ಡಾನ್ ಬೋಸ್ಕೋ ಶಾಲೆಯ ವಿದ್ಯಾರ್ಥಿಗಳು ದಕ್ಷಿಣ ಭಾರತ ರಾಜ್ಯಗಳ ವಿಭಾಗ ಮಟ್ಟಕ್ಕೆ ಆಯ್ಕೆ

 

ಚಿತ್ರದುರ್ಗ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಬೆಂಗಳೂರು, ಡಿ.ಎಸ್.ಇ.ಆರ್.ಟಿ. ಮತ್ತು ಡಯಟ್ ವತಿಯಿಂದ ಇತ್ತೀಚೆಗೆ ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ನಗರದ ಡಾನ್‍ಬೋಸ್ಕೋ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಎಂ.ಡಿ.ಸಫಾನ್‍ಖಾನ್ ಮತ್ತು ಶಾಶ್ವತ್(ಗುಂಪು ವಿಭಾಗ) ದಕ್ಷಿಣ ಭಾರತ ರಾಜ್ಯಗಳ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಕೇರಳದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ವಸ್ತುಪ್ರದರ್ಶನದಲ್ಲಿ ವಿಜೇತರಾಗಿ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

5-ಜಿ ಆಧುನಿಕ ಕೃಷಿ ಯಂತ್ರ ಮಾದರಿ ವಸ್ತು ಪ್ರದರ್ಶನವನ್ನು ಇಸ್ರೋ ಕಂಪನಿಯವರು ಮೆಚ್ಚಿ ಈ ರೀತಿ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಲು ಐದು ಜಿ. ಕೃಷಿ ಯಂತ್ರವನ್ನು ದೊಡ್ಡ ಮಟ್ಟದಲ್ಲಿ ತಯಾರಿಸಲು ಸಫಾನ್‍ಖಾನ್ ಮತ್ತು ಶಾಶ್ವತ್ ಇವರುಗಳನ್ನು ಕಂಪನಿಗೆ ಆಹ್ವಾನಿಸಿ ಸಹಕರಿಸಲು ಕೋರಿದ್ದಾರೆ.
ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವ ಪ್ರತಿಭಾವಂತ ಈ ವಿದ್ಯಾರ್ಥಿಗಳಿಗೆ ಡಾನ್‍ಬೋಸ್ಕೋ ಫಾದರ್ ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರುಗಳು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours