ಎಸ್ಸಿ, ಎಸ್ಟಿ ಸಮಾಜವನ್ನು ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ: ಡಾ.ಜಿ.ಪರಮೇಶ್ವರ್

 

ಚಿತ್ರದುರ್ಗ:ಎಸ್ಸಿ, ಎಸ್ಟಿ ಸಮಾಜವನ್ನು ಬಿಜೆಪಿಯ ರಾಜ್ಯ ಮತ್ತು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್  ಆರೋಪಿಸಿದರು‌.
ನಗರದ ಐಶ್ವರ್ಯ ಫೋರ್ಟ್ ನಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ  ಮಾತನಾಡಿ ಚಿತ್ರದುರ್ಗದಲ್ಲಿ ಐತಿಹಾಸಿಕ ಕಾರ್ಯಕ್ರಮ ಮಾಡಲಾಯಿತು. ಎಸ್ಸಿ, ಎಸ್ಟಿ ಸಮುದಾಯದ ಸಮಾವೇಶಕ್ಕೆ ಎಲ್ಲಾರೂ ಸಹಕಾರ ನೀಡಿದ್ದಕ್ಕೆ ಧನ್ಯವಾದಗಳು.
ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಿನಿಂದ
ಕಾರ್ಯಕ್ರಮ ಯಶಸ್ಸಿಗೆ ಸಹಕಾರ ನೀಡಿದ್ದಾರೆ.
ಪ್ರಸ್ತುತ ಆಡಳಿತ ಇರುವ ಬಿಜೆಪಿ ಎಸ್ಸಿ, ಎಸ್ಟಿ ಸಮುದಾಯದ ಬಗ್ಗೆ  ನಿರ್ಲಕ್ಷ್ಯ ತೋರಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅವಕಾಶ ನೀಡುತ್ತಿಲ್ಲ. ಪರಿಶಿಷ್ಟ ಜಾತಿ101 ಜಾತಿ, ಪರಿಶಿಷ್ಟ ಪಂಗಡದಲ್ಲಿ 51 ಜಾತಿಗಳಿದ್ದು  ಎಲ್ಲಾರೂ ಒಗ್ಗಟ್ಟಾಗಬೇಕು. ಜನರು ಸಾಮಾಜಿಕವಾಗಿ ಈ ಸಮುದಾಯಗಳನ್ನು  ಸಮಾನವಾಗಿ ಕಾಣಬೇಕು. ಇಂತಹ ದೊಡ್ಡ ಮಹತ್ವಾಕಾಂಕ್ಷೆ ಒತ್ತು ಕಾಂಗ್ರೆಸ್ ಸಾಗುತ್ತಿದೆ.  ನಮ್ಮ ಸಮಾವೇಶಕ್ಕೆ 4 ಲಕ್ಷಕ್ಕಿಂತ ಹೆಚ್ಚಿನ ಜನರು ಬಂದಿದ್ದು ಅಭೂತಪೂರ್ವ ಬೆಂಬಲ ನೀಡಿದ್ದಾರೆ.ಸಮಾವೇಶಕ್ಕೆ ಬಂದ ಎಲ್ಲಾರೂ  ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂಬ ಗುರಿಯೊಂದಿಗೆ ವಾಪಸ್ ತೆರಳಿದ್ದಾರೆ. ನಾವೆಲ್ಲರೂ ಒಂದಾಗಬೇಕು ಎಂಬ ಭಾವನೆ ಎಸ್ಸಿ ಮತ್ತು ಎಸ್ಟಿ ಸಮುದಾಯದಲ್ಲಿ ಬಂದಿದೆ‌. ನಮ್ಮ ಉದ್ದೇಶ ಸಫಲವಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ದಶ ಘೋಷಣೆ ಮಾಡಿದೆ.  ಹತ್ತು ಘೋಷಣೆಯನ್ನು ಆದ್ಯತೆ ಮೇಲೆ ಮಾಡಲಾಗುತ್ತದೆ. ರಾಜ್ಯದ ಜನರ ಮುಂದೆ ಹತ್ತು ಭರವಸೆಗಳನ್ನು ಕಾರ್ಯಗತಗೊಳಿಸುತ್ತೇವೆ ಎಂದು ಪ್ರತಿಜ್ಞೆ ಮಾಡಲಾಗುತ್ತದೆ‌.
ಜನರ ವಿಶ್ವಾಸದ ಮೇಲೆ ದಶ ಘೋಷಣೆ ಮಾಡಲಾಗಿದೆ. ರಾಜ್ಯ ಎಲ್ಲಾ ಜಿಲ್ಲೆಯಿಂದ ಬಂದ ಮುಖಂಡರು ಮತ್ತು ಕಾರ್ಯಕರ್ತರಿಗೆ  ಧನ್ಯವಾದಗಳು.
ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ ಸಾಮಾನ್ಯ ಜನರಿಗೆ ಬದುಕಲು ಮತ್ತು ವಸ್ತುಗಳನ್ನು ಕೊಂಡುಕೊಳ್ಳಲು ಆಗುತ್ತಿಲ್ಲ. ಜನರು ಕಾಂಗ್ರೆಸ್ ಇಸ್ ಕಮ್ ಬ್ಯಾಕ್ ಎಂಬ ಬಯಕೆಯನ್ನು ಆಡುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರದಲ್ಲಿ ಜನರು ಬದುಕುತ್ತಿಲ್ಲ. ಸಂವಿಧಾನದ ಅವಕಾಶವನ್ನು  ದುರ್ಬಲಗೊಳಿಸುವ ತಂತ್ರ ನಡೆಯುತ್ತಿದೆ. ಜನರ ತಮ್ಮ ಹಕ್ಕುಗಳನ್ನು  ಕಳೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸಂವಿಧಾನದ ಆಶಯವನ್ನು ಕಾಪಡುವ ಕಡೆ ಹೆಜ್ಜೆ ಹಾಕುತ್ತಿದೆ. ಕರ್ನಾಟಕ ಬಿಜೆಪಿ ಆಡಳಿತದಿಂದ  ಅಭಿವೃದ್ಧಿ  20 ವರ್ಷ  ಹಿಂದಕ್ಕೆ ಸಾಗಿದೆ. ಸಂವಿಧಾನದ ಬಲವರ್ಧನೆ ಮತ್ತು ಪ್ರಜಾಸತ್ತಾತ್ಮಕ ಆಡಳಿತ ನಡೆಸಲು ನಾವು ಸಿದ್ದವಾಗಿದ್ದೇವೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಸಿ‌.ಮಹದೇವಪ್ಪ, ಆಂಜನೇಯ, ಮಾಜಿ ಸಂಸದರಾದ ಉಗ್ರಪ್ಪ, ಚಂದ್ರಪ್ಪ,  ಶಾಸಕರಾದ ಟಿ.ರಘುಮೂರ್ತಿ,  ಪರಮೇಶ್ವರನಾಯ್ಕ,
ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್,ಉಮಾಪತಿ, ಎಂಎಲ್ಸಿ ರಘುಆಚಾರ್ , ಜಿಲ್ಲಾಧ್ಯಕ್ಷ ತಾಜ್ ಪೀರ್ ಮತ್ತು ಸ್ಥಳೀಯ ಮುಖಂಡರು ಇದ್ದರು.
[t4b-ticker]

You May Also Like

More From Author

+ There are no comments

Add yours