ವಿದ್ಯಾರ್ಥಿ ಸಮೂಹವು ಕಲಿಕೆಯ ಜೊತೆಯಲ್ಲಿ ಪರಿಸರ ಸಂರಕ್ಷಣೆ ಮಾಡಬೇಕು: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:ವಿದ್ಯಾರ್ಥಿಗಳು ಮತ್ತು ಪದವೀಧರರು ತಮ್ಮ ಕಲಿಕೆಯ ಜೊತೆಯಲ್ಲಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವ   ಹವ್ಯಾಸವನ್ನು ರೂಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

ತಾಲೂಕಿನ  ತಿಪ್ಪಯ್ಯನ ಕೋಟೆ ಗ್ರಾಮದಲ್ಲಿ ಗಿಡ ನೆಡುವ ಮೂಲಕ  ಮಾರುತಿ ಕ್ರಿಕೆಟರ್ಸ್ ಕ್ರೀಡಾಕೂಟದ ಪಂದ್ಯಾವಳಿಗೆ  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

 

 

ಪರಿಸರ ಬೆಳೆಸುವ ಕಾರ್ಯ  ಪ್ರತಿಯೊಬ್ಬರೂಅಡಬೇಕು ಗಾಳಿ ಮತ್ತು ನೀರು ಬಹು ಮುಖ್ಯವಾದದ್ದು ಇವತ್ತು ಬಿದ್ದಂತಹ ಮಳೆ ನೀರನ್ನು ನಾವೆಲ್ಲ ಸಂರಕ್ಷಿಸುವ ಅಗತ್ಯವಿರುವ ಗ್ರಾಮದ ಸುತ್ತಮುತ್ತ ಇರುವ ಕೆರೆಕಟ್ಟೆಗಳನ್ನು ವೈಯಕ್ತಿಕ ಶ್ರಮದಿಂದ ಹೆಚ್ಚು ನೀರು ಸಂಗ್ರಹವಾಗುವಂತೆ ಮಾಡಬೇಕಾಗಿದೆ.

ಅಲ್ಪಸ್ವಲ್ಪ ಇರುವ ಕೊಳವೆಬಾವಿ ನೀರನ್ನು ಕೂಡ ಬಳಸಬೇಕು. ಸಾರ್ವಜನಿಕ ಜೀವನದ ಮೌಲ್ಯಕ್ಕೆ ಬೇಕಾಗಿರುವಂತಹ ಯುವಕರು ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ ಇಡೀ ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಮತ್ತು ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಗೋಮಾಳ ಹಳ್ಳ ಕೆರೆಕಟ್ಟೆ ದಾರಿ ಮುಂತಾದ ಸಾರ್ವಜನಿಕ ಸ್ವತ್ತುಗಳನ್ನು ಸಂರಕ್ಷಿಸುವ ಹೊಣೆಗಾರಿಕೆಯೂ ಕೂಡ ಈ ಭಾಗದ ಯುವಕ ಹಾಗೂ ಚುನಾಯಿತ ಪ್ರತಿನಿಧಿಗಳಾಗಿರಬೇಕು. ಈ‌ ಮೂಲಕ ಹೆಚ್ಚು ಸ್ವಾವಲಂಬಿಗಳಾಗಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ   ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡಾಕ್ಟರ್ ಕಾಟಂ ಲಿಂಗಯ್ಯ , ಉಪಾಧ್ಯಕ್ಷ ರಾಜು,ನಾಯಕನಹಟ್ಟಿ ಬಿಜೆಪಿ ಮಂಡಲ ಉಪಾಧ್ಯಕ್ಷ ಶ್ರೀ ರಾಜು ಮತ್ತು ಎನ್ ದೇವರಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಮಕ್ಕಳ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours