2023ರ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದ ಸಮಾಜ ಸೇವಕ ಟಿ.ಮಂಜುನಾಥ್

 

2023ರ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದ ಸಮಾಜ ಸೇವಕ ಟಿ.ಮಂಜುನಾಥ್

ದುಡಿಯುವ ಕೈಗಳಿಗೆ ಉದ್ಯೋಗ ನೀಡಿ, ತಾಲ್ಲೂಕನ್ನು ಅಭಿವೃದ್ಧಿಪಡಿಸುವುದೇ ನನ್ನ ರಾಜಕೀಯ ಸಿದ್ಧಾಂತ

ಹೊಸದುರ್ಗ: ಉತ್ತಮ ಆರೋಗ್ಯ ಸೌಲಭ್ಯ, ಗುಣಮಟ್ಟದ ಶಿಕ್ಷಣ ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಮೂಲಕ ತಾಲ್ಲೂಕನ್ನು ಅಭಿವೃದ್ಧಿಪಡಿಸುವುದೇ ನನ್ನ ರಾಜಕೀಯ ಸಿದ್ಧಾಂತವಾಗಿದೆ ಎಂದು ಸಮಾಜ ಸೇವಕ ಟಿ.ಮಂಜುನಾಥ್ ತಿಳಿಸಿದರು.

ತಾಲ್ಲೂಕಿನ ಹಾರನಕಣಿವೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ಗುರುವಾರ ಪೂಜೆ ಸಲ್ಲಿಸುವ ಮೂಲಕ 2023ರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿ ಅವರು ಮಾತನಾಡಿದರು.

ವಿಧಾನಸಭಾ ಚುನಾವಣೆಯ ಪ್ರಚಾರವನ್ನು ಆರಂಭಿಸಲಾಗಿದ್ದು, ಮನೆ ಮನೆಗೆ ಮಂಜಣ್ಣ ಎನ್ನುವ ಅಭಿಯಾನದ ಮೂಲಕ ತಾಲ್ಲೂಕಿನ ಪ್ರತಿ ಮನೆಗೆ ಭೇಟಿ ನೀಡಿ ನಮ್ಮ ರಾಜಕೀಯ ಬದ್ಧತೆ ಹಾಗೂ ಅಭಿವೃದ್ಧಿ ವಿಚಾರಗಳನ್ನು ತಿಳಿಸುವ ಕೆಲಸ ಮಾಡುತ್ತೇವೆ ಎಂದರು.

15 ವರ್ಷಗಳ ಕಾಲ ರಾಜಕೀಯ ಕ್ಷೇತ್ರದಲ್ಲಿದ್ದು, ಜನರ ಸೇವೆ ಮಾಡಿದ ನಾನು ಕಳೆದ ಎಂಟು ವರ್ಷಗಳಿಂದ ರಾಜಕೀಯ ಕ್ಷೇತ್ರದಿಂದ ದೂರವಾಗಿದ್ದೆ. ಕ್ಷೇತ್ರದ ಜನಸಾಮಾನ್ಯರ ಒತ್ತಾಯದ ಮೇರೆಗೆ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿದ್ದೇನೆ. ಕಳೆದ ಒಂದುವರೆ ವರ್ಷಗಳಿಂದ ತಾಲ್ಲೂಕಿನ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಜನರ ಕಷ್ಟ ಅರಿತಿದ್ದೇನೆ. ಅಭಿವೃದ್ದಿ ಪೂರಕವಾಗಿ ಕೆಲಸ ಮಾಡುತ್ತೇನೆ ಎಂದರು.

ತಾಲ್ಲೂಕಿನಿಂದ 20 ಸಾವಿರಕ್ಕೂ ಹೆಚ್ಚು ಜನ ಉದ್ಯೋಗಕ್ಕಾಗಿ ವಯಸ್ಸಾಗಿರುವ ತಂದೆ ತಾಯಿ, ಚಿಕ್ಕ ಮಕ್ಕಳನ್ನು ಬಿಟ್ಟು ಬೆಂಗಳೂರಿಗೆ ವಲಸೆ ಹೋಗಿದ್ದಾರೆ. ಅವರನ್ನು ವಾಪಸ್ ಕರೆತಂದು 5 ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡುವ ಶಪಥ ಮಾಡಿದ್ದೇನೆ. ನನ್ನ ಸಾವಿನ ನಂತರವೂ ಜನರ ಮನಸ್ಸಿನಲ್ಲಿ ಚಿರಸ್ಥಾಯಿ ಆಗುವಂತಹ ಕೆಲಸ ಮಾಡುತ್ತೇನೆ. ಇದು ಕೇವಲ ಭರವಸೆಯಲ್ಲ ನನ್ನ ರಾಜಕೀಯ ಸಿದ್ಧಾಂತ. ನುಡಿದಂತೆ ನಡೆಯದಿದ್ದರೆ ರಾಜಕೀಯ ಕಣದಲ್ಲಿ ಇರುವುದಿಲ್ಲ ಎಂದರು.

ಮುಂದಿನ ಐದು ವರ್ಷದಲ್ಲಿ ತಾಲೂಕಿನಲ್ಲಿಯೇ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳು ಸಿಗುವಂತಹ ವ್ಯವಸ್ಥೆ ಮಾಡುವ ಜೊತೆಗೆ ದುಬಾರಿಯಾಗಿರುವ ಶಿಕ್ಷಣ ವ್ಯವಸ್ಥೆಯನ್ನ ಸರಿಪಡಿಸಿ ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತಹ ವ್ಯವಸ್ಥೆ ಕಲ್ಪಿಸುವುದೇ ನನ್ನ ಮುಖ್ಯ ಉದ್ದೇಶವಾಗಿದೆ. ತಾಲ್ಲೂಕಿನ ಜನರೇ ನನ್ನ ಶಕ್ತಿಯಾಗಿದ್ದು ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ. ಯಾರ ವಿರುದ್ಧವೂ ಟೀಕೆ ಮಾಡುವುದಿಲ್ಲ. ನಮ್ಮದು ಅಭಿವೃದ್ದಿ ಪರ ರಾಜಕಾರಣವೇ ಹೊರತು ವಿರೋಧದ ರಾಜಕಾರಣವಲ್ಲ ಎಂದರು.

ಈ ವೇಳೆ ಮಾಜಿ ಶಾಸಕ ಇಳಕಲ್ ವಿಜಯ್ ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಜಭೀವುಲ್ಲ, ಮಾಜಿ ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷ ನರಸಿಂಹಮೂರ್ತಿ, ನಿರ್ದೇಶಕರಾದ ಯೋಗಿಶ್ ಕುಮಾರ್, ಓಂಕಾರಪ್ಪ, ಮಾಜಿ ತಾ.ಪಂ ಉಪಾಧ್ಯಕ್ಷ ನರಸಪ್ಪ, ಮುಖಂಡರಾದ ಪಿ.ಎಲ್ ಲೋಕೇಶ್ವರ, ಹೋಮಾ ರಾಜಣ್ಣ, ಸಿದ್ದಲಿಂಗಸ್ವಾಮಿ, ಶೆಟ್ಟಿಹಳ್ಳಿ ಭೂಷಣ್, ಪುರಸಭಾ ಸದಸ್ಯ ರಾಮಚಂದ್ರ, ಕಾಂಟ್ರಾಕ್ಟ್ ರಾಮಚಂದ್ರಪ್ಪ, ಡಾಲಿ ಧನಂಜಯ್, ಗ್ರಾ.ಪಂ ಸದಸ್ಯರಾದ ಪ್ರಕಾಶ್, ಸಿದ್ದಗೊಂಡನಹಳ್ಳಿ ಹನುಮಂತಪ್ಪ, ಕೈನಡು ಹನುಮಂತಪ್ಪ, ಉದ್ಯಮಿ ನಿಜಲಿಂಗಪ್ಪ, ಮುಕುಂದಣ್ಣ, ಆನಿವಾಳ ದಯಾನಂದ್, ಬಸವರಾಜ್, ಮಲ್ಲಪ್ಪನಹಳ್ಳಿ ಚಂದ್ರಪ್ಪ, ಧರಣಪ್ಪ, ಜಂತಿಕೊಳಲು ಚಂದ್ರಣ್ಣ, ಬಾಗೂರು ಸುರೇಶ್, ಗೌಡ್ರು ಗಿರೀಶ್, ಮಲ್ಲೇನಹಳ್ಳಿ ಮಲ್ಲಿಕಾರ್ಜುನ್, ಟಿಎಪಿಸಿಎಂಎಸ್ ಸದಸ್ಯ ರಮೇಶ್, ರಾಮಸ್ವಾಮಿ, ಮಾಜಿ ಪುರಸಭಾ ಸದಸ್ಯ ಸಾನಾವುಲ್ಲ, ದಾದಪೀರ್, ಸಹರಾ ಬ್ಯಾಂಕ್ ನಿರ್ದೇಶಕ ಜಭೀವುಲ್ಲಾ, ಮಾಡದಕೆರೆ ಕುಮಾರ್, ಪ್ರದೀಪ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಹಾಜರಿದ್ದರು.

ಬಾಕ್ಸ್ 1

ಬೃಹತ್ ರೋಡ್ ಶೋ ನಲ್ಲಿ ನಿರೀಕ್ಷೆ ಮೀರಿ ಜನ:

ಸಮಾಜ ಸೇವಕ ಟಿ.ಮಂಜುನಾಥ್ ರವರ ಅಧಿಕೃತ ಚುನಾವಣೆಯ ಪ್ರಚಾರದ ಬೃಹತ್ ರೋಡ್ ಶೋ ನಲ್ಲಿ, ನಿರೀಕ್ಷೆ ಮೀರಿ ಜನ ಆಗಮಿಸಿದ್ದರು. ಎಲ್ಲಿ ನೋಡಿದರೂ ಜನವೋ ಜನ. ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಬೈಕುಗಳು, ಕಾರುಗಳು, ಆಟೋಗಳು, ಟಾಟಾಏಸ್ ವಾಹನಗಳಿಂದ ಸೇರಿದ್ದ ಜನಸಾಗರ ಮಂಜಣ್ಣ, ಮಂಜಣ್ಣ ಎಂದು ಜಯಘೋಷ ಕೂಗಿದರು. ಮಾದಿಹಳ್ಳಿ, ಲಕ್ಕಿಹಳ್ಳಿ, ಅಂಚಿಬಾರಿಹಟ್ಟಿ, ನಾಗಯ್ಯನಹಟ್ಟಿ, ಶೀರನಕಟ್ಟೆ ಹಾಗೂ ಮಾಡದಕೆರೆ ಗ್ರಾಮಗಳು ಸೇರಿದಂತೆ ಪಟ್ಟಣದಲ್ಲಿ ಅಭೂತಪೂರ್ವವಾಗಿ ಬೃಹತ್ ಹೂವಿನ ಹಾರ ಹಾಕುವುದರ ಮುಖಾಂತರ ಅಭ್ಯರ್ಥಿಗೆ ಸ್ವಾಗತ ಕೋರಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಾಂಕೇತಿಕವಾಗಿ ಮನೆಮನೆಗೆ ಭೇಟಿ ಕೊಟ್ಟು ಮತಯಾಚನೆ ಮಾಡಿದರು.

[t4b-ticker]

You May Also Like

More From Author

+ There are no comments

Add yours