ನೂತನ ಪೀಠಾಧಿಪತಿಯಾಗಿ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ನೇಮಕ

 

ಚಿತ್ರದುರ್ಗಅ.16:chitrdaurga  ಚಿತ್ರದುರ್ಗದ ಐತಿಹಾಸಿಕ  ಮುರುಘಾ ಮಠದ ನೂತನ ಪೀಠಾಧಿಪತಿ ಸ್ಥಾನಕ್ಕೆ ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿಯವರು ನೇಮಕವಾಗುವ ಸಾಧ್ಯತೆ ಇದ್ದು ಮುರಘಾ ಮಠದಲ್ಲಿ ದೀಕ್ಷೆ ಪಡೆದಿರುವ ಇತರೆ ಸ್ವಾಮೀಜಿಗಳಿಂದ ಅಪಸ್ವರ ಕೇಳಿಬಂದಿದೆ.

 

ಬಸವಪ್ರಭು ಸ್ವಾಮೀಜಿಗಳನ್ನು ಜೈಲಿನಲ್ಲಿರುವ ಶಿವಮೂರ್ತಿ ಶರಣರೇ ಆಯ್ಕೆ ಮಾಡಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ  ಬಂದರೆ ಪುನಃ ಶರಣರಿಗೆ ಸ್ಥಾನ ಬಿಟ್ಟುಕೊಡಬೇಕು ಹಾಗೂ ಶರಣರ ಕೋರ್ಟ್ ಖರ್ಚು ಸೇರಿದಂತೆ ಎಲ್ಲಾ ಆಗು ಹೋಗುಗಳನ್ನು ನೋಡಿಕೊಳ್ಳಬೇಕು ಎಂಬ ಸೂಚನೆಯ ಮೇರೆಗೆ ಬಸವಪ್ರಭು ಸ್ವಾಮೀಜಿಯವರನ್ನು ಶರಣರು ಆಯ್ಕೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಬಸವಪ್ರಭು ಸ್ವಾಮೀಜಿ ಆಯ್ಕೆ ಸಮ್ಮತವಲ್ಲ ಹಾಗೂ ಅವರಿಗೆ ಮಠವನ್ನು ಮುನ್ನಡೆಸುವ  ಸಾಮರ್ಥ್ಯವೂ ಇಲ್ಲ ಎಂದು ಕೆಲವು ಸ್ವಾಮೀಜಿಗಳು ಹಾಗೂ ವೀರಶೈವ ಮುಖಂಡರು ಅಪಸ್ವರ ತೆಗೆದಿದ್ದು ಬಸವಪ್ರಭು ಸ್ವಾಮೀಜಿ ಆಯ್ಕೆ ನ್ಯಾಯ ಸಮ್ಮತವಲ್ಲ ಎಂಬ ಮಾತುಗಳು ಕೇಳಿಬಂದಿವೆ.

[t4b-ticker]

You May Also Like

More From Author

+ There are no comments

Add yours