ಬಾಪೂಜಿ ಆರ್ಯುವೇದಿಕ್ ಕಾಲೇಜು ಮತ್ತು ಆಸ್ಪತ್ರೆಯ ಸೇವೆ ಶ್ಲಾಘನೀಯ : ಶಾಸಕ ಟಿ. ರಘುಮೂರ್ತಿ ಬಣ್ಣನೆ.

 

 

 

 

ಚಳ್ಳಕೆರೆ-೨೩ ಕರ್ನಾಟಕ ರಾಜ್ಯದ ಆರ್ಯುವೇದ ವಿಭಾಗದಲ್ಲಿ ಶಿಕ್ಷಣ ಮತ್ತು ಚಿಕಿತ್ಸೆ ನೀಡುವ ಮೂಲಕ ನಗರದ ಬಾಪೂಜಿ ಆರ್ಯುವೇದಿಕ್ ಕಾಲೇಜು ಮತ್ತು ಆಸ್ಪತ್ರೆ ಉತ್ತಮ ಸಾಧನೆಯನ್ನು ಮಾಡಿದೆ. ಪ್ರತಿವರ್ಷ ಆರ್ಯುವೇದ ಶಿಕ್ಷಣದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ನೀಡಿ ಅವರೂ ಸಹ ವೈದ್ಯಕೀಯ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟಿದೆ. ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಡಿ.ಮಂಜುನಾಥ, ಪ್ರಸ್ತುತ ಕಾರ್ಯದರ್ಶಿ ಎಂ.ಜಗದೀಶ್ ಹಾಗೂ ಆಡಳಿತಾಧಿಕಾರಿ ಜಿ.ಬಾಲರೆಡ್ಡಿಯವರ ಸೇವೆ ಮತ್ತು ಶ್ರಮ ಸಾರ್ಥಕವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

 

 

ಅವರು, ಬುಧವಾರ ಕಾಲೇಜಿನ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ೨೦೨೩ನೇ ವರ್ಷದ ಆರ್ಯುವೇದ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಜನರ ಆರೋಗ್ಯವನ್ನು ಸದಢೃಗೊಳಿಸಲು ಆರ್ಯುವೇದ ಮಹಾವಿದ್ಯಾಲಯಗಳು ಕಾರ್ಯಾರಂಭ ಮಾಡಿವೆ. ವಿಶೇಷವಾಗಿ ಬಾಪೂಜಿ ಆರ್ಯುವೇದಿಕೆ ಆಸ್ಪತ್ರೆ ಕಳೆದ ೩೦ ವರ್ಷಗಳಿಂದ ತನ್ನ ಸೇವೆ ಮಾಡುವ ಮೂಲಕ ಜನರ ವಿಶ್ವಾಸ ಗಳಿಸಿದೆ. ವೈದ್ಯಕೀಯ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಆರ್ಯುವೇದ ಚಿಕಿತ್ಸೆ ಪಡೆದು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಲು ಪ್ರೇರಣೆಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಹುಬ್ಬಳಿಯ ಸಂಜಯ್ ಆರ್ಯುವೇದಿಕ್ ಕಾಲೇಜು ಪ್ರಾಂಶುಪಾಲ ಶ್ರೀನಿವಾಸ್ ಬನಿಗೋಳ, ಬಾಪೂಜಿ ಆರ್ಯುವೇದಿಕ್ ಕಾಲೇಜು ಮತ್ತು ಆಸ್ಪತ್ರೆ ಹಲವಾರು ಆರ್ಯುವೇದ ಚಿಕಿತ್ಸೆ ಮೂಲಕ ರಾಜ್ಯದ ಗಮನ ಸೆಳೆದಿದೆ. ಈ ಸಂಸ್ಥೆ ಇಂದು ರಾಜ್ಯಮಟ್ಟದಲ್ಲಿ ಖ್ಯಾತಿಯಾಗಲು ಆಡಳಿತ ಮಂಡಳಿಯ ಕಾರ್ಯದರ್ಶಿ, ಆಡಳಿತಾಧಿಕಾರಿ ಸೇರಿದಂತೆ ಎಲ್ಲರೂ ಶ್ರಮಿಸಿದ್ದಾರೆ. ಇಂದು ಪದವಿ ಪಡೆದು ಸಾರ್ವಜನಿಕ ಸೇವೆಗೆ ತೆರಳುತ್ತಿರುವ ಎಲ್ಲಾ ವೈದ್ಯರು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಸಮಾಜ ಸೇವೆಗೆ ಮುಂದಾಗಬೇಕೆAದು ತಿಳಿಸಿದರು.
ಕಾರ್ಯದರ್ಶಿ ಎಂ.ಜಗದೀಶ್ ಮಾತನಾಡಿ, ಬಾಪೂಜಿ ಆರ್ಯುವೇದಿಕ್ ಕಾಲೇಜು, ಶಿಕ್ಷಣ ಸಂಸ್ಥೆ ಇಂದು ಗಟ್ಟಿಯಾಗಿ ನೆಲೆಯೂರಿದೆ. ಚಿಕಿತ್ಸೆಯ ಜೊತೆಗೆ ಶಿಕ್ಷಣವನ್ನೂ ನೀಡುವ ಮೂಲಕ ಸಮಾಜದಲ್ಲಿ ಎಲ್ಲರ ಮನಗೆಲ್ಲಲು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲೂ ಈ ಸಂಸ್ಥೆ ತನ್ನ ಕಾರ್ಯಚಟುವಟಿಕೆಯನ್ನು ಇನ್ನಷ್ಟು ಉತ್ಸಾಹದಿಂದ ಮುಂದುವರೆಸಲಿದೆ ಎಂದರು.
ಆಡಳಿತಾಧಿಕಾರಿ ಜಿ.ಬಾಲರೆಡ್ಡಿ ಮಾತನಾಡಿ, ಬಾಪೂಜಿ ಆರ್ಯುವೇದಿಕ್ ಕಾಲೇಜು ಮತ್ತು ಆಸ್ಪತ್ರೆ, ಶಿಕ್ಷಣ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಎಲ್ಲರ ಸಹಕಾರ ಮುಖ್ಯವಾಗಿದೆ. ವಿಶೇಷವಾಗಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರು ವಿದ್ಯಾರ್ಥಿಗಳ ಶ್ರೇಯೋಭಿವೃಧ್ದಿಗೆ ಮೊದಲ ಆದ್ಯತೆ ನೀಡುತ್ತಾ ಬಂದಿದ್ದಾರೆ. ಕೊರೋನಾ ಸಂದರ್ಭದಲ್ಲೂ ಸಹ ಬಾಪೂಜಿ ಆಸ್ಪತ್ರೆಯಿಂದ ರೋಗಿಗಳ ಸೇವೆಯನ್ನು ನಮ್ಮ ಸಂಸ್ಥೆ ವೈದ್ಯರು ಉತ್ತಮವಾಗಿ ಮಾಡಿದರು. ಮುಂದಿನ ದಿನಗಳಲ್ಲಿ ಮತ್ತಷ್ಟು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲು ನಾವು ಸಿದ್ದರಿದ್ದೇವೆ ಎಂದರು.
ಸಂಸ್ಥೆಯ ಪ್ರಾಂಶುಪಾಲ ಬಸವರಾಜು, ಡೀನ್ ಲಕ್ಷಿö್ಮನಾರಾಯಣ, ಡಾ.ಸುನೀಲ್‌ಕುಮಾರ್, ಡಾ.ಚಂದ್ರಪ್ಪ, ಡಾ.ಎಚ್.ಎಂ.ಅರುಣ್, ಡಾ.ಲೀಲಾವತಿ, ಡಾ.ಸುಪ್ರೀಯ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours