ನಮ್ಮ‌ ಬಿಜೆಪಿ ಸರ್ಕಾರ ನುಡಿದಂತೆ ನಡೆಯುವ ಮೂಲಕ ಎಸ್ಸಿ ಮತ್ತು  ಎಸ್ಟಿ ಸಮಾಜಕ್ಕೆ ಮೀಸಲು ಘೋಷಣೆ: ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ಅ:9: ನಮ್ಮ‌ಬಿಜೆಪಿ ಸರ್ಕಾರ ನುಡಿದಂತೆ ನಡೆಯುವ ಮೂಲಕ ಎಸ್ಸಿ ಮತ್ತು  ಎಸ್ಟಿ  ಸಮಾಜದ ಮೀಸಲಾತಿ ಹೆಚ್ಚಿಸಿ ತಳ  ಸಮಾಜಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ  ಎಂದು ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ಹರ್ಷ ವ್ಯಕ್ತಪಡಿಸಿದರು.

 

 

ನಗರದ ವಾಲ್ಮೀಕಿ ಭವನ ಮುಂಭಾಗದ  ಮದಕರಿನಾಯಕ ನಾಯಕ ಪ್ರತಿಮೆ ಬಳಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಮೀಸಲಾತಿ ಹೆಚ್ಚಿಸಿ ಜಸ್ಟಿಸ್ ನಾಗಮೋಹನ್ ದಾಸ್ ವರದಿ ಜಾರಿಗೊಳಿಸಿದ ಹಿನ್ನಲೆಯಲ್ಲಿ ಶಾಸಕರ ನೇತೃತ್ವದಲ್ಲಿ ‌ ಬಿಜೆಪಿ ಎಸ್ಟಿ ಮೋರ್ಚಾ ಮುಖಂಡರು  ಮಾಲರ್ಪಣೆ ಮಾಡಿ ಸಿಹಿ ಹಂಚಿ ಮಾತನಾಡಿದರು.
ವಾಲ್ಮೀಕಿ ಸಮಾಜಕ್ಕೆ 3 ರಿಂದ 7  ಕ್ಕೆ ರಷ್ಟು  ಮೀಸಲಾತಿ ಮತ್ತು ಪರಿಶಿಷ್ಟ ಜಾತಿಗೆ 15 ರಿಂದ 17 ಕ್ಕೆ ಮೀಸಲಾತಿ ಹೆಚ್ಚಿಸುವ ವಿಚಾರಕ್ಕೆ ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ  ಸಿಎಂ ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪ, ಸಚಿವ ಬಿ.ಶ್ರೀರಾಮುಲು, ಅರುಣ್ ಸಿಂಗ್,  ನಳೀನ್ ಕುಮಾರ್ ಕಟೀಲ್, ಸಿ.ಟಿ.ರವಿ ಸೇರಿ ಎಲ್ಲಾರೂ ಒಮ್ಮತದಿಂದ ಕೋರ್ ಕಮಿಟಿ ಸಭೆಯಲ್ಲಿ ಸಚಿವ ಸಂಪುಟದಲ್ಲಿ  ಸಿಎಂ ಬಸವರಾಜ್ ಬೊಮ್ಮಾಯಿ ಮಂಡಿಸಿ ಒಪ್ಪಿಗೆ ಸೂಚಿಸುವ ಮೂಲಕ ನಾಗಮೋಹನ ದಾಸ್ ವರದಿ‌ ಯಾಥ ಒತ್ತಾಗಿ ಜಾರಿಗೊಳಿಸಲು  ರಾಜ್ಯ ಸರ್ಕಾರ ತಿರ್ಮಾನ‌ ಮಾಡಿರುವುದು ಸಂತಸದ ಸುದ್ದಿಯಾಗಿದೆ.
ವಿಶೇಷವಾಗಿ ವಾಲ್ಮೀಕಿ ಸಮಾಜದ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ಎಸ್ಸಿ ಮತ್ತು ಎಸ್ಟಿ ಮೀಸಲಾತಿಯನ್ನು ನಾಗಮೋಹನ್ ದಾಸ್ ವರದಿ ಯಾಥ ಒತ್ತಾಗಿ ಜಾರಿಗೊಳಿಸಲು ಒತ್ತಾಯಿಸಿ ಕಳೆದ 240 ದಿನಗಳಿಂದ ಧರಣಿ ಸತ್ಯಾಗ್ರಹ ಮಾಡತ್ತಿದ್ದು ಅವರ ಸಮಾಜ ಪರ ಕಾಳಜಿ ನಮ್ಮ ಸರ್ಕಾರ ನ್ಯಾಯ ಒದಗಿಸುವ ಕೆಲಸ ಮಾಡಿದೆ ಎಂದರು.
ಅನೇಕ ಸರ್ಕಾರಗಳು ಬದಲಾವಣೆ ಆದರು ಸಹ ಯಾರು ಮೀಸಲಾತಿ ಹೆಚ್ಚಿಸುವ ಧೈರ್ಯ ಮಾಡಲಿಲ್ಲ. ಆದರೆ  ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ವಾಲ್ಮೀಕಿ ಸಮಾಜದ ಬೇಡಿಕೆ ಹಿಡೇರಿಸಲಾಗುತ್ತದೆ ಎಂದು ಭರವಸೆ ನೀಡಿತ್ತು ಅದರಂತೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಿಸಿದೆ. ಇದಕ್ಕೆ ಮಾಜಿ ಸಿಎಂ  ಯಡಿಯೂರಪ್ಪ ಅವರು ಸಿಎಂ ಆದ  ಸಂದರ್ಭದಲ್ಲಿ ಜಸ್ಟಿಸ್  ನಾಗಮೋಹನ್ ದಾಸ್ ವರದಿ ಪೂರ್ಣವಾಗಿ ಪರಿಶೀಲಿಸಿ ಈಗ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಿಸಿದ್ದಾರೆ. ಇದಕ್ಕೆ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಸಹ ಸಾಕಷ್ಟು ಶ್ರಮ ವಹಿಸಿದ್ದಾರೆ.
ರಾಜಕೀಯದಲ್ಲಿ‌ ಈಗಾಗಲೇ ಮೀಸಲಾತಿ ಪಡೆಯುತ್ತಿರುವ ಪರಿಶಿಷ್ಟ ಪಂಗಡ ಜನಾಂಗ ಕೇಂದ್ರ ಸರ್ಕಾರದ ಪಡೆಯುತ್ತಿರುವ ಮೀಸಲಾತಿಯನ್ನು  ರಾಜ್ಯದಲ್ಲಿ ಶಿಕ್ಷಣ  ಮತ್ತು ಉದ್ಯೋಗದಲ್ಲಿ ಕಲ್ಪಿಸುವ ಮುಖಾಂತರ ಸಮಾಜದ ಅಭಿವೃದ್ಧಿ ಬದ್ದವಾಗಿದೆ ಎಂಬ ಸಂದೇಶ ರಾವನಿಸಿದೆ.
ನಾನು ಸಹ ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳ ಭೇಟಿ ಮಾಡಿ ನಮ್ಮ‌ ಸರಕಾರ  ಮತ್ತು ನಾವು ನಿಮ್ಮ ಜೊತೆ ಇದ್ದೇವೆ ಎಂಬ ಅಭಯ ನೀಡಿದ್ದೆ ಅನೇಕ ಬಾರಿ ಆರೋಗ್ಯ ಬಗ್ಗೆ ಕಾಳಜಿ‌ ವಹಿಸಿ‌ ಎಂದು ತಿಳಿಸಿದ್ದೆ ಅವರ ಹೋರಟಕ್ಕೆ ಯಶಸ್ಸು ದೊರಕಿದೆ ಎಂದರು.
ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪಾಪೇಶ್ ನಾಯಕ ಮಾತನಾಡಿ ಕಳೆದ 40 ವರ್ಷಗಳ ಬೇಡಿಕೆ ಇಂದು ಹಿಡೇರಿದೆ. ನಮ್ಮ ಸಮಾಜದ ಮೀಸಲಾತಿ ಹೆಚ್ಚಿಸಿದ ಬಿಜೆಪಿ ಸರ್ಕಾರಕ್ಕೆ  ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸದಾ ಋಣಿಯಾಗಿರುತ್ತೇವೆ.‌ಸಚಿವ ಬಿ.ಶ್ರೀರಾಮುಲು ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.ಸಾಕಷ್ಟು ಕಷ್ಟ ಪಟ್ಟು ಸಮಾಜಕ್ಕೆ ಮೀಸಲಾತಿ ಕೊಡಿಸುವಲ್ಲಿ ಶ್ರೀರಾಮುಲು ಅವರ ಪಾತ್ರ ದೊಡ್ಡದು‌ ಇದಕ್ಕೆ  ಸಹಕಾರ ನೀಡಿದ ಎಲ್ಲಾ ಶಾಸಕರಿಗೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಸಮಾಜದ ಪರವಾಗಿ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ  ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಶಿವಣ್ಣ, ಮುಖಂಡರಾದ ಮಂಜುನಾಥ್, ತಿಮ್ಮಣ್ಣ, ಸೋಮೇಂದ್ರ, ತಿಪ್ಪೇಸ್ವಾಮಿ, ಸಿ.ಬಿ. ಮೋಹನ್ ಮತ್ತು ಸಮಾಜದ ಮುಖಂಡರು ಇದ್ದರು.
[t4b-ticker]

You May Also Like

More From Author

+ There are no comments

Add yours