ಸಿದ್ದಯ್ಯನಕೋಟೆ: ಜನಮನ ರಂಜಿಸಿದ “ಜನಪರ ಉತ್ಸವ”

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಫೆ.24:
ಮೊಳಕಾಲ್ಮುರು ತಾಲ್ಲೂಕಿನ ಸಿದ್ದಯ್ಯನಕೋಟೆಯ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠದಲ್ಲಿ ಈಚೆಗೆ ನಡೆದ ಜನಪರ ಉತ್ಸವದಲ್ಲಿ ಜಿಲ್ಲೆಯ ಕಲಾವಿದರು ವಿವಿಧ ಜನಪದ  ಕಲೆಗಳನ್ನು ಪ್ರದರ್ಶಿಸುವ ಮೂಲಕ ಜನಮನ ರಂಜಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸಿದ್ದಯ್ಯನಕೋಟೆಯ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠದಲ್ಲಿ ಹಮ್ಮಿಕೊಂಡಿದ್ದ ಜನಪರ ಉತ್ಸವದಲ್ಲಿ ಗ್ರಾಮೀಣ ಭಾಗದ ಸಂಸ್ಕøತಿ, ಸಂಪ್ರದಾಯ ಬಿಂಬಿಸುವ ಜನಪದ ಕಲೆಗಳ ವೈಭವ, ಜಾನಪದ ಸೊಗಡು ಅನಾವರಣಗೊಂಡಿತು.
 ಹೊಸದುರ್ಗದ ಕಂಠೇಶ್ ಮತ್ತು ತಂಡದವರ ಕ್ರಾಂತಿಗೀತೆಗಳು, ಚಿಕ್ಕೋಬನಹಳ್ಳಿಯ ಮಾರಕ್ಕ ಮತ್ತು ತಂಡದವರ ತತ್ವಪದಗಳು, ಸಿದ್ದಯ್ಯನಕೋಟೆ ನುಂಕೇಶ್ ಮತ್ತು ತಂಡದವರ ವಚನ ಗಾಯನ, ಕೋನಸಾಗರದ ಶಿವಣ್ಣ ಮತ್ತು ಸಂಗಡಿಗರ ಕನ್ನಡ ಗೀತೆ ಗಾಯನ, ಮೊಳಕಾಲ್ಮುರಿನ ಲೋಕೇಶ್ ಮತ್ತು ತಂಡದವ ಜಾನಪದ ಗೀತೆ, ಚಳ್ಳಕೆರೆ ಮುತ್ತುರಾಜ್ ಮತ್ತು ತಂಡದವರ ಭಾವಗೀತೆ, ಚಿಕ್ಕೋನಹಳ್ಳಿಯ ಸಿ.ಎಂ.ಬಾಬು ಮತ್ತು ತಂಡದವರ ಜಾನಪದ ಸಂಗೀತ, ಚಿತ್ರದುರ್ಗದ ನಿರ್ಮಲ ಮತ್ತು ತಂಡದವರ ಸಮೂಹ ನೃತ್ಯ, ಕೆ.ಗಂಗಾಧರ್ ಮತ್ತು ತಂಡದಿಂದ ವಚನ ಸಂಗೀತ, ಮಲ್ಲೂರಹಳ್ಳಿ ರಾಜಣ್ಣ ಮತ್ತು ತಂಡದಿಂದ ರಂಗಗೀತೆಗಳು, ಓಬೇನಹಳ್ಳಿ ಹಿಮಂತರಾಜ್ ಮತ್ತು ತಂಡದಿಂದ ಸುಗಮ ಸಂಗೀತ ಪ್ರಸ್ತುತ ಪಡಿಸಲಾಯಿತು.
ಜಾನಪದ ಕಲಾತಂಡಗಳ ಅದ್ದೂರಿ ಮೆರವಣಿಗೆ: ಜನಪರ ಉತ್ಸವದ ಅಂಗವಾಗಿ ಸಿದ್ದಯ್ಯನಕೋಟೆ ಗ್ರಾಮದಲ್ಲಿ  ಜಾನಪದ ಕಲಾತಂಡಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಹುಲ್ಲೂರಿನ ಕೃಷ್ಣಪ್ಪ ಮತ್ತು ತಂಡದವರ ತಮಟೆ, ಹುಲ್ಲೇಹಾಳ್ ಡಿ.ನಾಗರಾಜ್ ಮತ್ತು ತಂಡದವರ ಕಹಳೆ, ಧಾರವಾಡದ ಪ್ರಕಾಶ್ ಮಲ್ಲಿಗೆವಾಡ ಮತ್ತು ತಂಡದ ಜಾನಪದ ನೃತ್ಯ, ವೆಂಕಟೇಶ್ ನಾಯ್ಕ್ ಮತ್ತು ತಂಡದ ನಗಾರಿ, ಚೀಳಂಗಿಯ ಶಿವಕುಮಾರ್ ಮತ್ತು ತಂಡದ ತ್ರಾಷ್, ಹುಲ್ಲೂರು ನಿಂಗಪ್ಪ ಮತ್ತು ತಂಡದವರ ಗಾರುಡಿಗೊಂಬೆ, ಚೀರನಹಳ್ಳಿಯ ದಿನೇಶ್ ಅವರ ನಾಸಿಕ್ ಡೋಲು, ಹಿರಿಯೂರು ಗುರುಮೂರ್ತಿಯವರ ಹಗಲುವೇಷ, ಮುತ್ತಿಗಾರಹಳ್ಳಿಯ ಗಂಗಣ್ಣನವರ ತಮಟೆ ವಾದ್ಯ ಚರ್ಮ, ನೆಲ್ಲೆಕಟ್ಟೆ ತಿಪ್ಪೇಸ್ವಾಮಿ ಅವರ ಅರೆವಾದ್ಯ ಜಾನಪದ ಕಲಾತಂಡಗಳ ಮೆರವಣಿಗೆಗೆ ಹೆಚ್ಚಿನ ಮೆರಗು ನೀಡಿತು.
“ಜನಪರ ಉತ್ಸವ” ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಮಾತನಾಡಿ, ರಾಜ್ಯ ಸರ್ಕಾರ ಪ್ರತಿ ವರ್ಷವೂ ಜನಪರ ಉತ್ಸವನ್ನು ನಡೆಸುತ್ತಿದ್ದು, ತಳಸಮುದಾಯದಲ್ಲಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಕಲಾವಿದರಿಗಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಲಾವಿದರು ಒಂದು ವೇದಿಕೆ ಮೇಲೆ ಸೇರಿ ಜಾನಪದ ಕಲೆಗಳನಲ್ನು ಪ್ರದರ್ಶಿಸಲಾಗುತ್ತದೆ ಮತ್ತು ಕಲಾವಿದರಿಗೆ ಪರಿಶಿಷ್ಟ ಜಾತಿ ಉಪಯೋಜನೆಯಡಿ ಗೌರವಧನ ನೀಡಲಾಗುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳಿದ್ದು, ಗಿರಿಜನ ಉತ್ಸವ, ಚಿಗುರು, ಸಾಂಸ್ಕøತಿಕ ಸೌರಭ, ಯುವ ಸೌರಭ, ಮೂಲಸಂಸ್ಕøತಿ ಕನ್ನಡ ಸಂಸ್ಕøತಿ ಪ್ರಾಯೋಜಿತ ಕಾರ್ಯಕ್ರಮ, ಅಂಬೇಡ್ಕರ್ ಓದು ಬರಹ ಹಾಗೂ ಕಲಾವಿದರಿಗೆ ಮಾಸಾಶನ ನೀಡುವುದು ಇತ್ಯಾದಿ ಯೋಜನೆಗಳಿದ್ದು, ಕಲಾವಿದರು ಇವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಸಿದ್ದಯ್ಯನಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಮಹಾಸ್ವಾಮೀಜಿ ಮಾತನಾಡಿ, ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇನ್ನೂ ಹೆಚ್ಚಿನದಾಗಿ ಕಲೆಗಳನ್ನು ಬೆಳೆಸುವ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲೆಯ ಬಾಲ್ಕಿಯ ಹಿರೇಸಂಸ್ಥಾನ ಮಠದ ನಾಡೋಜ ಶ್ರೀ ಬಸವಲಿಂಗಪಟ್ಟಾಧ್ಯಕ್ಷರು, ಇಳಕಲ್ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮೀಜಿ, ಸಿದ್ದಯ್ಯನಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಮಹಾಸ್ವಾಮೀಜಿ, ಚಿತ್ರದುರ್ಗದ ಬಸವಮುರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಸಿದ್ದಯ್ಯನಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಕಾರ್ಯದರ್ಶಿ ಪಿ.ಆರ್.ಕಾಂತರಾಜ್, ಜಾನಪದ ಕಲಾವಿದರು ಹಾಗೂ ರಾಜ್ಯ ಮಾಶಾಸನ ಸಮಿತಿ ಸದಸ್ಯ ಡಿ.ಓ.ಮುರಾರ್ಜಿ, ಜಾನಪದ ಕಲಾವಿದ ಪ್ರಕಾಶ್ ಮಲ್ಲಿಗೆವಾಡ ಸೇರಿದಂತೆ ಮತ್ತಿತರರು ಇದ್ದರು.
[t4b-ticker]

You May Also Like

More From Author

+ There are no comments

Add yours