ತಿಳಿ ಹೇಳಿ ಈ ದೇಶದ ಕಾನೂನುಗಳನ್ನು ಗೌರವಿಸಬೇಕು. ತಪ್ಪಿದಲ್ಲಿ ಸಿಆರ್ಪಿಸಿ ಮತ್ತು ಐಪಿಸಿ ಗಳ ವ್ಯಾಪ್ತಿಯಲ್ಲಿ ಕ್ರಮ ಜರುಗಿಸಲಾಗುವುದೆಂದು ಮನವರಿಕೆ ಮಾಡಿಕೊಟ್ಟು ಮುಂದಿನ 30 ವರ್ಷಗಳ ದೃಷ್ಟಿಕೋನದಲ್ಲಿ ಪ್ರತಿಯೊಂದು ಗ್ರಾಮಗಳಲ್ಲೂ ಕೂಡ ನೈಸರ್ಗಿಕವಾಗಿರುವಂತಹ ಜಲಮೂಲಗಳು ಕೆರೆಕಟ್ಟೆಗಳು ದಾರಿಗಳು ಕರಾಬು ಜಮೀನುಗಳು ಗೋಮಾಳಗಳು ಮತ್ತು ರಾಜಕಾರಣಿಗಳನ್ನು ನಾವು ಅನಿವಾರ್ಯವಾಗಿ ಸಮರ್ಥಿಸಬೇಕಿದೆ ಎಂದು ವಿವಾದಕ್ಕೆ‌ನಾಂದಿ ಹಾಡಿದರು.

ಈ ಸಂದರ್ಭದಲ್ಲಿ ಅಬ್ಬೇನಹಳ್ಳಿ ಪಂಚಾಯಿತಿ ಅಧ್ಯಕ್ಷರಾದಂತ ಶಂಕರ್ ಸ್ವಾಮಿ ಅವರು ಸದಸ್ಯರಾದಂತಹ ತಿಪ್ಪೇಸ್ವಾಮಿಯವರು ರಾಜಸ್ವ ನಿರೀಕ್ಷಕ ಚೇತನ್ ಗ್ರಾಮ ಲೆಕ್ಕಾಧಿಕಾರಿ ಜೈ ರಾಮ್ ಗ್ರಾಮದ ಪ್ರಮುಖರಾದ ಪಿತಾಂಬರ್ ಮುಂತಾದವರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours