ಖ್ಯಾತ ಗಾಯಕ ಎಸ್. ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿರ.

 

ಚೆನ್ನೈ: ಆ.22: ಕೋವಿಡ್ ಸೋಂಕು ಮತ್ತು ಶ್ವಾಸಕೋಶದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಗಾಯಕ ಎಸ್. ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ದಿನದಿಂದ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಸ್ಥಿರವಾಗಿದೆ.
ಆಗಸ್ಟ್ 5 ರಂದು ಎಂ.ಜಿ.ಎಂ ಆಸ್ಪತ್ರೆಗೆ ‌ದಾಖಲಾಗಿದ್ದರು. ಇತ್ತೀಚೆಗೆ ಆರೊಗ್ಯದಲ್ಲಿ ತೀವ್ರ ಏರುಪೇರಾದ ಹಿನ್ನೆಲೆಯಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಬಗ್ಗೆ ಜಾಲತಾಣಗಳಲ್ಲಿ ವದಂತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಿಸಲಾಗಿದೆ.
ವೆಂಟಿಲೇಟರ್, ‌ಎಲೆಕ್ಟೋ ಮಿಷನ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಶ್ವಾಸ ಕೊಶ ತಜ್ಞರು ತೀವ್ರ ನಿಘಾ ಇಟ್ಟಿದ್ದಾರೆ. ‌ಚಿಕಿತ್ಸೆಗೆ ಇಂಗ್ಲೆಂಡ್ ಮತ್ತು ವೈದ್ಯರ ನೆರವು ಪಡೆಯಲಾಗುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ.
200 ಸ್ಟಾರ್ ಗಳಿಗೆ ಎಸ್ ಪಿಬಿ ಹಾಡು
ಕನ್ನಡ, ತೆಲುಗು, ತಮಿೞು ಸೇರಿದಂತೆ ಭಾರತೀಯ ಭಾಷೆಯ ಚಿತ್ರಗಳಿಗೆ 50 ವರ್ಷದಿಂದ ಹಾಡಿರುವ ಬಾಲಸುಬ್ರಹ್ಮಣ್ಯಂ ಅವರು 40 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಹೊಸಬರೂ ಹಳಬರು ಇದ್ದು ಸರಿ ಸುಮಾರು 200 ಮಂದಿ ಸ್ಟಾರ್ ನಟರಿಗೆ ಹಾಡು ಹಾಡಿದ ಹೆಗ್ಗಳಿಕೆ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರದು.
ಸ್ಟಾರ್ ಗಳಿಗೆ ಬೇರೆ ಬೇರೆ ಧ್ವನಿಯಲ್ಲಿ ಹಾಡು ಹಾಡಿ ಹೊಸ ಇತಿಹಾಸ ಬರೆದಿದ್ದಾರೆ.
ಕನ್ನಡದಲ್ಲಿ 7 ಚಿತ್ರಗಳೂ ಸೇರಿದಂತೆ ವಿವಿಧ ಭಾಷೆಯಲ್ಲಿ 72 ಚಿತ್ರಗಳಲ್ಲಿ ನಟಿಸಿ ನಟನೆಗೂ ಸೈ ಎನ್ನುವುದನ್ನು ಹಾಡಲು ಜೈ ಎಂದು ಸಾಬೀತುಪಡಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours